ಕಾರ್ಕಳ ಸರಕಾರಿ ಆಸ್ಪತ್ರೆ ಶೀತಲೀಕರಣ ಘಟಕ: ಉದ್ಗಾಟನೆಗೆ ಮೊದಲೇ ಬಂಡವಾಳ ಬಯಲು

Update: 2016-04-01 11:35 GMT
ಕಾಲಿನ ಭಾಗ ತುಕ್ಕು ಹಿಡಿದು ಕರಗಿರುವುದು.

ಕಾರ್ಕಳ : ಕಾರ್ಕಳದ ಸರಕಾರಿ ಆಸ್ಪತ್ರೆಯ ಶೀತಲೀಕರಣ ಘಟಕ ಇನ್ನೇನು ಉದ್ಗಾಟನೆಗೊಂಡು ಸಾರ್ವಜನಿಕರ ಸೇವೆಗೆ ತೆರೆದುಕೊಳ್ಳವಷ್ಟರಲ್ಲಿ ನಿಜ ಬಣ್ಣ ಬಯಲಾಗಿದೆ. ಕಾರ್ಕಳ ತಾಲೂಕಿನಲ್ಲಿ ಈ ವರೆಗೂ ಶೀತಲೀಕರಣದ ಭಾಗ್ಯ ಒದಗಿ ಬರದೇ ಮೃತ ದೇಹಗಳನ್ನು ದೂರ ಪ್ರದೇಶದ ಸಂಬಂಧಿಕರು ಬರುವವರೆಗೂ ಇಡಬೇಕು ಎನ್ನುವ ಮೃತ ಕುಟುಂಬದ ಬೇಡಿಕೆಗೆ ಉತ್ತರ ಸಿಕ್ಕಿರಲಿಲ್ಲ. ಇದರಿಂದ ಜಿಲ್ಲಾ ಕೇಂದ್ರ ಆಸ್ಪತ್ರೆಗಳಿಗೇ ದುಬಾರಿ ಬೆಲೆ ತೆತ್ತು ಮೃತ ದೇಹಗಳನ್ನು, ಅವರ ಒಡನಾಡಿಗಳು ಬರುವವರೆಗೂ ಅಲ್ಲಿಡುವ ಪ್ರಕ್ರಿಯೆಯಲ್ಲಿ ಸಾಮಾನ್ಯ ವರ್ಗದ ಜನರು ಸುಸ್ತಾಗುತ್ತಿದ್ದರು. ಆದರೆ ಸದ್ಯ ಕಾರ್ಕಳ ಸರಕಾರಿ ಆಸ್ಪತ್ರೆ ಸಾಮಾನ್ಯರ ಬೇಡಿಕೆಗೆ ಸ್ಪಂದಿಸಿದ್ದು, ಸಂಸದೆ ಶೋಭಾ ಕರಂದ್ಲಾಜೆಯವರ ಅನುದಾನದಡಿ ಶೀತಲೀಕರಣ ಘಟಕವನ್ನು ತೆರೆದಿದೆ. ಸದ್ಯದಲ್ಲಿಯೇ ಈ ಘಟಕ ಉದ್ಗಾಟನೆಗೊಳ್ಳಲ್ಲಿದ್ದು ಶವವನ್ನು ಒಂದೆರಡು ದಿನ ಸಂರಕ್ಷಿಸಿಟ್ಟು ದೂರದ ಸಂಬಂಧಿಗಳನ್ನು ಕಾಯಲು ಇನ್ನು ಚಿಂತೆಯಿಲ್ಲ. ಸಾಮಾನ್ಯ ಜನರು ಜಿಲ್ಲಾ ಕೇಂದ್ರದ ಖಾಸಗಿ ಆಸ್ಪತ್ರೆಗಳಿಗೆ ಅಲೆಯುವ ಕಾಟ ಸದ್ಯದಲ್ಲಿಯೇ ತಪ್ಪಲಿದೆ.ಕಾರಣ.. ಕಾರ್ಕಳ ಸರಕಾರಿ ಆಸ್ಪತ್ರೆಯಲ್ಲಿ ಶೈತ್ಯಗಾರದ ವ್ಯವಸ್ಥೆಯು ಕೆಲವೇ ದಿನಗಳಲ್ಲಿ ಆರಂಭಗೊಳ್ಳಲಿದೆ. ಬಹುದಿನದ ಬೇಡಿಕೆಯಾಗಿರುವ ಈ ಶೈತ್ಯಗಾರದ ಕೊರತೆಯನ್ನು ಸರಕಾರ ಈಡೇರಿಸಿದೆ. ಪ್ರಸ್ತುತ ಎರಡು ಶವಗಳನ್ನು ಕಾದಿಡುವ ವ್ಯವಸ್ಥೆಯು ಕಾರ್ಕಳದಲ್ಲಿ ನಡೆಸಲಾಗುತ್ತಿದೆ.

