ತುಂಬೆ ನದಿಯಲ್ಲಿ ಪುರಾತನ ಕಾಲದ ಶಿವಲಿಂಗ ಪತ್ತೆ

Update: 2016-04-03 09:00 GMT

ಬಂಟ್ವಾಳ: ತಾಲೂಕಿನ ತುಂಬೆ ಗ್ರಾಮದ ನೇತ್ರಾವತಿ ನದಿಯಲ್ಲಿ ಪುರಾತನ ಕಾಲದ ಶಿವಲಿಂಗವೊಂದನ್ನು ಶನಿವಾರ ಪತ್ತೆಹಚ್ಚಲಾಗಿದೆ. 

ಸುಮಾರು ಆರು ಅಡಿ ಉದ್ದದ ಈ ಶಿವಲಿಂಗ ಎಂಟು ವರ್ಷದ ಹಿಂದೆ ಪತ್ತೆಯಾಗಿತ್ತಾದರೂ ಅದನ್ನು ಮತ್ತೆ ನದಿಯಲ್ಲಿ ಹೊಂಡ ತೆಗೆದು ಹೂಳಲಾಗಿತ್ತು. 

ಇತ್ತೀಚಿನ ನಿರ್ಧಾರದಂತೆ ಶನಿವಾರ ಜೆಸಿಬಿ ಯಂತ್ರದ ಮೂಲಕ ನದಿಯಲ್ಲಿ ಹುಡುಕಾಡಿ ಪತ್ತೆ ಹಚ್ಚಲಾಗಿದೆ. ಈ ಶಿವಲಿಂಗವನ್ನು ತುಂಬೆ ಮಹಲಿಂಗೇಶ್ವರ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸುವ ನಿರ್ಧಾರ ಮಾಡಲಾಗಿದೆ ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News