ಮುಂಡಗೋಡ: ಏಪ್ರೀಲ್ 1 ಕ್ಕೆ ಪ.ಪಂ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ

Update: 2016-03-30 09:44 GMT

ಮುಂಡಗೋಡ, ಮಾ. 30 : ಪಟ್ಟಣ ಪಂಚಾಯತ್ ಎರಡನೇ ಅವಧಿಗೆ ಅಧ್ಯಕ್ಷ, ಉಪಾಧ್ಯಕ್ಷ ಆಯ್ಕೆ ಪ್ರಕ್ರಿಯೆ ಶುಕ್ರವಾರ ನಡೆಯಲಿದ್ದು ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ನಿಂದ ರಫೀಕ್ ಇನಾಮದಾರ ಹಾಗು ಅಲ್ಲಿಖಾನ ಪಠಾಣ. ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್‌ನಿಂದ ಸಂಜು ಪಿಶೆ ಹಾಗು ಮೌನೀಶ ಕೊರವರ (ಜೆಡಿಎಸ್‌ನಿಂದ ಕಾಂಗ್ರೆಸ್‌ಗೆ ಸೇರ್ಪಡೆಯಾದ ಪ.ಪಂ ಸದಸ್ಯ), ಉಪಾಧ್ಯಕ್ಷ ಸ್ಥಾನಕ್ಕೆ ಮೊದಲ 15 ತಿಂಗಳ ಅವಧಿಗೆ ಯಾರದರೂ ಆಗಬಹುದಾದರು ಮೌನೇಶ ಕೊರವರ ಮೊದಲಿಗೆ ಉಪಾಧ್ಯಕ್ಷರಾಗುತ್ತಾರೆಂಬುದು ತಳ್ಳಿಹಾಕುವಂತಿಲ್ಲಾ. ಉಪಾಧ್ಯಕ್ಷ ಸ್ಥಾನಕ್ಕೆ ಯಾವುದೇ ಗೊಂದಲ ಇಲ್ಲ ಎಂದು ಗೊಚರಿಸತೊಡಗಿದೆ

    ಆದರೆ ಅಧ್ಯಕ್ಷ ಸ್ಥಾನದ ಪ್ರಭಲ ಅಕಾಂಕ್ಷಿಗಳಾಗಿರುವ ರಫೀಕ್ ಇನಾಮದಾರ ಮತ್ತು ಅಲ್ಲಿಖಾನ ಪಠಾಣ ಉಳಿದಿರುವ 30 ತಿಂಗಳ ಅವಧಿಯನ್ನು ಇಬ್ಬರೂ ತಲಾ 15 ತಿಂಗಳ ಅಧ್ಯಕ್ಷ ಸ್ಥಾನ ಅಲಂಕರಿಸುವುದು ಎಂದು ಪಕ್ಷದ ಹಿರಿಯ ಧುರಿಣರು ತಿರ್ಮಾನಿಸಿದ್ದಾರೆ. ಆದರೆ ಇಬ್ಬರಲ್ಲಿ ಮೊದಲನೇ 15 ತಿಂಗಳು ಅಧ್ಯಕ್ಷ ಸ್ಥಾನ ತನಗೆ ಬೇಕೆಂದು ಅಲ್ಲಿಖಾನ ಪಠಾಣ ತನಗೆ ಬೇಕೆಂದು ರಫೀಕ್ ಇನಾಮದಾರ ಹಠ ಹಿಡಿದಿರುವುದರಿಂದ ಧುರಿಣರಿಗೆ ತಲೆನೋವಾಗಿ ಪರಿಣಿಮಿಸಿದೆ.

ಅಲ್ಲಿಖಾನ ಪಠಾಣ ಕಾಂಗ್ರೆಸ್ ಪಕ್ಷದ ದಿಂದ ಆರಿಸಿ ಬಂದಿರುವುದರಿಂದ ಕಟ್ಟಾ ಕಾಂಗ್ರೆಸಿಗರು ಅಲ್ಲಿಖಾನ ಪಠಾಣ ಮೊದಲ 15 ತಿಂಗಳ ಅವಧಿಯನ್ನು ಅಧ್ಯಕ್ಷ ಸ್ಥಾನ ಅಲಂಕರಿಸಲಿ ಎಂದು ತಿರ್ಮಾನಕ್ಕೆ ಬಂದಿರುವುದರಿಂದ ರಫೀಕ್ ಇನಾಮದಾರ ಗೆ ಈ ಮಾತು ಪಚನವಾಗಿಲ್ಲ ಎಂದು ಗೋಚರಿಸತೊಡಗಿದೆ ರಫೀಕ್ ಇನಾಮದಾರ ತನಗೆ ಮೊದಲು ಅಧ್ಯಕ್ಷ ಸ್ಥಾನ ಸಿಗಲಿ ನಾನೇನು ಪಕ್ಷೇತರನಾಗಿ ಅರಿಸಿಬಂದರು ತಾನು ಮೊದಲಿನಿಂದಲೂ ಕಾಂಗ್ರೆಸಿಗನೇ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಟಿಕೇಟ್ ದೊರೆಯದ ಕಾರಣ ನಾನು ಪಕ್ಷೇತರನಾಗಿ ಆರಿಸಿಬಂದಿದ್ದೇನೆ ಚುನಾವಣೆ ಗೆದ್ದ ನಂತರ ತಾನೂ ಕಾಂಗ್ರೆಸ್ ಪಕ್ಷದ ಅಭಿವೃದ್ದಿಗೆ ದುಡಿದಿದ್ದೇನೆ ದುಡಿಯುತ್ತಾ ಇದ್ದೇನೆ ಎಂದು ಅಧ್ಯಕ್ಷ ಸ್ಥಾನ ತನಗೆ ಮೊದಲು ಬೇಕೆಂದು ಕೇಳುವುದರಲ್ಲಿ ತಪ್ಪೇನಿದೆ ಎಂದು ತನ್ನವರ ಕೂಡ ಚರ್ಚಿಸಿ ತನ್ನ ಬೆಂಬಲದ ಸದಸ್ಯರೊಂದಿಗೆ ಅಜ್ಞಾತ ಸ್ಥಳದಲ್ಲಿದ್ದಾರೆಂದು ಹೇಳಲಾಗಿದೆ.

