‘ವಿನಾಯಕ ಬಾಳಿಗಾರ ಹತ್ಯೆಯ ಕಾರಣಕ್ಕೆ ಧ್ವನಿಯಾಗೋಣ’

Update: 2016-04-02 18:44 GMT

ಆರ್‌ಟಿಐ ಕಾರ್ಯಕರ್ತರ ಸಂವಾದ
ಮಂಗಳೂರು, ಎ.2: ನಗರದ ಆರ್‌ಟಿಐ ಕಾರ್ಯಕರ್ತ ವಿನಾಯಕ ಪಾಂಡುರಂಗ ಬಾಳಿಗಾರ ಹತ್ಯೆ ಆರೋಪಿಗಳನ್ನು ಬಂಧನಕ್ಕೆ ಒತ್ತಾಯಿಸುವ ಜೊತೆಯಲ್ಲೇ ಅವರ ಹತ್ಯೆಗೆ ಕಾರಣವಾದ, ಅವರು ಕೈಗೆತ್ತಿಕೊಂಡಿದ್ದ ಪ್ರಕರಣಗಳನ್ನು ನಾವು ಮುಂದುವರಿಸುವ ಮೂಲಕ ಅವರ ಸಾವಿಗೊಂದು ಗೌರವ ಸಲ್ಲಿಸಬೇಕು. ಸಮಾಜದಲ್ಲಿ ನ್ಯಾಯಕ್ಕಾಗಿ ಹೋರಾಡುವ ಒಬ್ಬ ಆರ್‌ಟಿಐ ಕಾರ್ಯಕರ್ತನನ್ನು ಕೊಂದರೆ ನೂರಾರು ಕಾರ್ಯಕರ್ತರು ಹುಟ್ಟಿಕೊಳ್ಳುತ್ತಾರೆಂಬ ಭಯವನ್ನು ಭ್ರಷ್ಟರಲ್ಲಿ ಮೂಡಿಸಬೇಕು’’.

ಇಂತಹದೊಂದು ಆಗ್ರಹ ಪೂರ್ವಕ, ಒಕ್ಕೊರಳ ಧ್ವನಿ ನಗರದ ಆರ್‌ಟಿಐ ಬಳಕೆ ದಾರರಿಂದ ವ್ಯಕ್ತವಾಯಿತು. ವೆಲೆನ್ಶಿಯಾದ ರೋಶನಿ ನಿಲಯ ಕಾಲೇಜು ಸಭಾಂಗಣದಲ್ಲಿ ಶನಿವಾರ ನಡೆದ ನಗರದ ಆರ್‌ಟಿಐ ಬಳಕೆದಾರರ ಜೊತೆಗಿನ ಸಂವಾದ ಕಾರ್ಯ ಕ್ರಮದಲ್ಲಿ ಈ ಅಭಿಪ್ರಾಯ ವ್ಯಕ್ತವಾಯಿತು.

