ಉಡುಪಿ: ಸರಕಾರಿ ಕಾಲೇಜು ವಾರ್ಷಿಕೋತ್ಸವ

Update: 2016-04-01 18:43 GMT

ಉಡುಪಿ, ಎ.1: ಸರಕಾರಿ ಕಾಲೇಜುಗಳು ಖಾಸಗಿ ಕಾಲೇಜುಗಳಿಗೆ ಸರಿಸಮನಾಗಿ ಬೆಳೆಯುವ ಮೂಲಕ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಶಿಕ್ಷಣ ನೀಡುವ ತಾಣವಾಗಬೇಕು ಎಂದು ಶಾಸಕ ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ.

ತೆಂಕನಿಡಿಯೂರು ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ವಾರ್ಷಿಕೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.

  ಮಂಗಳೂರು ವಿವಿ ನಿವೃತ್ತ ಪ್ರಾಧ್ಯಾಪಕ ಪ್ರೊ. ಸುರೇಂದ್ರ ರಾವ್, ಉಡುಪಿ ನಗರಸಭೆಯ ಮಾಜಿ ಅಧ್ಯಕ್ಷ ಯುವರಾಜ್ ಪಿ. ಮುಖ್ಯ ಅತಿಥಿಗಳಾಗಿ ಮಾತನಾಡಿದರು. ಪ್ರಾಂಶುಪಾಲ ಪ್ರೊ.ಬಾಲಕೃಷ್ಣ ಎಸ್. ಹೆಗ್ಡೆ ವಾರ್ಷಿಕ ವರದಿ ವಾಚಿಸಿದರು. ಕಾಲೇಜು ಅಭಿವೃದ್ಧಿ ಸಮಿತಿ ಖಜಾಂಚಿ ದಯಾನಂದ ಶೆಟ್ಟಿ, ವಿದ್ಯಾರ್ಥಿ ಕ್ಷೇಮಪಾಲನಾ ಸಮಿತಿಯ ಸಂಚಾಲಕರಾದ ಡಾ.ಜಯಪ್ರಕಾಶ ಶೆಟ್ಟಿ, ಪ್ರೊ.ತಿಮ್ಮಣ್ಣ ಜಿ. ಭಟ್, ಸಾಂಸ್ಕೃತಿಕ ವಿಭಾಗದ ಸಂಚಾಲಕರಾದ ಪ್ರೊ. ವಿನೀತಾ ತಂತ್ರಿ, ಪ್ರೊ.ರಾಘವ ನಾಯ್ಕ, ವಿದ್ಯಾರ್ಥಿ ನಾಯಕರಾದ ಮಂಜುನಾಥ ಹಾಗೂ ದ್ಯಾಮಣ್ಣ ಉಪಸ್ಥಿತರಿದ್ದರು. ಪ್ರೊ. ರಾಧಾಕೃಷ್ಣ ಹಾಗೂ ಡಾ.ದುಗ್ಗಪ್ಪಕಜೆಕಾರ್ ಕಾರ್ಯಕ್ರಮ ನಿರೂಪಿಸಿದರು. ಈ ಸಂದರ್ಭ ಬಿಎಸ್ಸಿ ಮತ್ತು ಬಿಸಿಎ ವ್ಯಾಸಂಗ ಮಾಡುತ್ತಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ 18 ವಿದ್ಯಾರ್ಥಿಗಳಿಗೆ ಸರಕಾರ ಮಂಜೂರು ಮಾಡಿದ 3,35,748 ರೂ. ಮೊತ್ತದ ಚೆಕ್ಕನ್ನು ಶಾಸಕರು ವಿತರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News