ಈ ಕುರಿತು ಫೋನಾಯಿಸಿ ಕೇಳಿದಾಗ ತಾವು ತಮ್ಮ ಬೆಂಬಲಿಗರೊಂದಿಗೆ ಬೆಂಗಳೂರಿನಲ್ಲಿದ್ದೇನೆ ಎಂದು ಹೇಳಿದರೂ ಸಹಿತ ಅದು ನಂಬುವ ಹಾಗಿಲ್ಲ. ರಫೀಕ್ ಇನಾಮದಾರರ ಬೆಂಬಲಿಗರು ಅಧ್ಯಕ್ಷ ಆಯ್ಕೆ ಪ್ರಕ್ರಿಯೆಯ ಕೊನೆಯ ಹಂತದ ಸಮಯಕ್ಕೆ ಹಾಜರಾಗುತ್ತಾರೆ ಎಂಬ ಮಾತು ಕೇಳಿ ಬರುತ್ತಿದೆ.

ಹಿರಿಯ ಮುಖಂಡರ ತಿರ್ಮಾನದಂತೆ ಅಲ್ಲಿಖಾನ ಪಠಾಣ ಮೊದಲ ಅವಧಿಗೆ ಅಧ್ಯಕ್ಷರಾಗುತ್ತರೋ ಇಲ್ಲ ಪ.ಪಂ ಸದಸ್ಯರ ಮನಗೆದ್ದು ರಫೀಕ್ ಇನಾಮದಾರ ಅಧ್ಯಕ್ಷರಾಗುತ್ತಾರೋ ಎಂದು ನೋಡಲು ಪಟ್ಟಣ ನಿವಾಸಿಗಳು ತುದಿಗಾಲಮೇಲೆ ನಿಂತಿದ್ದಾರೆ.
 ಪಟ್ಟಣ ಪಂಚಾಯತ ಅಧ್ಯಕ್ಷ ಉಪಾಧ್ಯಕ್ಷ ಆಯ್ಕೆ ಮಾಡುವುದು ಪ.ಪಂ ಸದಸ್ಯರ ಕೈಯಲ್ಲಿದೆ ಅವರ ತಿರ್ಮಾನವೆ ಅಂತಿಮ:
 
ಶಾಸಕರ ತಿರ್ಮಾನವೇ ಅಂತಿಮ ತಿರ್ಮಾನ ಅವರ ಆದೇಶಕ್ಕೆ ಪಕ್ಷದ ಪ.ಪಂ ಸದಸ್ಯರು ಎಲ್ಲರೂ ತಲೆ ಬಾಗುತ್ತಾರೆ ಎಂದು ಎಲ್ಲರಿಗೂ ಗೊತ್ತು. ಆದರೆ ತಮ್ಮ ನೆಚ್ಚಿನ ಶಿಷ್ಯನಿಗೆ ಅವಕಾಶ ಕಲ್ಪಿಸಲು ಪಟ್ಟಣ ಪಂಚಾಯತ್ ಸದಸ್ಯರು ಯಾವ ತಿರ್ಮಾನಕ್ಕೆ ಬರುತ್ತಾರೆ ಎಂಬು ಹೇಳಲು ಸಾಧ್ಯವಿಲ್ಲ.  ಪಟ್ಟಣ ಪಂಚಾಯತ್ ಸದಸ್ಯರ ತಿರ್ಮಾನದಿಂದ ಯಾರು ಮುರ್ಖರಾಗತ್ತಾರೋ ಎಂಬುದನ್ನು ಮುರ್ಖರ ದಿನವಾಗಿರುವ ಏಪ್ರಿಲ್ 1  ರವರೆಗೆ ಕಾಯಬೇಕಾಗಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News