 ಹಿಂದೆ ಈ ವ್ಯವಸ್ಥೆಗಾಗಿ ದೂರದ ಉಡುಪಿ ಮತ್ತು ಮಂಗಳೂರನ್ನು ಜನತೆ ಆಶ್ರಯಿಸುತ್ತಿದ್ದರು. ತಾಲೂಕು ಕೇಂದ್ರದಲ್ಲಿ ಈ ವ್ಯವಸ್ಥೆ ಬೇಕು ಎನ್ನುವ ಕೂಗು ಕೇಳಿ ಬಂದಿತ್ತು. ಮುಂದಿನ ದಿನಗಳಲ್ಲಿ ಮೃತರ ಆಪ್ತರು, ಒಡನಾಡಿಗಳು ವಿದೇಶಗಳಿಂದ ಬರುವವರೆಗೂ ಮೃತದೇಹಗಳನ್ನು ಸಂರಕ್ಷಿಸಿಡಲು ಜಿಲ್ಲಾಕೇಂದ್ರ ಆಸ್ಪತ್ರೆಗಳನ್ನು ಆಶ್ರಯಿಸಬೇಕಾಗಿಲ್ಲ. ತಾಲೂಕಿನಲ್ಲಿ ಆಕಸ್ಮಿಕ ಅವಘಡಗಳಲ್ಲಿ ಮೃತರಾದ ಮೃತ ದೇಹಗಳನ್ನು ಸರಕಾರಿ ಆಸ್ಪತ್ರೆಗಳಲ್ಲಿ ಮರಣೋತ್ತರ ಪರೀಕ್ಷೆಗೊಳಪಡಿಸಲಾಗುತ್ತದೆ. ಬಳಿಕ ಸಂಬಂಧ ಪಟ್ಟವರ ವಶಕ್ಕೊಪ್ಪಿಸಲಾಗುತ್ತಿದೆ. ಅಂತವರು ಹಾಗೂ ವಿದೇಶದಲ್ಲಿ ಸಂಬಂಧಿಕರಿಗಾಗಿ ಕಾಯುವವರಿಗೆ ಶೈತ್ಯಗಾರದ ಅವಶ್ಯಕತೆ ಇದ್ದೇ ಇದೆ. ಅದಕ್ಕಾಗಿಯೇ ಈ ವ್ಯವಸ್ಥೆ ಪ್ರಸ್ತುತ ಅನಿವಾರ್ಯತೆ ತಂದೊಡ್ಡಿದೆ. ಅಂತವರ ಪಾಲಿಗೆ ಈ ವ್ಯವಸ್ಥೆ ಪ್ರಯೋಜನಕಾರಿಯಾಗಿದೆ.

ಬಿಪಿಎಲ್ ಕಾರ್ಡುದಾರರಿಗೆ ಈ ಶೀತಲೀಕರಣ ಘಟಕದ ಸೇವೆ ದೊರೆಯಲಿದ್ದು ಮುಂದಿನ ದಿನಗಳಲ್ಲಿ ಇತರ ವರ್ಗದವರಿಗೆ ದೊರಕಿಸಿಕೊಡುವಲ್ಲಿ ಸರಕಾರಿ ಆಸ್ಪತ್ರೆ ಚಿಂತನೆ ನಡೆಸುತ್ತಿದೆ.ಇದು ಜನಸಾಮಾನ್ಯರಿಗೂ ಖುಷಿಕೊಡುವ ವಿಚಾರವೇ, ಆದರೆ ಉದ್ಗಾಟನೆಗೆ ಮೊದಲೇ ಶೀತಲೀಕರಣ ಘಟಕ ಕಳಪೆ ಕಾಮಗಾರಿಗಳಿಂದ ಸುದ್ದಿ ಮಾಡಲಿದೆಯೇ ಎನ್ನುವ ಪ್ರಶ್ನೆ ಕಾಡುತ್ತಿದೆ.

ಕಳಪೆ ಕಾಮಗಾರಿಯೇ!!?

