ಮುಲ್ಕಿ ವಿಶೇಷ ತಹಶೀಲ್ದಾರ್ ಕಚೇರಿಯ ಅವ್ಯವಸ್ಥೆ ವಿರುದ್ಧ ದೂರು

Update: 2016-04-01 18:34 GMT

ಮುಲ್ಕಿ, ಎ.1: ಇಲ್ಲಿನ ವಿಶೇಷ ತಹಶೀಲ್ದಾರ್ ಕಚೇರಿಯು ಅವ್ಯವಸ್ಥೆಯಿಂದ ಕೂಡಿದೆ. ಇದನ್ನು ತಕ್ಷಣ ಸರಿಪಡಿಸಬೇಕು. ಇಲ್ಲದಿದ್ದರೆ ಎ.5ರಂದು ಮುಲ್ಕಿ ವಿಶೇಷ ತಹಶೀಲ್ದಾರರ ಕಚೇರಿ ಮತ್ತು ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸುವುದಾಗಿ ನ್ಯಾಯವಾದಿ ಡೇನಿಯಲ್ ದೇವರಾಜ್ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಧಿಕಾರಿಗೆ ಸಲ್ಲಿಸಿದ ಮನವಿಯಲ್ಲಿ ಎಚ್ಚರಿಸಿದ್ದಾರೆ.

ಪ್ರಸ್ತುತ ವಿಶೇಷ ತಹಶೀಲ್ದಾರ್ ಆಗಿರುವ ಮುಹಮ್ಮದ್ ಇಸಾಕ್ ಶನಿವಾರ ಬೆಳಗ್ಗೆ ಮಾತ್ರ ಕಾರ್ಯನಿರ್ವಹಿಸುತ್ತಿದ್ದು, ಉಳಿದಂತೆ ಅವರು ಮೂಡುಬಿದಿರೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇದರಿಂದ ಮುಲ್ಕಿಯ ನಾಗರಿಕರಿಗೆ ತೊಂದರೆಯಾಗಿದೆ. ಸರಕಾರದ ವಿವಿಧ ಯೋಜನೆಗಳನ್ನು ಪಡೆಯಲಾಗದೆ ಸಮಸ್ಯೆಗೆ ಸಿಲುಕಿದ್ದಾರೆ.

ಅದಲ್ಲದೆ ಸದ್ರಿ ಕಚೇರಿಯಲ್ಲಿ ಸಾರ್ವಜನಿಕರಿಗೆ ಕುಳಿತುಕೊಳ್ಳಲು ಸೂಕ್ತ ವ್ಯವಸ್ಥೆಯಿಲ್ಲ. ಅರ್ಜಿ ಬರೆಯಲು ಕೂಡ ಮೇಜಿನ ವ್ಯವಸ್ಥೆ ಮಾಡಿಲ್ಲ. ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆಯೂ ಇಲ್ಲ. ನೋಟಿಸ್ ಬೋರ್ಡು ಹಾಕಿಲ್ಲ, ವಿಶೇಷ ತಹಶೀಲ್ದಾರರ ಕಚೇರಿ ಎಂಬ ಬೋರ್ಡೂ ಇಲ್ಲ. ಒಟ್ಟಿನಲ್ಲಿ ಈ ಕಚೇರಿ ಅವ್ಯವಸ್ಥೆಯಿಂದ ಕೂಡಿದ್ದು, ಕಾಯಕಲ್ಪ ನೀಡುವಂತೆ ಮನವಿ ಮಾಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News