ಪುತ್ತೂರು : ‘‘ಕ್ರೀಡೆ ಸಾಮರಸ್ಯ ಬೆಸೆಯುವ ವೇದಿಕೆ ’’ - ಕೆ.ಸೀತಾರಾಮ ರೈ

Update: 2016-04-02 12:31 GMT

ಪುತ್ತೂರು : ಪ್ರತಿಭೆ ಎಂಬುವುದು ಒಬ್ಬನ ಸೊತ್ತಲ್ಲ, ಕ್ರೀಡೆಯಲ್ಲಿ ಜಾತಿ, ಮತ ಭೇದವಿಲ್ಲ, ಅದು ಸಾಮರಸ್ಯ ಬೆಸೆಯುವ ವೇದಿಕೆಯಾಗಿದ್ದು, ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಪಾಲ್ಗೊಳ್ಳುವ ಮೂಲಕ ತಮ್ಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಸವಣೂರು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಕೆ.ಸೀತಾರಾಮ ರೈ ಅವರು ಹೇಳಿದರು. ಪುತ್ತೂರು ತಾಲ್ಲೂಕಿನ ಸವಣೂರಿನ ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ನಡೆದ ವಾರ್ಷಿಕ ಕ್ರೀಡಾಕೂಟದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.  ವಾಮದಪದವು ಪ್ರಥಮ ದರ್ಜೆ ಕಾಲೇಜಿನ ದೈಹಿಕ ಶಿಕ್ಷಕ ರಾಧಾಕೃಷ್ಣ.ಎಚ್.ಬಿ.ಅವರು ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ಕ್ರೀಡೆ ವಿದ್ಯಾರ್ಥಿಗಳ ಪ್ರತಿಭೆಯನ್ನು ಹೊರತರಲು ಒಂದು ವೇದಿಕೆಯಾಗಿದ್ದು, ನಮ್ಮ ದೇಶದಲ್ಲಿ ಗುರುತಿಸಲ್ಪಟ್ಟಿರುವ ಹೆಚ್ಚಿನ ಕ್ರೀಡಾಪಟುಗಳು ಗ್ರಾಮೀಣ ಪ್ರದೇಶದವರಾಗಿದ್ದಾರೆ ಎಂದರು.  ಕಬಡ್ದಿ ಕ್ರೀಡಾಪಟುವಾದ ಮನೋಹರ್ ಮೆದು ಅವರನ್ನು ಸನ್ಮಾನಿಸಲಾಯಿತು. ಕಾಲೇಜಿನ ಕ್ರೀಡಾ ಸಂಘದ ಜೊತೆ ಕಾರ್ಯದರ್ಶಿ ರಮ್ಯಾ ಎಚ್ ಆರ್ ಪ್ರಮಾಣವಚನವನ್ನು ಬೋಧಿಸಿದರು. ವಿದ್ಯಾರ್ಥಿ ಕ್ರಿಸ್ಟೋಫರ್ ಜೋಸೆಫ್ ಅವರು ಅತಿಥಿಗಳನ್ನು ಪರಿಚಯಿಸಿದರು. ವಿದ್ಯಾರ್ಥಿನಿಯರಾದ ದಿವ್ಯ ಎ ಸ್ವಾಗತಿಸಿ, ಧನ್ಯಶ್ರೀ ಎಸ್ ಆರ್ ವಂದಿಸಿದರು. ವಿದ್ಯಾರ್ಥಿನಿ ವಿದ್ಯಾ ಎಸ್ ನಿರೂಪಿಸಿದರು. ವಾರ್ಷಿಕ ಕ್ರೀಡಾಕೂಟಕ್ಕೆ ವಾಮದಪದವು ಪ್ರಥಮ ದರ್ಜೆ ಕಾಲೇಜಿನ ದೈಹಿಕ ಶಿಕ್ಷಕ ರಾಧಾಕೃಷ್ಣ.ಎಚ್.ಬಿ.ಅವರು ಚಾಲನೆ ನೀಡಿದರು.

----------------------------------------------------------------------

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News