ಎ.28ರಿಂದ ರಾಷ್ಟ್ರಮಟ್ಟದ ಸೀನಿಯರ್ ಥ್ರೋಬಾಲ್ ಪಂದ್ಯ

Update: 2016-04-01 18:45 GMT

ಕಾಪು, ಎ.1: ಥ್ರೋಬಾಲ್ ಫೆಡರೇಶನ್ ಆಫ್ ಇಂಡಿಯಾ, ಅಮೆಚೂರ್ ಥ್ರೋಬಾಲ್ ಫೆಡರೇಶನ್ ಕರ್ನಾಟಕ ಮತ್ತು ವಿದ್ಯಾನಿಕೇತನ ಸಮೂಹ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಕಾಪು ವಿದ್ಯಾನಿಕೇತನ ಕ್ರೆಡಾಂಗಣದಲ್ಲಿ ಎ. 28, 29 ಮತ್ತು 30ರಂದು ರಾಷ್ಟ್ರಮಟ್ಟದ ಸೀನಿಯರ್ ಥ್ರೋಬಾಲ್ ಪಂದ್ಯಾಟ ನಡೆಯಲಿದೆ.

ಈ ಪಂದ್ಯಾಟದಲ್ಲಿ 27 ರಾಜ್ಯಗಳ 27 ಪುರುಷ ಮತ್ತು 27 ಮಹಿಳಾ ತಂಡಗಳು ಭಾಗವಹಿಸಲಿವೆ ಎಂದು ಥ್ರೋಬಾಲ್ ಫೆಡರೇಶನ್ ಮತ್ತು ವಿದ್ಯಾನಿಕೇತನ ಸಮೂಹ ಸಂಸ್ಥೆಗಳ ಜಂಟಿ ಪ್ರಕಟನೆಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News