ಎ.5ರಿಂದ ಕಲ್ಲುಗುಂಡಿ ಸ್ವಲಾತ್ ವಾರ್ಷಿಕ

Update: 2016-04-02 11:44 GMT

ಸುಳ್ಯ: ಕಲ್ಲುಗುಂಡಿಯ ಮುಹಿಯುದ್ದೀನ್ ಜುಮ್ಮಾ ಮಸೀದಿ ಹಾಗೂ ಸಿರಾಜುಲ್ ಇಸ್ಲಾಂ ಎಸೋಸಿಯೇಶನ್‌ನ ಜಂಟಿ ಆಶ್ರಯದಲ್ಲಿ ಮೂರು ದಿನಗಳ ಧಾರ್ಮಿಕ ಉಪನ್ಯಾಸ ಹಾಗೂ ಸ್ವಲಾತ್ ವಾರ್ಷಿಕ ಕಾರ್ಯಕ್ರಮ ಎಪ್ರಿಲ್ 5ರಿಂದ 7ರವರೆಗೆ ನಡೆಯಲಿದೆ. ಸ್ವಾಗತ ಸಮಿತಿ ಅಧ್ಯಕ್ಷ ಅಬ್ಬಾಸ್ ಸೆಂಟ್ಯಾರ್ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದರು. ಎ.5ರಂದು ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಿರಾಜುಲ್ ಇಸ್ಲಾಂ ಎಸೋಸಿಯೇಶನ್ ಅಧ್ಯಕ್ಷ ಜಿ.ಕೆ.ಹಮೀದ್ ವಹಿಸಲಿದ್ದಾರೆ. ಉದ್ಘಾಟನೆಯನ್ನು ಕೆ.ಎಂ.ಹನೀಫ್ ಫಾಝಿಲ್ ಹನೀಫಿ ಮಾಡಲಿದ್ದಾರೆ. ಉತ್ತಮ ಸಮೂಹಂ ಎಂಬ ವಿಷಯದಲ್ಲಿ ನವಾರ್ ಮನ್ನಾಣಿ ಮುಖ್ಯ ಭಾಷಣ ಮಾಡಲಿದ್ದಾರೆ. ಎ.6ರಂದು ನಡೆಯುವ ಸಭಾ ಕಾರ್ಯಕ್ರಮದಲ್ಲಿ ‘ಅಂತ್ಯ ದಿನ ಇದುವೆ’ ಎಂಬ ವಿಷಯದಲ್ಲಿ ಕಾಸರಗೋಡು ಚೌಕಿ ಖತೀಬರಾದ ಅಶ್ರಫ್ ರಹ್ಮಾನಿ ಮುಖ್ಯ ಭಾಷಣ ಮಾಡಲಿದ್ದಾರೆ. ಎ.7ರಂದು ಸಮಾರೋಪ ಸಮಾರಂಭ ನಡೆಯಲಿದ್ದು, ತಾಜ್ ಮಹಮ್ಮದ್ ಅಧ್ಯಕ್ಷತೆ ವಹಿಸಲಿದ್ದಾರೆ. ದುಗಲಡ್ಕದ ಯನ್.ಪಿ.ಯಂ. ಅಬಿದೀನ್ ತಂಙಳ್ ಸ್ವಲಾತ್ ನೇತೃತ್ವ ಹಾಗೂ ದುವಾ ನೆರವೇರಿಸಲಿದ್ದಾರೆ. ಮಾತಾಪಿತರಲ್ಲಿ ಮಕ್ಕಳ ಕರ್ತವ್ಯ ಎಂಬ ವಿಷಯದಲ್ಲಿ ಜಬೈರ್ ದಾರಿಮಿ ಪೈಕ ಮಾತನಾಡಲಿದ್ದಾರೆ ಎಂದವರು ಹೇಳಿದರು.

ಮಸೀದಿ ಅಧ್ಯಕ್ಷ ತಾಜ್ ಮಹಮ್ಮದ್, ಪ್ರಧಾನ ಕಾರ್ಯದರ್ಶಿ ಎಂ.ಸಿ.ಅಬೂಬಕರ್, ಸಿರಾಜುಲ್ ಇಸ್ಲಾಂ ಎಸೋಸಿಯೇಶನ್‌ನ ಅಧ್ಯಕ್ಷ ಜಿ.ಕೆ.ಹಮೀದ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News