ಭಟ್ಕಳ : ಪ್ರಶ್ನೆ ಪತ್ರೀಕೆ ಸೋರಿಕೆ ತಪ್ಪಿಸ್ಥರ ಬಂಧನಕ್ಕೆ ಆಗ್ರಹಿಸಿ ಎಬಿವಿಪಿಯಿಂದ ಮನವಿ

Update: 2016-04-01 16:41 GMT

ಭಟ್ಕಳ : ಪಿಯುಸಿ ಪ್ರಶ್ನೇ ಪತ್ರೀಕೆ ಸೋರಿಕೆ ಹಿನ್ನೆಲೆಯಲ್ಲಿ ಅಸಮರ್ಥ ಸಚಿವರಾದ ಕಿಮ್ಮನೆ ರತ್ನಾಕರ್ ರಾಜಿನಾಮೆ ನೀಡಬೇಕು ಮತ್ತು ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಭಟ್ಕಳ ಎಬಿವಿಪಿ ವಿದ್ಯಾರ್ಥಿ ಘಟಕದ ವತಿಯಿಂದ ಶುಕ್ರವಾರ ಮಾನ್ಯ ಉಪವಿಭಾಗಾಧಿಕಾರಿಗಳ ಮುಖಾಂತರ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.

          ರಾಜ್ಯದಲ್ಲಿ ದ್ವಿತೀಯ ಪಿಯುಸಿ ರಸಾಯನ ಶಾಸ್ತ್ರ ವಿಷಯ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವುದನ್ನು ಗಂಭುರವಾಗಿ ಪರಿಗಣಿಸದೇ ಪದೇ ಪದೇ ಪ್ರಶ್ನೆ ಪತ್ರಿಕೆ ಸೋರಿಕೆ ಅವಕಾಸ ನೀಡಿರುವುದು, ಅಲ್ಲದೇ ಇಲಾಖೆಯ ವೈಪಲ್ಯದಿಮದ ರಾಜ್ಯ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯಕ್ಕೆ ಸಮಸ್ಯೆಯಾಗಿರುವುದನ್ನು ನಿಯಂತ್ರಿಸಲಾಗದ ಅಸಮರ್ತ ಸಚಿವರಾದ ಕಿಮ್ಮನೆ ರತ್ನಾಕರ ನೈತಿಕ ಹೊಣೆ ಹೊತ್ತು ರಾಜಿನಾಮೆ ನೀಡಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಯಿತು. ರಾಜ್ಯದಲ್ಲಿ ಪ್ರತಿವರ್ಷ ಪ್ರಶ್ನೆ ಪತ್ರಿಕೆ ಸೋರಿಕೆ, ಮೌಲ್ಯಮಾಪಣ ಲೋಪ, ಫಲಿತಾಂಶ ಗೊಂದಲ, ಪಠ್ಯಕ್ರಮದಲ್ಲಿ ಗೊಂದಲ ಸೇರಿದಂತೆ ಒಂದಿಲ್ಲೊಂದು ಸಮಸ್ಯೆಯಿಂದ ರಾಜ್ಯದ ಲಕ್ಷಾಂತರ ವಿದ್ಯಾರ್ಥಿಗಳ ನಿದ್ದೆಗಡಿಸಿದೆ. ಅಲ್ಲದೇ ಈ ಬಾರಿ ಎರಡೆರಡು ಬಾರಿ ಪ್ರಶ್ನೆ ಪತ್ರಿಕೆ ಸೋರಿಕೆ ಹಿಂದೆ ಕೆಲವು ಪಟ್ಟಭದ್ರ ಖಾಸಗಿ ಶಿಕ್ಷಣ ಸಂಸ್ಥೆಗಳ ಹಾಗೂ ಪ್ರಭಾವಿ ಟ್ಯೂಷನ್ ಸೆಂಟರ್‌ಗಳ ಕೈವಾಡ ಇದೆ ಎಂದು ಶಂಕಿಸಲಾಗಿದೆ. ಆದ್ದರಿಂದ ಸರ್ಕಾರ ಈ ಪ್ರಶ್ನೆ ಪತ್ರೀಕೆ ಸೋರಿಕೆ ಹಿಂದೆ ಯಾರದೇ ಕೈವಾಡವಿದ್ದರೂ ತಕ್ಷಣ ಅವರನ್ನು ಬಂಧಿಸಿ ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಯಿತು.

          ಮಾನ್ಯ ಉಪವಿಭಾಗಾಧಿಕಾರಿಗಳ ಅನುಪಸ್ಥಿತಿಯಲ್ಲಿ ಕಛೇರಿ ವ್ಯವಸ್ಥಾಪಕ ಮೇಸ್ತರವರು ಮನವಿ ಸ್ವೀಕರಿಸಿದರು. ಎಬಿವಿಪಿ ನಗರ ಸಂಚಾಲಕ ಸಂದೀಪ ಆರ್ ನಾಯ್ಕ, ಸದಸ್ಯರಾದ ವೆಂಕಟೇಶ ಎಂ ನಾಯ್ಕ, ಶ್ರೀಕಾಂತ ಜಿ ನಾಯ್ಕ, ಗಣೇಶ ಮೊಗೇರ, ಜೀವನ್ ಎನ್ ನಾಯ್ಕ ಹಾಗೂ ದಿವಾಕರ್ ನಾಯ್ಕ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News