ಎ.26ರಿಂದ ಮೇ 1ರತನಕ ಉಡುಪಿ ಕ್ರಿಕೆಟ್ ಕ್ಲಬ್ ಆಯೋಜಿಸುವ ಅಂತರಾಷ್ಟ್ರೀಯ ಹಾರ್ಡ್ ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾಟ

Update: 2016-04-03 13:34 GMT

ಉಡುಪಿ ಕ್ರಿಕೆಟ್ ಕ್ಲಬ್ ಆಯೋಜಿಸುವ ಅಂತರಾಷ್ಟ್ರೀಯ ಹಾರ್ಡ್ ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾಟವು ಉಡುಪಿಯ ಎಂಜಿಎಂ ಕ್ರೀಡಾಂಗಣದಲ್ಲಿ ದಿನಾಂಕ ಎಪ್ರಿಲ್ 26ರಿಂದ ಮೇ 1ರತನಕ ನಡೆಯಲಿದೆ. ಸಾಧಿಕ್ ಕಾಪು ಇವರ ನೇತೃತ್ವದಲ್ಲಿ ಹಾರ್ಡ್ ಟೆನಿಸ್ ಬಾಲ್‌ನಲ್ಲಿ ಮೂರು ಅಂತರಾಷ್ಟ್ರೀಯ ಕ್ರಿಕೆಟ್ ಪಂದ್ಯಾಟ ಅಜುಮಾನ್, ದುಬೈ, ಶಾರ್ಜದಲ್ಲಿ ಆಯೋಜಿಸಲಾಗಿತ್ತು. ಸ್ಥಳೀಯ ಯುವಕರಿಗೆ ಹಾರ್ಡ್ ಟೆನಿಸ್ ಬಾಲ್‌ನಲ್ಲಿ ಪ್ರೇರಣೆ ನೀಡುವ ಉದ್ದೇಶದಿಂದ ಭಾರತದ ಇತಿಹಾಸದಲ್ಲೇ ಮೊತ್ತ ಮೊದಲ ಬಾರಿಗೆ ಉಡುಪಿಯಲ್ಲಿ ಕ್ರಿಕೆಟ್ ಪಂದ್ಯಾಟವನ್ನು ಆಯೋಜಿಸಲಾಗಿದೆ.

ಉಡುಪಿಯಲ್ಲಿ ನಡೆಯಲಿರುವ ಕ್ರಿಕೆಟ್ ಪಂದ್ಯಾಟದಲ್ಲಿ ದುಬೈ, ಅಬುದಾಬಿ, ಶಾರ್ಜ, ಕತಾರ್, ಕುವೈಟ್, ಸೌದಿ ಅರೇಬಿಯಾ, ಕೊಲ್ಕತ್ತಾ, ಗುಜರಾತ್, ಗೋವಾ, ಮಹರಾಷ್ಟ್ರ, ಕೇರಳ, ಆಂಧ್ರ, ತಲಂಗಾಣ, ಕರ್ನಾಟಕದ ಮಂಗಳೂರು ಮತ್ತು ಉಡುಪಿ ತಂಡಗಳು ಭಾಗವಹಿಸಲಿದೆ. ಪಂದ್ಯಾಕೂಟ ಲೀಗ್ ಮಾದರಿಯಲ್ಲಿ ನಡೆಯಲಿದೆ. ಪಂದ್ಯಾಕೂಟವು 10ಓವರ್‌ಗಳಿಗೆ ಸೀಮಿತವಾಗಿದೆ.

