ಕುರ್ನಾಡು: ನೂತನ ತಾಜುಲ್ ಉಲಮಾ ಮಸೀದಿ ಉದ್ಘಾಟನೆ

Update: 2016-04-03 15:38 GMT
ಸುಬ್ಬಗುಳಿಯಲ್ಲಿ ನೂತನವಾಗಿ ನಿರ್ಮಾಣ ಮಾಡಿದ ತಾಜುಲ್ ಉಲಮಾ ಮಸೀದಿಯನ್ನು ಅಸ್ಸಯ್ಯದ್ ಅಲ್ ಹಾಮಿದ್ ಫಝಲ್ ಕೋಯಮ್ಮ ತಂಙಳ್ ಕೂರ ಉದ್ಘಾಟಿಸಿದರು.

ಉಳ್ಳಾಲ:ಮುಸ್ಲಿಂ ಸಮುದಾಯಕ್ಕೆ ಧಾರ್ಮಿಕ ಶಿಕ್ಷಣ ಪಡೆಯಲು ಮತ್ತು ಧಾರ್ಮಿಕ ವಿದಿವಿಧಾನಗಳನ್ನು ಅನುಕರಿಸಿಕೊಂಡು ಬರಲು ಮಸೀದಿಯ ಅವಶ್ಯಕತೆ ಬಹಳಷ್ಟಿದೆ. ಮುಸ್ಲಿಂ ಸಮುದಾಯಕ್ಕೆ ಅಗತ್ಯವಾಗಿ ಬೇಕಾಗಿರುವ ಅಲ್ಲಾಹನ ಮನೆಯಾಗಿರುವ ಮಸೀದಿ ನಿರ್ಮಾಣವನ್ನು ಸುಬ್ಬಗುಳಿಯಲ್ಲಿ ಸ್ಥಾಪಿಸಿರುವುದು ಉತ್ತಮವಾದ ಕಾರ್ಯ. ಇದರ ಸೇವೆಗೆ ಎಲ್ಲರೂ ಸಿದ್ದರಾಗಬೇಕು ಎಂದು ಉಳ್ಳಾಲ ಖಾಝಿ ಅಸ್ಸಯ್ಯದ್ ಅಲ್ ಹಾಮಿದ್ ಫಝಲ್ ಕೋಯಮ್ಮ ತಂಙಳ್ ಕೂರ ಹೇಳಿದರು.

 ಅವರು ಕುರ್ನಾಡು ಸಮೀಪದ ಸುಬ್ಬಗುಳಿಯಲ್ಲಿ ನೂತನವಾಗಿ ನಿರ್ಮಾಣ ಮಾಡಿದ ತಾಜುಲ್ ಉಲಮಾ ಮಸೀದಿಯನ್ನು ಭಾನುವಾರ ಉದ್ಘಾಟನೆ ಮಾಡಿ ಮಾತನಾಡಿದರು.

 ಶರಪ್ಪುಲ್ ಉಲಮಾ ಶೈಖುನಾ ಅಬ್ಬಾಸ್ ಮುಸ್ಲಿಯಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಚಿವ ಯು.ಟಿ. ಖಾದರ್, ಎಸ್‌ವೈಎಸ್ ಮುಡಿಪು ಸೆಂಟರ್ ಅಧ್ಯಕ್ಷ ಎಸ್.ಕೆ. ಖಾದರ್ ಹಾಜಿ, ಚೆಯ್ಯಬ್ಬ, ಸಿಟಿಎಂ ತಂಙರ್ಳ, ಎಂ.ಕೆ. ಅಬ್ದುಲ್ ರಹ್ಮಾನ್ ಸಖಾಫಿ, ಕೆ.ಬಿ. ಅಬ್ದುಲ್ ರಹ್ಮಾನ್ ಮದನಿ, ಬಾವಾ ಹಾಜಿ, ಅಬೂಬಕರ್ ಸಿದ್ದೀಕ್ ಮುಸ್ಲಿಯಾರ್, ರಝಾಕ್ ಮುಸ್ಲಿಯಾರ್, ಅಬೂಬಕರ್ ಮಧ್ಯನಡ್ಕ, ಅಬ್ದುಲ್ ಖಾದರ್ ಸಖಾಫಿ, ಉಸ್ಮಾನ್ ರೌವುರಿ, ಎಂ.ಕೆ. ಅಶ್ರಫ್, ಅಬ್ದುಲ್ ಶುಕೂರು ಮೊದಲಾದವರು ಉಪಸ್ಥಿತರಿದ್ದರು. ಕೆ.ಇ. ಅಬ್ದುಲ್ ಖಾದರ್ ಸಾಲೆತ್ತೂರು ಅತಿಥಿಗಳನ್ನು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News