  ನಿರ್ಮಿತಿ ಸಂಸ್ಥೆ ಶೀತಲೀಕರಣ ಘಟಕದ ಈ ಕಾಮಗಾರಿಗಳನ್ನು ನಿರ್ಮಿಸಿದ್ದು ,ಉದ್ಗಾಟನೆಗೆ ಮೊದಲೇ ಶೀಥಲೀಕರಣ ಘಟಕದಲ್ಲಿ ಕಳಪೆ ಕಾಮಗಾರಿ ನಡೆದಿದೆಯೇ? ಎನ್ನುವ ಸಂದೇಹ ಘಟಕದ ಕಟ್ಟಡವನ್ನು ಸೂಕ್ಷ್ಮವಾಗಿ ನೋಡಿದಾಗ ಹುಟ್ಟಿಕೊಳ್ಳುತ್ತದೆ. ಕಟ್ಟಡದ ಕಿಟಕಿಗಳು ತುಕ್ಕು ಹಿಡಿದು ಇನ್ನೇನು ಮುರಿದು ಬೀಳಲಿರುವ ಪರಿಸ್ಥಿತಿಗೆ ತಲುಪಿದ್ದು ಶೀತಲೀಕರಣ ಯಂತ್ರಕ್ಕೂ ಅಲ್ಲಲ್ಲಿ ತುಕ್ಕು ಹಿಡಿದ ಅಂಶ ಮಾದ್ಯಮದ ಕ್ಯಾಮರಾದಿಂದ ಬಯಲಾಗಿದೆ. ಎರಡು ಮೃತ ದೇಹಗಳನ್ನು ಇಡುವ ವ್ಯವಸ್ಥೆ ಇರುವ ಅಲೆಂಜರ್ಸ್‌ ಕಂಪೆನಿಯ ಈ ಶೀತಲೀಕರಣ ಯಂತ್ರ ಸೆಕೆಂಡ್ ಹ್ಯಾಂಡ್ ಯಂತ್ರದಂತೆ ಕಂಡು, ಯಂತ್ರದ ಖರೀದಿಯಲ್ಲಿಯೇ ಗೋಲ್ ಮಾಲ್ ನಡೆದಿದೆಯೇ ಎನ್ನುವ ಪ್ರಶ್ನೆ ಹುಟ್ಟು ಹಾಕಿದೆ. ತೆರೆದಿರುವ ಕಿಟಕಿಗಳೆಡೆಯಿಂದ ಹಾವು ಚೇಳುಗಳು ಒಳನುಗಿ,್ಗ ಶೀತಲೀಕರಣ ಕಟ್ಟಡದಲ್ಲಿ ವಾಸ ಮಾಡಿದರೂ ಅಚ್ಚರಿಯಿಲ್ಲ. ಉದ್ಗಾಟನೆಯ ಮೊದಲೇ ಕಳಪೆ ಕಾಮಗಾರಿ ನಡೆಸಿ ಸುದ್ದಿಯಾಗುವುದು ಸರಕಾರಿ ಆಸ್ಪತ್ರೆಗಳಲ್ಲಿ ಸರ್ವೇ ಸಾಮಾನ್ಯವಾಗಿದೆ. ಇನ್ನಾದರೂ ಸರಕಾರಿ ಆಸ್ಪತ್ರೆ ಎಚ್ಚೆತ್ತು ಶೀತಲೀಕರಣ ಘಟಕದ ಸಮಸ್ಯೆಗಳನ್ನು ಪರಿಹರಿಸಿ ಜನಸಾಮಾನ್ಯರಿಗೆ ಉತ್ತಮ ಸೇವೆ ಕೊಡುವಲ್ಲಿ ಗಮನಹರಿಸಲಿ.

ಅಭಿಪ್ರಾಯ :

ಜನಸಾಮಾನ್ಯರಿಗೆ ಪ್ರಯೋಜನವಾಗಬೇಕು ಎನ್ನುವ ದೃಷ್ಟಿಯಿಂದ ಸರಕಾರಿ ಆಸ್ಪತ್ರೆ ಶೀತಲೀಕರಣ ಘಟಕಕ್ಕೆ ಚಾಲನೆ ನೀಡಲಿದೆ. ಈ ಹಿಂದೆ ಮರಣೋತ್ತರ ಪರೀಕ್ಷೆಯ ನಂತರ ಮೃತರ ಕುಟುಂಬಗಳಿಗೆದೂರದೂರುಗಳಲ್ಲಿರುವ ಮೃತರ ಮಕ್ಕಳು ಬರುವ ತನಕ ಮೃತದೇಹಗಳನ್ನು ಸಂರಕ್ಷಿಸಿ ಇಡುವ ಅವಕಾಶ ಇಲ್ಲಿರಲಿಲ್ಲ.ಆದರೆ ಶೈತ್ಯಗಾರ ಘಟಕದ ಯಂತ್ರೋಪಕರಣದ ಗುಣಮಟ್ಟದ ಬಗ್ಗೆ ನನ್ನಲ್ಲಿ ಮಾಹಿತಿ ಇಲ್ಲ.

ಡಾ ಹೆಬ್ಬಾರ್,

ಮುಖ್ಯ ವೈದ್ಯಾಧಿಕಾರಿಗಳು,

ನಗರ ಸರಕಾರಿ ಆಸ್ಪತ್ರೆ ,ಕಾರ್ಕಳ

Writer - ಮೊಹಮ್ಮದ್ ಶರೀಪ್ ಕಾರ್ಕಳ

contributor

Editor - ಮೊಹಮ್ಮದ್ ಶರೀಪ್ ಕಾರ್ಕಳ

contributor

Similar News