ಎಸ್‌ಸಿಡಿಸಿಸಿ ಬ್ಯಾಂಕ್‌ನಿಂದ ಎ.5ರಂದು ಪರಿಹಾರಧನ ವಿತರಣೆ

Update: 2016-04-02 18:24 GMT

ಮಂಗಳೂರು, ಎ.2: ಎಸ್‌ಸಿಡಿಸಿಸಿ ಬ್ಯಾಂಕ್‌ನ ಶತಮಾನೋತ್ಸವ ಹಾಗೂ ಹೊಸ ಕಟ್ಟಡದ ಉದ್ಘಾಟನೆ ಸಂದರ್ಭ ಮಾಡಿದ ಘೋಷಣೆಯಂತೆ 2014-15ನೆ ಸಾಲಿನಲ್ಲಿ ಜಿಲ್ಲಾ ಬ್ಯಾಂಕ್‌ನಿಂದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ ಮೂಲಕ ಹಾಗೂ ಸಂಘಗಳ ಸ್ವಂತ ಬಂಡವಾಳದಿಂದ ಗರಿಷ್ಠ 1 ಲಕ್ಷ ರೂ. ಬೆಳೆ ಸಾಲ ಪಡೆದು ಮೃತಪಟ್ಟ ರೈತರ ಕುಟುಂಬಕ್ಕೆ ಶೇ.50ರಷ್ಟು ಪರಿಹಾರ ಧನ ನೀಡಲಾಗುವುದು. ಈ ಪರಿಹಾರ ಧನ ವಿತರಣಾ ಸಮಾರಂಭವು ಎ.5ರಂದು ಮಧ್ಯಾಹ್ನ 1 ಗಂಟೆಗೆ ಬ್ಯಾಂಕಿನ ಮೊಳಹಳ್ಳಿ ಶಿವರಾವ್ ಸ್ಮಾರಕ ಸಭಾಭವನದಲ್ಲಿ ನಡೆಯಲಿದೆ.

ಸಮಾರಂಭದಲ್ಲಿ ಸಹಕಾರ ಸಚಿವ ಎಚ್.ಎಸ್.ಮಹದೇವ ಪ್ರಸಾದ್ ಪರಿಹಾರ ಧನವನ್ನು ವಿತರಿಸಲಿರುವರು. ಅರಣ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅಧ್ಯಕ್ಷತೆ ವಹಿಸಲಿರುವರು. ಮುಖ್ಯ ಅತಿಥಿಯಾಗಿ ನಬಾರ್ಡ್ ಡಿಡಿಎಂ ಪ್ರಸಾದ್ ರಾವ್ ಭಾಗವಹಿಸಲಿರುವರು ಎಂದು ಡಾ.ಎಂ.ಎನ್. ರಾಜೇಂದ್ರ ಕುಮಾರ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಬ್ಯಾಂಕ್ ವ್ಯವಹಾರದಲ್ಲಿ ಗುರಿಮೀರಿದ ಸಾಧನೆ: ಡಾ.ಎಂ.ಎನ್ ರಾಜೇಂದ್ರಕುಮಾರ್
ಸಹಕಾರಿ ಸ್ವಾಮ್ಯದ ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಗಣನೀಯ ಪ್ರಗತಿಯನ್ನು ಕಾಣುತ್ತಿದ್ದು, 2015-16ನೆ ಸಾಲಿನ ಅಂತ್ಯಕ್ಕೆ 5,543 ಕೋಟಿ ರೂ. ವ್ಯವಹಾರವನ್ನು ನಡೆಸಿ ಗುರಿ ಮೀರಿದ ಸಾಧನೆಗೈದಿದೆ ಎಂದು ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್ ರಾಜೇಂದ್ರ ಕುಮಾರ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News