ತುಳುನಾಡ ಸ್ವಾತಂತ್ರ ಹೋರಾಟಗಾರರ ನೆನಪು ಕಾರ್ಯಕ್ರಮ

Update: 2016-04-05 18:47 GMT

ಮಂಗಳೂರು,ಎ.5: ತುಳುನಾಡಿನ ಪ್ರಥಮ ಸ್ವಾತಂತ್ರ ಸಂಗ್ರಾಮವಾಗಿ ಗುರುತಿಸಿಕೊಂಡಿರುವ 1837ರಲ್ಲಿ ತುಳು ನಾಡಿನಲ್ಲಿ ಬ್ರಿಟಿಷರನ್ನು ಓಡಿಸಿ ಬ್ರಿಟಿಷ್ ಬಾವುಟವನ್ನು ಕಿತ್ತು ತುಳುನಾಡಿನ ಬಾವುಟ ಹಾರಿಸಿದ್ದ ತುಳುನಾಡಿನ ಸ್ವಾತಂತ್ರ ಹೋರಾಟಗಾರರನ್ನು ನೆನಪಿಸುವ ಕಾರ್ಯ ಕ್ರಮ ಕರ್ನಾಟಕ ತುಳು ಸಾಹಿತ್ಯ ಅಕಾಡಮಿ ಮತ್ತು ತುಳುನಾಡ ರಕ್ಷಣಾ ವೇದಿಕೆ ವತಿಯಿಂದ ಮಂಗಳವಾರ ಉರ್ವಸ್ಟೋರ್‌ನ ತುಳುಭವನದ ತುಳು ಚಾವಡಿಯಲ್ಲಿ ನಡೆಯಿತು.

