ಮಂಗಳೂರು : ಇಕ್ರಾ ಅಕಾಡಮಿಯಿಂದ ಪ್ರವಾದಿ ಕುರಿತು ಪ್ರಬಂಧ ಸ್ಪರ್ಧೆ

Update: 2016-04-04 18:09 GMT

 ಮಂಗಳೂರು :ಇಕ್ರಾ ರಿಸರ್ಚ್ ಅಕಾಡಮಿ ಮತ್ತು ಪಬ್ಲಿಕೇಶನ್ ವತಿಯಿಂದ ಪ್ರವಾದಿ ಮುಹಮ್ಮದ್ ಪೈಗಂಬರ್‌ರವರ ಬಗ್ಗೆ ಬಿಡುಗಡೆಗೊಂಡಿರುವ ‘‘ದಿ ಪ್ರೊಫೆಟ್ ಆಫ್ ಹುಮಾನಿಟಿ ಕಂಪ್ಯಾಶನ್’’ ಪುಸ್ತಕದ ಆಧಾರಿಸಿ ಪ್ರವಾದಿ ಮುಹಮ್ಮದ್ ಪೈಗಂಬರ್‌ರವರ ಬಗ್ಗೆ ಇಂಗ್ಲೀಷ್ ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.

        ಪ್ರಥಮ ಬಹುಮಾನ ವಿಜೇತರಿಗೆ ಚಿನ್ನದ ಪದಕ ,ದ್ವಿತೀಯ ಬಹುಮಾನ ವಿಜೇತರಿಗೆ 10,000 ರೂ ಹಾಗೂ ತೃತೀಯ ಬಹುಮಾನ ವಿಜೇತರಿಗೆ 5,000 ರೂ ಕೊಡಲಾಗುವುದು . ಅದೇರೀತಿ 10 ಪ್ರೋತ್ಸಾಹಕ ಬಹುಮಾನಗಳನ್ನು ಕೊಡಲಾಗುವುದು.

     ಎ 4 ಗಾತ್ರದ ನಾಲ್ಕುಪುಟಗಳ ಪ್ರಬಂಧವನ್ನು ಇಕ್ರಾ ಅಕಾಡಮಿ ಫಾರ್ ರೀಸರ್ಚ್ ಆ್ಯಂಡ್ ಪಬ್ಲಿಕೇಶನ್, ಕಲ್ಪನಾ ರಸ್ತೆ ,ಮಂಗಳೂರು 575002 ಈ ವಿಳಾಸಕ್ಕೆ ಎಪ್ರಿಲ್ 15ರೊಳಗಡೆ ಸಲ್ಲಿಸಬೇಕು.

     ಸ್ಪರ್ಧೆಯ ನಿಯಮಾವಳಿಗಳ ಹೆಚ್ಚಿನ ಮಾಹಿತಿಗಾಗಿ ಸಂಸ್ಥೆಯ ವೆಬ್‌ಸೈಟ್ www.iqramangalore.org ಸಂರ್ಪಕಿಸಬಹುದಾಗಿದೆ ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News