ಕಿಶೋರ್ ವಿಜ್ಞಾನಿ ಸ್ಪರ್ಧೆ: ಗೌರವಧನಕ್ಕೆ ಆಯ್ಕೆ

Update: 2016-04-03 18:29 GMT

ಮಂಗಳೂರು, ಎ.3: ನಗರದ ಸೆಂಟರ್ ಫಾರ್ ಅಡ್ವಾನ್ಸ್‌ಡ್ ಲರ್ನಿಂಗ್(ಸಿಎ್ಎಎಲ್) ನಲ್ಲಿ ತರಬೇತಿ ಪಡೆ ಯುತ್ತಿರುವ 10 ವಿದ್ಯಾರ್ಥಿಗಳು ಭಾರತ ಸರಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ನಡೆಸಿದ ಕಿಶೋರ್ ವಿಜ್ಞಾನಿ ಪ್ರೋತ್ಸಾಹ ಯೋಜನೆಯ ಸ್ಪರ್ಧೆಯಲ್ಲಿ ಆಯ್ಕೆಗೊಂಡು ರಾಷ್ಟ್ರೀಯ ಗೌರವಧನ ಪಡೆಯಲು ಅರ್ಹರಾಗಿದ್ದಾರೆ ಎಂದು ಪ್ರಾಂಶುಪಾಲ ಸೆವೆರಿನ್ ರೊಸಾರಿಯೊ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಸಿಎ್ಎಎಲ್‌ನಲ್ಲಿ ತರಬೇತಿ ಪಡೆದಿರುವ ವಿದ್ಯಾರ್ಥಿ ಗಳಾದ ಕೆನ್ರಿಕ್ ಪಿಂಟೊ, ಅಕ್ಷರ ಶರ್ಮಾ ವಿವಿನ್ ಪೆರಿಸ್, ಶಶಾಂಕ್ ಪಿ., ಶಿಶಿರ್‌ದೀಪ್, ಧನುಶ್, ಚಿನ್ಮಯ ಎಚ್.ಎಸ್., ವಿ.ಅನರ್ಘ್ಯ, ಶಶಾಂಕ್ ಕಟ್ಟಾ ಹಾಗೂ ರಂಜನಾ ಕಾಸಂಗೇರಿ ಬಿ. ಆಯ್ಕೆಯಾದವರು.

ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಸಂಯೋಜಕ ವಿಜಯ್ ಮೋರಸ್, ವಿದ್ಯಾರ್ಥಿ ಕೆನ್ರಿಕ್ ಪಿಂಟೋ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News