ವಿಜೇತ ತಂಡಕ್ಕೆ 20ಲಕ್ಷ ರೂ ಹಾಗೂ ಶಾಶ್ವತ ಫಲಕ, ರನ್ನರ್ಸ್‌ ತಂಡಕ್ಕೆ 10ಲಕ್ಷ ರೂ ಹಾಗೂ ಶಾಶ್ವತ ಫಲಕ, ತೃತೀಯ ಮತ್ತು ಚತುರ್ಥ ತಂಡಕ್ಕೆ ತಲಾ ಎರಡು ಲಕ್ಷ ರೂ ಹಾಗೂ ಶಾಶ್ವತ ಫಲಕ ನೀಡಲಾಗುವುದು. ಅಲ್ಲದೆ ವೈಯಕ್ತಿಕವಾಗಿ ಸರಣಿ ಶ್ರೇಷ್ಠ ಬಹುಮಾನ ಕಾರು, ಪಂದ್ಯಾ ಶ್ರೇಷ್ಠ-ಬೈಕ್, ಉತ್ತಮ ದಾಂಡಿಗನಿಗೆ ಬೈಕ್, ಉತ್ತಮ ಎಸೆತಗಾರನಿಗೂ ಬೈಕ್ ನೀಡಿ ಗೌರವಿಸಲಾಗುವುದು. ಪ್ರತಿ ಪಂದ್ಯದಲ್ಲೂ ಪಂದ್ಯಾಶ್ರೇಷ್ಠ ವಿಜೇತರಿಗೆ ಶಾಶ್ವತ ಫಲಕ ಹಾಗೂ ನಗದು ನೀಡಿ ಗೌರವಿಸಲಾಗುವುದು.

ಭಾರತ ಕ್ರಿಕೆಟ್ ತಂಡದ ತಾರೆಯರು, ಸಿನಿಮಾ ತಾರೆಯರು ಹಾಗೂ ಕೇಂದ್ರ, ರಾಜ್ಯ ಸರ್ಕಾರದ ಸಚಿವರುಗಳು ಪಂದ್ಯಾಕೂಟದಲ್ಲಿ ಭಾಗವಹಿಸಲಿದ್ದಾರೆ.

ವಿಶೇಷತೆಗಳು:

► ಪಂದ್ಯಾಕೂಟವು ಹೊನಲು ಬೆಳಕಿನಲ್ಲಿ ನಡೆಯಲಿದ್ದು, ಬೆಳಗ್ಗೆ ಗಂಟೆ 7ರಿಂದ ರಾತ್ರಿ 12ಗಂಟೆಯವರೆಗೆ ನಡೆಯಲಿದೆ.

► ಅಂತರಾಷ್ಟ್ರೀಯ ಮಾದರಿಯ ಕ್ರಿಕೆಟ್ ಕ್ರೀಡಾಂಗಣವನ್ನು ಸಿದ್ಧಪಡಿಸಲಾಗುವವುದು.

► ಮೈದಾನಕ್ಕೆ ಹಚ್ಚಹಸಿರಿಗಾಗಿ ಉದ್ಯಾನವನದ ಹುಲ್ಲುಗಳನ್ನೊ ಹೊದಿಸಲಾಗುವುದು.

► 30ಸಾವಿರ ಮಂದಿ ಪ್ರೇಕ್ಷಕರು ಪಂದ್ಯಾಕೂಟ ವೀಕ್ಷಿಸಲು ಅನುಕೂಲಕತೆಗೆ ಗ್ಯಾಲರಿ.

► ಟಿವಿ ಹಾಗೂ ಯೂಟ್ಯೂಬ್, ಅಂತರ್ಜಾಲದಲ್ಲಿ ನೇರ ಪ್ರಸಾರ

► ಪ್ರೇಕ್ಷಕರಿಗೆ ಉಚಿತ ಪ್ರವೇಶ.

► ಥರ್ಡ್ ಅಂಪಾಯರ್ ಅಳವಡಿಸಲಾಗುವುದು.

► ಬಾಂಗ್ಲಾ ಹಾಗೂ ಶ್ರೀಲಂಕಾದ ಸ್ಥಳೀಯ ಆಟಗಾರರು ಪಂದ್ಯಾಕೂಟದಲ್ಲಿ ಗಲ್ಫ್ ತಂಡದಿಂದ ಪ್ರತಿನಿಧಿಸಲಿದ್ದಾರೆ.

► ಪಂದ್ಯಾಕೂಟದ ಒಟ್ಟು ವೆಚ್ಚ 1.30 ಕೋಟಿ ರೂ.

► ಉಡುಪಿಯಲ್ಲಿ ಮೊತ್ತಮೊದಲ ಬಾರಿಗೆ ಹಾರ್ಡ್ ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾಟ

► ಸ್ಥಳೀಯ ಯುವಕರಿಗೆ ಹಾರ್ಡ್ ಟೆನಿಸ್ ಬಾಲ್‌ನ ಪರಿಚಯ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News