ಆರ್‌ಟಿಐ ಕಾರ್ಯಕರ್ತ ಹಾಗೂ ರಾಜಸ್ಥಾನ ದಲ್ಲಿ ಅರುಣಾ ರಾಯ್ ನೇತೃತ್ವದಲ್ಲಿ ಆರಂಭಿಸಿದ ರಾಜಸ್ಥಾನ್ ಮಜ್ದೂರ್ ಕಿಸಾನ್ ಶಕ್ತಿ ಸಂಘಟನೆ (ಎಂಕೆಎಸ್‌ಎಸ್)ಯ ಪ್ರತಿನಿಧಿ ನಿಖಿಲ್ ಶೆಣೈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
 ‘‘ಕೊಲೆ ಆರೋಪಿಗಳ ಹುಡುಕಾಟಕ್ಕೆ ಕೇವಲ ಒತ್ತಡ ಹೇರುವ ಬದಲು, ವಿನಾಯಕ ಯಾವ ಪ್ರಕರಣವನ್ನು ಕೈಗೆತ್ತಿಕೊಂಡಿದ್ದರು, ಯಾಕಾಗಿ ಕೊಲೆ ಯಾದರು ಎಂಬ ವಿಷಯವನ್ನು ಹಿಂಬಾಲಿಸಿ ಅದರ ಬೆನ್ನು ಹಿಡಿಯುವ ಪ್ರಯತ್ನ ನಡೆಸಿದರೆ, ನ್ಯಾಯಕ್ಕಾಗಿ ಹೋರಾಡುವ ಆರ್‌ಟಿಐ ಕಾರ್ಯಕರ್ತನ ಹತ್ಯೆ ನೂರಾರು ಆರ್‌ಟಿಐ ಕಾರ್ಯಕರ್ತರ ಸೃಷ್ಟಿಗೆ ಕಾರಣವಾಗುತ್ತದೆ ಎಂಬ ಪ್ರಬಲವಾದ ಸಂದೇಶದ ಸಮಾಜದಲ್ಲಿ ರವಾನೆಯಾಗುತ್ತದೆ’’ ಎಂದು ನಗರದ ಸಾಮಾಜಿಕ ಹೋರಾಟಗಾರ್ತಿ ವಿದ್ಯಾ ದಿನಕರ್ ಅಭಿಪ್ರಾಯಿಸಿದರು. ಇದನ್ನು ಸಮರ್ಥಿಸಿ ಮಾತನಾಡಿದ ನಿಖಿಲ್ ಶೆಣೈ, ‘‘ವಿನಾಯಕ ಬಾಳಿಗಾರ ಹತ್ಯೆ ಕುರಿತಂತೆ ಮುಖ್ಯಮಂತ್ರಿಗೆ ಪತ್ರವೊಂದನ್ನು ಬರೆದು, ಅವರು ಕೈಗೆತ್ತಿಕೊಂಡಿದ್ದ ಪ್ರಕರಣಗಳ ಮೂಲ ವನ್ನು ಕಂಡುಕೊಂಡು ಅದಕ್ಕೆ ನ್ಯಾಯ ಒದಗಿಸು ವಂತೆಯೂ ಆರ್‌ಟಿಐ ಕಾರ್ಯಕರ್ತರು ಮುಂದಾ ಗಬೇಕು’’ ಎಂದು ಪ್ರತಿಪಾದಿಸಿದರು. ರಾಜಸ್ಥಾನದಲ್ಲಿ ನರೇಗಾ ಸೇರಿದಂತೆ ಜನ ಸಾಮಾನ್ಯರ ಸಮಸ್ಯೆಗಳನ್ನು ಆರ್‌ಟಿಐ ಮೂಲಕ ಪ್ರಶ್ನಿಸಿ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಎಂಕೆಎಸ್‌ಎಸ್ ದಿಟ್ಟ ಹೋರಾಟ ಮಾಡುತ್ತಿದೆ. ಅಣೆಕಟ್ಟು, ಕಟ್ಟಡ ನಿರ್ಮಾಣಗಳಲ್ಲಿನ ಅವ್ಯವಹಾರ ಪ್ರಕರಣಗಳ ಜಾಡು ಹಿಡಿದು ಅದನ್ನು ಪರಿಶೀಲನೆ ನಡೆಸುವುದಲ್ಲದೆ, ಈ ಬಗ್ಗೆ ಸ್ಥಳೀಯರಿಂದಲೇ ಮಾಹಿತಿ ಸಂಗ್ರಹಿಸಿ, ಅವರನ್ನು ಜಾಗೃತಿಗೊಳಿಸುವುದು, ಅವ್ಯಹಾರ ಪ್ರಕರಣಗಳ ಕುರಿತು ಎಫ್‌ಐಆರ್ ದಾಖಲಿಸುವಂತಹ ಕಾರ್ಯವನ್ನು ಸಂಘಟನೆ ಮಾಡುತ್ತಿದೆ. ಜನರನ್ನು ಜಾಗೃತಗೊಳಿಸುವ ನಿಟ್ಟಿನಲ್ಲಿ ಗ್ರಾಮದ ಜನರ ಬಿಡುವಿನ ವೇಳೆ ಹಾಡು, ಬೀದಿ ನಾಟಕಗಳ ಮೂಲಕ ಜಾಗೃತಿ ಮೂಡಿಸಲಾಗುತ್ತದೆ ಎಂದು ಅವರು ವಿವರಿಸಿದರು. ವಿವಿಧ ಅಭಿಪ್ರಾಯಗಳನ್ನು ಮಂಡಿಸಿದ ಆರ್‌ಟಿಐ ಬಳಕೆದಾರರು, ಕೇವಲ ಒಂದು ವಿಷಯ ವನ್ನು ಗುರಿಯಾಗಿಸಿ ಮಾಹಿತಿ ಪಡೆ ಯುವ ಬದಲು ಪೂರ್ಣ ರೀತಿಯಲ್ಲಿ ಕೇಳಿದರೆ ವಿವಿಧ ಆಯಾಮಗಳ ಬಗ್ಗೆ ಸರಿಯಾದ ಮಾಹಿತಿ ದೊರೆಯುತ್ತದೆ ಹಾಗೂ ಆರ್‌ಟಿಐ ಕಾರ್ಯ ಕರ್ತರು ಒಗ್ಗಟ್ಟು ಪ್ರದರ್ಶಿಸಬೇಕು. ಈ ನಿಟ್ಟಿನಲ್ಲಿ ಮಾಹಿತಿ ಹಂಚಿಕೆಯ ಕುರಿತು ಸಾಮಾಜಿಕ ಜಾಲ ತಾಣವನ್ನು ಬಳಸಿಕೊಳ್ಳುವ ಕುರಿತಂತೆಯೂ ನಿರ್ಧ ರಿಸಲಾಯಿತು. ಪಡಿ ಸಂಸ್ಥೆಯ ರೆನ್ನಿ ಡಿಸೋಜ, ನಟೇಶ್ ಉಳ್ಳಾಲ್ ಹಾಗೂ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News