ಚುನಾವಣಾ ವೇಳಾಪಟ್ಟಿ ನಿಗದಿ

Update: 2016-04-04 18:50 GMT

ಉಡುಪಿ, ಎ.4: ಉಡುಪಿ ಜಿಲ್ಲೆಗೆ ಸಂಬಂಧಿಸಿದಂತೆ ಕುಂದಾಪುರ ತಾಲೂಕಿನ 10 ಗ್ರಾಪಂಗಳ 12 ಕ್ಷೇತ್ರಗಳ 12 ಸದಸ್ಯ ಸ್ಥಾನಗಳು, ಉಡುಪಿ ತಾಲೂಕಿನ 12 ಗ್ರಾಪಂಗಳ 15 ಕ್ಷೇತ್ರಗಳ 16 ಸದಸ್ಯ ಸ್ಥಾನಗಳು ಮತ್ತು ಕಾರ್ಕಳ ತಾಲೂಕಿನ 4 ಗ್ರಾಪಂಗಳ 5 ಕ್ಷೇತ್ರಗಳ 5 ಸದಸ್ಯ ಸ್ಥಾನಗಳು ಸೇರಿದಂತೆ 33 ಸದಸ್ಯ ಸ್ಥಾನಗಳು ರಾಜೀನಾಮೆ ಮತ್ತು ಇತರ ಕಾರಣದಿಂದ ತೆರವಾಗಿವೆ. ಈ ಸ್ಥಾನಗಳನ್ನು ತುಂಬಲು ಕರ್ನಾಟಕ ಪಂಚಾಯತ್‌ರಾಜ್ ನಿಯಮಗಳಿಗನುಗುಣವಾಗಿ ಜಿಲ್ಲಾಧಿಕಾರಿ ಡಾ.ವಿಶಾಲ್ ಆರ್. ಚುನಾವಣಾ ವೇಳಾಪಟ್ಟಿ ನಿಗದಿಪಡಿಸಿದ್ದಾರೆ.
ನಾಮಪತ್ರ ಸಲ್ಲಿಸಲು ಎ.7 ಕೊನೆಯ ದಿನವಾಗಿದ್ದು, ಎ.9 ನಾಮಪತ್ರಗಳ ಪರಿಶೀಲನೆ, ಎ.11 ಉಮೇದುವಾರಿಕೆಗಳನ್ನು ಹಿಂಪಡೆಯಲು ಕೊನೆಯ ದಿನವಾಗಿದ್ದು, 17ರಂದು ಮತದಾನ ನಡೆಯಲಿದೆ. ಎ.20ರಂದು ತಾಲೂಕು ಕೇಂದ್ರಗಳಲ್ಲಿ ಮತ ಎಣಿಕೆ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News