ನಾಳೆಯಿಂದ ಇಚ್ಲಂಗೋಡು ಮಾಲಿಕ್‌ದ್ದೀನಾರ್ ಉರೂಸ್

Update: 2016-03-30 18:15 GMT

 ಮಂಗಳೂರು,ಮಾ.30: ಇಚ್ಲಂಗೋಡು ಮಾಲಿಕ್‌ದ್ದೀನಾರ್ ಉದಯಾಸ್ತಮಾನ ಉರೂಸ್ ಕಾರ್ಯಕ್ರಮವನ್ನು ಎ.1ರ ಸಂಜೆ 6 ಗಂಟೆಗೆ ಸೈಯದ್ ಮುನವ್ವರಲಿ ಶಿಹಾಬ್ ತಂಙಳ್ ಪಾಣಕ್ಕಾಡ್ ಉದ್ಘಾಟಿಸಲಿದ್ದಾರೆ ಎಂದು ಇಚ್ಲಂಗೋಡು ಮಸೀದಿಯ ಖತೀಬ್ ಮುಹಮ್ಮದ್ ಶರೀಫ್ ಆಶ್ರಫಿ ಸುದ್ದಿಗೋಷ್ಠಿಯಲ್ಲಿಂದು ಹೇಳಿದರು.

   ಅಂದು ಸಂಜೆ ರಾಫಿಇಬ್ನ್ ಹಬೀಬ್ ಮಾಲಿಕ್ ದೀನಾರ್ ಅನಾಥಾಲಯ ಮತ್ತು ನಿರ್ಗತಿಕರ ಭವನಕ್ಕೆ ಶಿಲಾನ್ಯಾಸ ನೆರವೇರಲಿದೆ. ಅಂದಿನಿಂದ ಎ.30 ರವರೆಗೂ ನಿತ್ಯ ರಾತ್ರಿ 8 ಗಂಟೆಗೆ ಧಾರ್ಮಿಕ ಪ್ರವಚನಗಳು ನಡೆಯಲಿದೆ. ಎ.22ರಂದುಸಂಜೆ 3 ಗಂಟೆಗೆ ಮತಸೌಹಾರ್ದ ಸಮ್ಮೇಳನ ನಡೆಯಲಿವೆೆ. ಖಾಝಿ ಆಲಿಕುಟ್ಟಿ ಮುಸ್ಲಿಯಾರ್, ಸೈಯದ್ ಅಲಿ ತಂಙಳ್ ಕುಂಬೋಲ್, ಯಾಸೀನ್ ಚೌಹರಿ ಕೊಲ್ಲಂ, ಅಬ್ದುಲ್ ಕರೀಂ ಕುಂತೂರು, ಮುಳ್ಳುರ್ಕೆರೆ ಮುಹಮ್ಮದಾಲಿ ಸಖಾಪಿ, ಖಾಲಿದ್ ಉವೈಸಿ ಇಡುಕ್ಕಿ, ಸಲೀಂ ಫೈಝಿ ಇರ್ಫಾನಿ ಮಟ್ಟನ್ನೂರು, ಮುಸ್ತಫಾ ಹುದವಿ ಅಕೋಡ್, ಇ.ಪಿ.ಅಬೂಬಕರ್ ಅಲ್ ಖಾಸಿಮಿ ಪತ್ತಾನಾಪುರ, ಅಲ್ ಹಾಫಿಝ್ ಸಿರಾಜುದ್ದೀನ್ ಅಲ್ ಖಾಸಿಮಿ ಪತ್ತಾನಾಪುರ, ಅನ್ವರ್ ಮೊಹಿಯುದ್ದೀನ್ ಹುದವಿ ಆಲುವ, ಬಾಯಾರ್ ಪೊನ್ನಂಗಳ ಇಂಬಿಚ್ಚಿಕೋಯ ತಂಙಳ್, ಉಳ್ಳಾಲ ಫಝಲ್ ಕೋಯಮ್ಮ ತಂಙಳ್ ಕೂರಾ, ಪೆರೋಡ್ ಅಬ್ದುರಹ್ಮಾನ್ ಸಖಾಫಿ, ಎ.ಪಿ.ಅಬೂಬಕರ್ ಮುಸ್ಲಿಯಾರ್ ಪ್ರವಚನ ದುವಾ ನೀಡಲಿದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ಸಂಶೋಧಕ ಪ್ರೊ.ಬಿ.ಎಂ.ಇಚ್ಲಂಗೋಡು, ಹೈದರ್ ಪರ್ತಿಪಾಡಿ, ಅನ್ಸಾರ್, ಮೂಸಾ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News