ದಾರುನ್ನೂರ್‌ನಿಂದ ದುಬೈಯಲ್ಲಿ ಪಯ್ಯಕ್ಕಿ ಉಸ್ತಾದ್‌ರಿಗೆ ಸನ್ಮಾನ

Update: 2016-03-30 18:45 GMT

ದುಬೈ, ಮಾ.30: ದಾರುನ್ನೂರ್ ಎಜುಕೇಶನ್ ಸೆಂಟರ್ ಕಾಶಿಪಟ್ನ ಇದರ ಯುಎಇ ರಾಷ್ಟ್ರೀಯ ಸಮಿತಿಯ ದೇರಾ ರಾಫಿ ಹೊಟೇಲ್ ಆಡಿ ಟೋರಿಯಂನಲ್ಲಿ ಪಳ್ಳಿಕ್ಕೆರೆ ಸಂಯುಕ್ತ ಖಾಝಿ ಶೈಖುನಾ ಪಯ್ಯಕ್ಕಿ ಉಸ್ತಾದ್‌ರಿಗೆ ಸನ್ಮಾನ ಸಮಾರಂಭ, ದಾರುನ್ನೂರ್ ಕಿರು ಪರಿ ಚಯವಿರುವ ವೀಡಿಯೋ ಕ್ಲಿಪ್ ಬಿಡುಗಡೆ ಕಾರ್ಯಕ್ರಮ ನಡೆಯಿತು.
ದಾರುನ್ನೂರ್ ಯುಎಇ ರಾಷ್ಟ್ರೀಯ ಸಮಿ ತಿಯ ಅಧ್ಯಕ್ಷ ಸಲೀಂ ಅಲ್ತಾಫ್ ಫರಂಗಿಪೇಟೆ ಅಧ್ಯಕ್ಷತೆ ವಹಿಸಿದ್ದರು. ಸಲಹೆಗಾರ ಸೈಯದ್ ಅಸ್ಗರ್ ಅಲಿ ತಂಙಳ್ ಕೋಲ್ಪೆ ಕಾರ್ಯಕ್ರಮ ಉದ್ಘಾಟಿಸಿದರು. ಪಯ್ಯಕ್ಕಿ ಉಸ್ತಾದ್ ದುಆ ನೆರವೇರಿಸಿದರು. ವೇದಿಕೆಯಲ್ಲಿ ದಾರುನ್ನೂರ್ ಕೇಂದ್ರ ಸಮಿತಿ ಉಪಾಧ್ಯಕ್ಷ ಅಬ್ದುಲ್ಲತೀಫ್ ಹಾಜಿ ಮದರ್ ಇಂಡಿಯ ತೋಡಾರ್, ಮಜೀದ್ ದಾರಿಮಿ, ಹನೀಫ್ ಮುಸ್ಲಿಯಾರ್ ಬಿ.ಸಿ.ರೋಡ್, ಶರೀಫ್ ಅಶ್ರಫಿ ಮಡಂತ್ಯಾರ್, ಸುಲೈಮಾನ್ ಮೌಲವಿ ಕಲ್ಲೇಗ, ಅಬ್ದುಲ್ಲಾ ನಯೀಮಿ ಈಶ್ವರ ಮಂಗಳ, ಕೆ.ಪಿ.ಹನೀಫ್ ಮೂಡುಬಿದಿರೆ, ಶಂಸು ದ್ದೀನ್ ಸೂರಲ್ಪಾಡಿ, ಮುಹಮ್ಮದ್ ರಫೀಕ್ ಆತೂರು ಉಪಸ್ಥಿತರಿದ್ದರು. ದಾರುನ್ನೂರ್ ಯುಎಇ ಉಪಾಧ್ಯಕ್ಷ ಹನೀಫ್ ಹರಿಯಮೂಲೆ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಬದ್ರುದ್ದೀನ್ ಹೆಂತಾರ್ ದಾರುನ್ನೂರ್ ಸಂಸ್ಥೆಯ ಬಗ್ಗೆ ಪರಿಚಯ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News