ಮಕ್ಕಳೊಂದಿಗೆ ತಾಯಿ ನಾಪತ್ತೆ

Update: 2016-04-01 18:43 GMT

ಮಣಿಪಾಲ, ಎ.1: ಮೂಲತ ಬೆಳಗಾವಿ ಜಿಲ್ಲೆಯ ರಾಯಭಾಗ ಬೆಂಡವಾಡದ ಪವನ ಗಾಂಜಿ ಎಂಬವರ ಹೆಂಡತಿ ರೂಪಾ ಹಾಗೂ ಮಕ್ಕಳಾದ ಕೀರ್ತಿ ಮತ್ತು ವಿಷ್ಣು ಮಾ.27ರಿಂದ ಮಣಿಪಾಲದ ಮನೆಯಿಂದ ನಾಪತ್ತೆಯಾಗಿರುವುದಾಗಿ ಮಣಿಪಾಲ ಠಾಣೆಯಲ್ಲಿ ದೂರು ದಾಖಲಾಗಿದೆ.

ತಾನು ಹೆಂಡತಿ, ಮಕ್ಕಳನ್ನು ಮಣಿಪಾಲದಲ್ಲಿ ಬಿಟ್ಟು ಮಾ.26ರಂದು ಊರಿಗೆ ತೆರಳಿದ್ದು, ಮಾ.27ರಂದು ಬೆಳಗ್ಗೆ 8ಗಂಟೆಗೆ ಮನೆಯ ಮಾಲಕರು ಕರೆ ಮಾಡಿ, ರೂಪಾ ಹಾಗೂ ಇಬ್ಬರು ಮಕ್ಕಳು ಮನೆಯಲ್ಲಿ ಕಾಣಿಸುತ್ತಿಲ್ಲ ಎಂದು ತಿಳಿಸಿದ್ದರು. ಹೆಂಡತಿಯ ಮೊಬೈಲ್‌ಗೆ ಕರೆ ಮಾಡಿದರೂ ಸ್ವೀಕರಿಸುತ್ತಿರಲಿಲ್ಲ. ಊರಿಗೆ ಬಂದು ಎಲ್ಲಾ ಕಡೆಗಳಲ್ಲಿ ಹುಡುಕಾಡಿದರೂ ಅವರು ಪತ್ತೆಯಾಗಿಲ್ಲ ಎಂದು ಪವನ ಗಾಂಜಿ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News