ಉಳ್ಳಾಲ: ಬ್ಯಾರಿಕೇಡ್ ಉದ್ಘಾಟನೆ

Update: 2016-04-03 15:54 GMT

ಉಳ್ಳಾಲ. ಮಂಗಳೂರು ಕೊಣಾಜೆ ರಸ್ತೆಯಲ್ಲಿ ವಾಹನ ಸಂಚಾರ ದಟ್ಟವಾಗಿರುವುದರಿಂದ ಸಂಚಾರವನ್ನು ನಿಯಂತ್ರಿಸುವ ಸಲುವಾಗಿ ಅಲ್ ಮದೀನ ಸಂಸ್ಥೆಯ ವತಿಯಿಂದ ನಿರ್ಮಿಸಿದ ಬ್ಯಾರಿಕೇಡ್‌ನ್ನು ಮಂಗಳೂರು ಪೊಲೀಸ್ ಸಹಾಯಕ ಆಯುಕ್ತರಾದ ಕಲ್ಯಾಣ್ ಶೆಟ್ಟಿಯವವರು ಭಾನುವಾರ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಸರಕಾರ ಮಾಡಬೇಕಾದ ಕೆಲಸವನ್ನು ಅಲ್ ಮದೀನ ಸಂಸ್ಥೆ ಮಾಡಿ ಇಲಾಖೆಗೆ ಒಪ್ಪಿಸಿರುವುದು ಸ್ವಾಗತಾರ್ಹ. ಇಂತಹ ಕಾರ್ಯದಿಂದ ಸಮಾಜಕ್ಕೆ ಪೂರಕವಾದ ವಾತಾವರಣ ನಿರ್ಮಾಣವಾಗಲಿ ಎಂದು ಹಾರೈಸಿದರು.

  ಅಲ್ ಮದೀನ ಮೆನೇಜರ್ ಅಬ್ದುಲ್ ಖಾದರ್ ಸಖಾಫಿ ದುವಾ ನೆರವೇರಿಸಿದರು. ಕೊಣಾಜೆ ಇನ್ಸ್ ಪೆಕ್ಟರ್ ಅಶೋಕ್, ಎಸ್‌ಐ ಸುಧಾಕರ್, ಕೊಣಾಜೆ ಗ್ರಾ.ಪಂ. ಅಧ್ಯಕ್ಷ ಸೌಕತ್ ಕೊಣಾಜೆ, ಮಂಜನಾಡಿ ಗ್ರಾ.ಪಂ. ಅಧ್ಯಕ್ಷ ಮಹಮ್ಮದ್ ಅಸೈ, ಸದಸ್ಯರಾದ ಕುಂಞಿಬಾವ ಕಲ್ಕಟ್ಟ ಮೊಹಮ್ಮದ್ ನಾಟೆಕಲ್, ಸೌಕತ್ ದೇರಳಕಟ್ಟೆ, ಪೊಡಿಯಬ್ಬ ಹಾಜಿ ಕಲ್ಕಟ್ಟ ಮೊದಲಾದವರು ಉಪಸ್ಥಿತರಿದ್ದರು. ಮಹಮ್ಮದ್ ಮಾಸ್ಟರ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News