ಭ್ರೂಣ ಲಿಂಗ ಪತ್ತೆ ನಿಷೇಧ ಕಾಯ್ದೆ ಕುರಿತು ಮಾಹಿತಿ ಕಾರ್ಯಕ್ರಮ

Update: 2016-03-29 19:11 GMT

ಉಡುಪಿ, ಮಾ.29: ಬಜಗೋಳಿ ಪ್ರಾಥಮಿಕ ಆರೋಗ್ಯ ಕೇಂದ್ರ, ಪರಪ್ಪಾಡಿ ಅಂಬೇಡ್ಕರ್ ಭವನ ಮತ್ತು ಬೀರಲ್‌ಪೇಟೆ ಅಂಗನವಾಡಿ ಕೇಂದ್ರಗಳಲ್ಲಿ ಭ್ರೂಣ ಲಿಂಗ ಪತ್ತೆ ನಿಷೇಧ ಕಾಯ್ದೆ, ಸಾಂಕ್ರಾಮಿಕ-ಅಸಾಂಕ್ರಾಮಿಕ ಕಾಯಿಲೆಗಳು, ಪಿಪಿಐಯುಸಿಡಿ, ಎನ್‌ಎಸ್‌ವಿ ಮತ್ತು ಕ್ಷಯರೋಗದ ಬಗ್ಗೆ ನಡೆದ ಮಾಹಿತಿ ಕಾರ್ಯಕ್ರಮವನ್ನು ನಲ್ಲೂರು ಗ್ರಾಪಂ ಅಧ್ಯಕ್ಷ ವಸಂತ ಮಡಿವಾಳ ಉದ್ಘಾಟಿಸಿದರು.

ಅತಿಥಿಗಳಾಗಿ ಶಾಲಾ ಶಿಕ್ಷಕಿ ವಿದ್ಯಾ, ನಲ್ಲೂರು ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ ನಾಗೇಶ್, ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ನಳಿನಿ, ಗ್ರಾಪಂ ಸದಸ್ಯರಾದ ವನಿತಾ ಮತ್ತು ಸುಕನ್ಯಾ ಉಪಸ್ಥಿತರಿದ್ದರು. ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಶಿಧರ್ ಎಚ್., ಹಿರಿಯ ಆರೋಗ್ಯ ಸಹಾಯಕ ಅಣ್ಣಯ್ಯ ಶೆಟ್ಟಿ, ಶೇಖರ್ ಪೂಜಾರಿ, ಆರ್‌ಎನ್‌ಟಿಸಿಪಿ ಮೇಲ್ವಿಚಾರಕ ಹರಿಪ್ರಸಾದ್, ಎನ್.ಕೆ. ಚೆಲ್ಲು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು. ವಿದ್ಯಾವಿನುತಾ ಕಾರ್ಯಕ್ರಮ ನಿರೂಪಿಸಿದರು. ರಮೇಶ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News