ಮಂಗಳೂರು ವಿವಿಯಲ್ಲಿ ಚಲನ ಚಿತ್ರೋತ್ಸವಕ್ಕೆ ಚಾಲನೆ

Update: 2016-04-04 15:50 GMT

ಮಂಗಳೂರು,ಎ.4: ಮಂಗಳೂರು ವಿಶ್ವವಿದ್ಯಾನಿಲಯದ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗ ವತಿಯಿಂದ ಆಯೋಜಿಸಲಾದ 3 ದಿವಸಗಳ ಚಲನ ಚಿತ್ರೋತ್ಸವಕ್ಕೆ ಕನ್ನಡ ಸಿನೆಮಾ ನಿರ್ದೇಶಕರು ಮತ್ತು ಚಲನಚಿತ್ರ ಕಥೆಗಾರ ಶಶಿಕಾಂತ್ ಗಟ್ಟಿಯವರು ಇಂದು ಮಂಗಳೂರು ವಿವಿ ಹಳೆ ಸೆನೆಟ್ ಸಭಾಂಗಣದಲ್ಲಿ ಚಾಲನೆ ನೀಡಿದರು.
  
ಬಳಿಕ ಮಾತನಾಡಿದ ಅವರು, ಸಿನೆಮಾ ನಿರ್ದೇಶಕರಾದವನು ಸೃಜನಶೀಲತೆ ಹೊಂದಿರಬೇಕು. ಎಲ್ಲಾ ವಿಷಯಗಳ ಬಗ್ಗೆ ಆಳವಾಗಿ ಅಧ್ಯಯನ ಮಾಡಿ ನಂತರ ಅದಕ್ಕೆ ರೂಪು ರೇಷೆಯನ್ನು ನೀಡುವ ಕಲೆ ಆತನಲ್ಲಿ ಕರಗತವಾಗಿರಬೇಕು. ಅದೇ ರೀತಿ ವಿಭಿನ್ನ ಶೈಲಿಯಲ್ಲಿ ಯೋಚಿಸುವವನಾಗಿರಬೇಕು. ಇತ್ತೀಚಿನ ದಿನಗಳಲ್ಲಿ ಕಾದಂಬರಿ ಆಧಾರಿತ ಸಿನೆಮಾಗಳು ಅತ್ಯಂತ ಪ್ರಚಲಿತವಾಗಿದ್ದು, ಅದರಲ್ಲಿ ಅನೇಕ ವಿಷಯಗಳು ಲಭ್ಯವಾಗಿರುತ್ತದೆ ಎಂದು ಅವರು ತಿಳಿಸಿದರು. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಪ್ರಾಧ್ಯಾಪಕರಾದ ಪ್ರೊ. ಜಿ.ಪಿ ಶಿವರಾಮ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಾಸಕ್ಕಾಗಿ ಚಲನ ಚಿತ್ರೋತ್ಸವವನ್ನು ಕಳೆದ 18 ವರ್ಷಗಳಿಂದ ನಡೆಸಲಾಗುತ್ತಿದೆ ಎಂದರು.
ವಿಭಾಗದ ಮುಖ್ಯಸ್ಥರಾದ ಪ್ರೊ.ವಹೀದಾ ಸುಲ್ತಾನಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಿರಣ್ ಕಾರ್ಯಕ್ರಮ ನಿರೂಪಿಸಿದರು. ಮುಹಮ್ಮದ್ ನವಾಫ್ ವಂದಿಸಿದರು.

 *ಸಿನೆಮಾಗಳು: ಈ ಚಲನ ಚಿತ್ರೋತ್ಸವವು ಎ.4 ರಿಂದ ಎ. 6ರ ವರೆಗೆ ನಡೆಯಲಿದ್ದು, ಎ.5 ರಂದು ಮಜಿದ್ ಮಜೀದಿ ನಿರ್ದೇಶನದ ‘ದಿ ಸೊಂಗ್ಸ್ ಆಫ್ ಸ್ಫಾರೋ’ ಇರಾನಿ ಚಿತ್ರ ಹಾಗೂ ಎ.6ರಂದು ಕೆತನ್ ಮೆಹತಾ ನಿರ್ದೇಶನದ ‘ದಿ ವೌಂಟೈನ್ ಮ್ಯಾನ್’ ಎಂಬ ಹಿಂದಿ ಸಿನೆಮಾ ಪ್ರದರ್ಶನ ಗೊಳ್ಳಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News