ಎ.6ರಂದು ಮಾರೂರು ಶಾಲೆಯಲ್ಲಿ ಸಮಾಗಮ ಸಭೆ

Update: 2016-04-01 09:36 GMT

ಮೂಡುಬಿದಿರೆ, ಎ. 1: "ಶತಮಾನೋತ್ತರ" ಸಮಾರಂಭವನ್ನು ಆಚರಿಸಿಕೊಳ್ಳುತ್ತಿರುವ ಮೂಡುಬಿದಿರೆ ಸಮೀಪದ ದ.ಕ.ಜಿ.ಪಂ.ಹಿ.ಪ್ರಾಥಮಿಕ ಶಾಲೆ ಮಾರೂರು-ಹೊಸಂಗಡಿ ಇದರ ಹಳೆ ವಿದ್ಯಾರ್ಥಿಗಳ ಸಮಾಗಮ ಸಭೆಯು ಎ.6ರಂದು ಬೆಳಿಗ್ಗೆ 10 ಗಂಟೆಗೆ ನಡೆಯಲಿದೆ ಎಂದು ಶಾಲೆಯ ನಿವೃತ್ತ ಅಧ್ಯಾಪಕ ನಾಗರಾಜ ಇಂದ್ರ ತಿಳಿಸಿದ್ದಾರೆ.  

ಅವರು ಮೂಡುಬಿದಿರೆ ಪ್ರೆಸ್‌ಕ್ಲಬ್‌ನಲ್ಲಿ ಶುಕ್ರವಾರ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿದರು.

ಶತಮಾನೋತ್ತರದ ಸಂಭ್ರಮದಲ್ಲಿರುವ ಈ ಶಾಲೆಯಲ್ಲಿ ಈಗಾಗಲೇ 7-8 ಸಾವಿರದಷ್ಟು ವಿದ್ಯಾರ್ಥಿಗಳು ಶಿಕ್ಷಣವನ್ನು ಪಡೆದು ಉನ್ನತ ಹುದ್ದೆಗಳನ್ನು ಪಡೆದುಕೊಂಡಿದ್ದಾರೆ. ಹಾಗೂ ಇದೀಗ ಬೇರೆ ಬೇರೆ ಕಡೆಗಳಿಗೆ ಹಂಚಿ ಹೋಗಿದ್ದಾರೆ. ಇವರನ್ನೆಲ್ಲಾ ಒಂದೇ ಕಡೆಯಲ್ಲಿ ಸೇರಿಕೊಂಡು ಈ ವರ್ಷ ಕೆಲವು ಕಾರ್ಯಕ್ರಮಗಳನ್ನು ಮಾಡಬೇಕೆಂಬ ಉದ್ದೇಶವನ್ನಿಟ್ಟುಕೊಂಡಿದ್ದು ಅದಕ್ಕಾಗಿ ಈ ಸಮಾಗಮ ಸಭೆಯನ್ನು ಕರೆಯಲಾಗಿದೆ ಎಂದು ತಿಳಿಸಿದ್ದಾರೆ.  

ಹಳೆ ವಿದ್ಯಾರ್ಥಿ ಸಮಘದ ಕಾರ್ಯದರ್ಶಿ ಸುಶಾಂತ್ ಕೋಟ್ಯಾನ್, ಶಾಲಾ ದೈಹಿಕ ಶಿಕ್ಷಣ ಶಿಕ್ಷ ಲೋಕಯ್ಯ ಎನ್. ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News