ಎಸೆಸೆಲ್ಸಿ ವೌಲ್ಯಮಾಪನ: ನಿಷೇಧಾಜ್ಞೆ

Update: 2016-04-05 18:39 GMT

ಉಡುಪಿ, ಎ.5: ಉಡುಪಿ ಜಿಲ್ಲೆಯಲ್ಲಿ ಎಸೆಸೆಲ್ಸಿ ವೌಲ್ಯಮಾಪನವು ಎ.14ರಿಂದ ಸುಮಾರು 15 ದಿನಗಳವರೆಗೆ ನಗರದ ಆರು ಕೇಂದ್ರಗಳಲ್ಲಿ ನಡೆಯಲಿದೆ.
ಆದಿಉಡುಪಿ ಪ್ರೌಢಶಾಲೆ ಆದಿಉಡುಪಿ, ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜು ಉಡುಪಿ, ಸಂತ ಸಿಸಿಲಿ ಬಾಲಕಿಯರ ಪ್ರೌಢಶಾಲೆ ಉಡುಪಿ, ಸರಕಾರಿ ಪ್ರೌಢ ಶಾಲೆ ಉಡುಪಿ, ಕ್ರಿಶ್ಚಿಯನ್ ಪ್ರೌಢಶಾಲೆ ಉಡುಪಿ, ಯು.ಕಮಲಾ ಬಾಯಿ ಪ್ರೌಢಶಾಲೆ ಕಡಿಯಾಳಿ ಈ ಆರು ಕೇಂದ್ರಗಳಲ್ಲಿ ವೌಲ್ಯಮಾಪನ ನಡೆಯಲಿದೆ. ಈ ಕೇಂದ್ರಗಳ ಸುತ್ತಲೂ 200 ಮೀ. ಪ್ರದೇಶವನ್ನು ವೌಲ್ಯಮಾಪನ ಮುಗಿಯುವವರೆಗೆ ನಿಷೇಧಿತ ಪ್ರದೇಶವೆಂದು ಘೋಷಿಸಿ ಸೆಕ್ಷನ್ 144ರಂತೆ ಜಿಲ್ಲಾಧಿಕಾರಿ ಡಾ.ವಿಶಾಲ್ ಆರ್. ನಿಷೇಧಾಜ್ಞೆ ಹೊರಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News