1837ರ ಮಾ.29ರಂದು ಸುಳ್ಯದಿಂದ ಹೊರಟ ಕಲ್ಯಾಣ ಸ್ವಾಮಿ, ಕೆದಂಬಾಡಿ ರಾಮ ಗೌಡೆ, ಲಕ್ಷ್ಮಪ್ಪ ಬಂಗರಸೆ, ಹುಲಿಕುಂದ ನಂಜಯ್ಯೆ, ಉಪ್ಪಿನಂಗಡಿ ಮಂಜೆ ಮೊದ ಲಾದವರು ಎ.5ರಂದುಪ್ರಸ್ತುತ ಬಾವುಟ ಗುಡ್ಡ ಎಂಬಲ್ಲಿ ಹಾಕಲಾಗಿದ್ದ ಬ್ರಿಟಿಷರ ಪತಾಕೆಯನ್ನು ಕಿತ್ತು ತುಳುನಾಡಿನ ಬಾವುಟವನ್ನು ಹಾರಿಸಿ ಸ್ವಾತಂತ್ರ ಸಂಗ್ರಾಮಕ್ಕೆ ಮುನ್ನುಡಿ ಬರೆದಿದ್ದ ತುಳುನಾಡ ವೀರರನ್ನು ಸ್ಮರಿಸಲಾಯಿತು. ಕಸಾಪ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು ಮಾತನಾಡಿ, ಸ್ವಾತಂತ್ರ ಹೋರಾಟದ ಕಿಡಿ ಹೊತ್ತಿಸಿದವರು ತುಳುನಾಡಿನ ವೀರರಾಗಿದ್ದು, ತುಳು ಭಾಷೆಯನ್ನು ಉಳಿಸುವ ಕಾರ್ಯವನ್ನು ನಾವಿಂದು ಮಾಡಬೇಕಾಗಿದೆ. ತುಳುವರು ನೆಮ್ಮದಿ, ಮರ್ಯಾದೆಯಿಂದ ಬದುಕಬೇಕಾದರೆ ತುಳುರಾಜ್ಯ ಅನಿ ವಾರ್ಯವಾಗಿದೆ. ತುಳುವರ ಉದಾರ ತೆಯಿಂದಾಗಿ ಇಂದು ತುಳು ಭಾಷೆಗೆ ಅನ್ಯಾಯವಾಗುತ್ತಿದೆ. ಭಾಷಾವಾರು ಪ್ರಾಂತ ರಚನೆಯಾಗುವಾಗಲೂ ತುಳುವರು ಎಚ್ಚೆತ್ತುಕೊಳ್ಳಲಿಲ್ಲ. ಇದೀಗ ತುಳು ಭಾಷೆಯ ಲಿಪಿಯನ್ನು ಬಳಸುವ ಮೂಲಕ ತುಳುವನ್ನು ಸಂರಕ್ಷಿಸಬೇಕಾಗಿದೆ ಎಂದರು. ತುಳು ಅಕಾಡಮಿ ಅಧ್ಯಕ್ಷೆ ಜಾನಕಿ ಬ್ರಹ್ಮಾವರ ಅಧ್ಯಕ್ಷತೆ ವಹಿಸಿದ್ದರು. ತುಳುನಾಡ ರಕ್ಷಣಾ ವೇದಿಕೆಯ ಕೇಂದ್ರೀಯ ಮಂಡಳಿ ಸ್ಥಾಪಕ ಅಧ್ಯಕ್ಷ ಯೋಗೀಶ್ ಶೆಟ್ಟಿ, ಟೈಮ್ಸ್ ಆಫ್ ಕುಡ್ಲ ತುಳು ಪತ್ರಿಕೆಯ ಸಂಪಾದಕ ಎಸ್.ಆರ್.ಬಂಡಿಮಾರ್, ತುಳುನಾಡ ರಕ್ಷಣಾ ವೇದಿಕೆಯ ಮುಖ್ಯಸ್ಥ ಡಾ.ಕೆ.ಎ. ಮುನೀರ್ ಬಾವ, ಅಕಾಡಮಿ ಸದಸ್ಯೆ ಪ್ರೊ. ವೇದಾವತಿ ಉಪಸ್ಥಿತರಿದ್ದರು. ಅಕಾಡಮಿ ರಿಜಿಸ್ಟ್ರಾರ್ ಚಂದ್ರಹಾಸ ಬಿ. ರೈ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೆ.ಟಿ. ವಿಶ್ವನಾಥ ಸ್ವಾಗತಿಸಿದರು. ಡಿ.ಎಂ. ಕುಲಾಲ್ ಕಾರ್ಯಕ್ರಮ ನಿರೂಪಿಸಿದರು. ಮೋಹನ್ ಕೊಪ್ಪಲ ವಂದಿಸಿದರು.


ತುಳುನಾಡ ಸ್ವಾತಂತ್ರ ವೀರರ ಸ್ಮಾರಕ ನಿರ್ಮಾಣವಾಗಲಿ

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತ ನಾಡಿದ ಕರ್ನಾಟಕ ಅರೆಭಾಷೆ ಸಂಸ್ಕೃತಿ ಅಕಾಡಮಿಯ ಮಾಜಿ ಅಧ್ಯಕ್ಷ ಎನ್.ಎಸ್.ದೇವಿಪ್ರಸಾದ್ ಸಂಪಾಜೆ, ತುಳು ನಾಡಿನ ಕೀರ್ತಿ ಹೆಚ್ಚಿಸಿದವರಿಗೆ ನಾವಿಂದು ಬೆಲೆ ನೀಡಬೇಕಾಗಿದೆ. ನಮಗಾಗಿ, ನಮ್ಮ ಭೂಮಿಯ ರಕ್ಷಣೆ ಗಾಗಿ ಅಂದು ಅವರು ಪ್ರಾಣ ತೆತ್ತಿದ್ದಾರೆ. ಇದೀಗ ಅವರ ಸ್ಮರಣಾರ್ಥ ಸ್ಮಾರಕವನ್ನುಬಾವುಟಗುಡ್ಡದ ಟಾಗೋರ್ ಪಾರ್ಕ್‌ನಲ್ಲಿ ರಚಿಸುವ ಕಾರ್ಯ ಆಗಬೇಕಾಗಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News