ಎ.17: ಉಡುಪಿಯ 21 ಗ್ರಾಪಂಗಳ 26 ಸ್ಥಾನಗಳಿಗೆ ಚುನಾವಣೆ

Update: 2016-03-31 18:10 GMT

ಉಡುಪಿ, ಮಾ.31: ಜಿಲ್ಲೆಯ 21 ಗ್ರಾಪಂಗಳಲ್ಲಿ ವಿವಿಧ ಕಾರಣಗಳಿಂದ ತೆರವಾಗಿರುವ 26 ಸ್ಥಾನಗಳಿಗೆ ಎ.17ರಂದು ಚುನಾವಣೆ ನಡೆಸಲು ರಾಜ್ಯ ಚುನಾವಣಾ ಆಯೋಗ ಅಧಿಸೂಚನೆ ಹೊರಡಿಸಿದೆ.

ಮಾ.29ರಂದು ಜಿಲ್ಲೆಯಲ್ಲಿ ತೆರವಾಗಿರುವ ಐದು ಗ್ರಾಪಂಗಳ ಏಳು ಸ್ಥಾನಗಳಿಗೆ ಚುನಾವಣಾ ಆಯೋಗ ಚುನಾವಣೆಯನ್ನು ಘೋಷಿಸಿತ್ತು. ಇದೀಗ ಜಿಲ್ಲಾಧಿಕಾರಿಗಳ ಕೋರಿಕೆಯಂತೆ ಇನ್ನೂ 21 ಗ್ರಾಪಂಗಳಲ್ಲಿ ತೆರವಾಗಿರುವ 26 ಸ್ಥಾನಗಳಿಗೂ ಇದರೊಂದಿಗೆ ಚುನಾವಣೆ ನಡೆಸಲು ಆಯೋಗ ಅನುಮತಿ ನೀಡಿದೆ. ಈ ಗ್ರಾಪಂಗಳ ವಿವರ ಹೀಗಿದೆ:-ಉಡುಪಿ ತಾಲೂಕಿನ ಬೆಳ್ಳೆ ಗ್ರಾಪಂ (1ಸ್ಥಾನ), ಶಿರ್ವ (2), ಬಾರಕೂರು (1), ವಡ್ಡರ್ಸೆ (1), ಆವರ್ಸೆ (1), ಕೋಡಿಬೆಟ್ಟು (2), ಉದ್ಯಾವರ(1), ಹೆಜಮಾಡಿ (1), ಚಾಂತಾರು (1), ಹಂದಾಡಿ (2), ಕಾರ್ಕಳ ತಾಲೂಕಿನ ಕುಚ್ಚೂರು (2), ಮರ್ಣೆ (1), ಸಾಣೂರು (1), ಕುಂದಾಪುರ ತಾಲೂಕಿನ ಕಟ್‌ಬೆಲ್ತೂರು (1), ಶಿರೂರು (2), ನಾವುಂದ (1), ನಾಡಾ (1), ಚಿತ್ತೂರು (1), ಗೋಪಾಡಿ (1), ಬೆಳ್ವೆ (1), ಕಿರಿಮಂಜೇಶ್ವರ (1).

ಈ ಮೊದಲು ಕುಂದಾಪುರ ತಾಲೂಕಿನ ಪಡುವರಿ ಗ್ರಾಪಂ (2), ಗಂಗೊಳ್ಳಿ (1), ಉಡುಪಿ ತಾಲೂಕಿನ ಬೊಮ್ಮರಬೆಟ್ಟು (1), ಅಲೆವೂರು (2) ಹಾಗೂ ಕಾರ್ಕಳ ತಾಲೂಕಿನ ಪಳ್ಳಿ (1)ಗಳಲ್ಲಿ ತೆರವಾದ ಸ್ಥಾನಕ್ಕೆ ಚುನಾವಣೆ ಘೋಷಿಸಲಾಗಿತ್ತು. ಚುನಾವಣೆ ನಡೆಯುವ ಗ್ರಾಪಂಗಳ ವ್ಯಾಪ್ತಿಯಲ್ಲಿ ಎ.4ರಿಂದ 20ರವರೆಗೆ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುತ್ತದೆ.

ಚುನಾವಣೆಗೆ ಸಂಬಂಧಪಟ್ಟಂತೆ ಎ.4ರಂದು ಅಧಿಸೂಚನೆ ಹೊರಡಿಸಲಾಗುವುದು. ಎ.7 ನಾಮಪತ್ರ ಸಲ್ಲಿಸಲು ಕೊನೆಯ ದಿನ, ಎ.9ರಂದು ನಾಮಪತ್ರಗಳ ಪರಿಶೀಲನೆ ಹಾಗೂ ಎ.11ರಂದು ಉಮೇದುವಾರಿಕೆಗಳನ್ನು ಹಿಂದೆಗೆದುಕೊಳ್ಳಲು ಕೊನೆಯ ದಿನವಾಗಿದೆ. ಎ.20ರಂದು ಮತಎಣಿಕೆ ನಡೆಯಲಿದೆ ಎಂದು ರಾಜ್ಯ ಚುನಾವಣಾ ಆಯೋಗದ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News