ಅಂಗನವಾಡಿ ಹುದ್ದೆಗೆ ಅರ್ಜಿ

Update: 2016-03-30 18:39 GMT

ಉಡುಪಿ, ಮಾ.30: ತಾಲೂಕಿನ ಶಿಶು ಅಭಿವೃದ್ಧಿ ಯೋಜನೆಯ ಗ್ರಾಪಂ ವ್ಯಾಪ್ತಿ ಹಾಗೂ ನಗರಸಭಾ ವ್ಯಾಪ್ತಿಯ ಅಂಗನವಾಡಿ ಕೇಂದ್ರಗಳಲ್ಲಿ ಪಡುಬಿದ್ರೆ-2 (ನಡ್ಸಾಲು) ಅಂಗನವಾಡಿ ಕಾರ್ಯಕರ್ತೆ ಹುದ್ದೆಗೆ ಎಸ್ಸೆಸೆಲ್ಸಿ ತೇರ್ಗಡೆ, ಪಡುಬಿದ್ರೆ-1 (ನಡ್ಸಾಲು), ಗುಡ್ಡೆಅಂಗಡಿ (ಉದ್ಯಾವರ) ಅಂಗನವಾಡಿ ಕೇಂದ್ರಗಳಲ್ಲಿ ಸಹಾಯಕಿ ಹುದ್ದೆಗೆ ಕನಿಷ್ಠ 4ನೆ ತರಗತಿ ಮತ್ತು ಗರಿಷ್ಠ 9ನೆ ತರಗತಿ ತೇರ್ಗಡೆಯಾಗಿರುವ 18ರಿಂದ 35 ವರ್ಷದೊಳಗಿನ ಸಹಾಯಕಿ ಹುದ್ದೆಗೆ ಸ್ಥಳೀಯ ಮಹಿಳಾಅ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಅಭ್ಯರ್ಥಿಗಳು ಶಿಶು ಅಭಿವೃದ್ಧಿ ಯೋಜನೆ ಉಡುಪಿ ಕಚೇರಿಯಲ್ಲಿರಿಸಿದ ಟೆಂಡರು ಪೆಟ್ಟಿಗೆಯಲ್ಲಿ ಅರ್ಜಿ ಹಾಕಲು ಎ.20 ಕೊನೆಯ ದಿನವಾಗಿದೆ. ಅಭ್ಯರ್ಥಿಗಳ ಅರ್ಹತೆ, ಅರ್ಜಿ ನಮೂನೆ ಮತ್ತಿತರ ವಿವರಗಳನ್ನೊಳಗೊಂಡ ಪ್ರಕಟನೆಯನ್ನು ಸಂಬಂಧಪಟ್ಟ ಶಾಲೆಗಳಲ್ಲಿ, ಅಂಗನವಾಡಿ ಕೇಂದ್ರಗಳಲ್ಲಿ, ಪಿಎಚ್‌ಸಿಗಳಲ್ಲಿ, ಗ್ರಾಮ ಲೆಕ್ಕಿಗರ ಕಚೇರಿಗಳಲ್ಲಿ ಪ್ರದರ್ಶಿಸಲಾಗಿದೆ. ವಿವರಗಳಿಗೆ ಉಡುಪಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಯನ್ನು ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News