ಎ.8ರಿಂದ ಪಡುಬಿದ್ರೆಯಲ್ಲಿ ರಾರಾಷ್ಟ್ರಮಟ್ಟದ ಕ್ರಿಕೆಟ್

Update: 2016-04-05 18:48 GMT

ಪಡುಬಿದ್ರೆ, ಎ.5: ಫ್ರೆಂಡ್ಸ್ ಕ್ರಿಕೆಟ್ ಕ್ಲಬ್ ಆಶ್ರಯದಲ್ಲಿ ಪಡುಬಿದ್ರೆ ಬೋರ್ಡ್ ಶಾಲಾಮೈದಾನದಲ್ಲಿ ಎ.8ರಿಂದ 10ರತನಕ ರಾಷ್ಟ್ರ ಮಟ್ಟದ ಕ್ರಿಕೆಟ್ ಪಂದ್ಯಾಟ ವೆಂಕಟೇಶ್ ಟ್ರೋಫಿ-2016 ನಡೆಯಲಿದೆ ಎಂದು ಪಡುಬಿದ್ರೆ ಫ್ರೆಂಡ್ಸ್ ಕ್ರಿಕೆಟ್ ಕ್ಲಬ್ ಅಧ್ಯಕ್ಷ ನವೀನ್‌ಚಂದ್ರ ಜೆ.ಶೆಟ್ಟಿ ತಿಳಿಸಿದ್ದಾರೆ. ಕ್ಲಬ್‌ನ 35ನೆ ವರ್ಷಾಚರಣೆ ಅಂಗವಾಗಿ ನಡೆಯಲಿರುವ ಈ ಪಂದ್ಯಾಟದಲ್ಲಿ ಆಯ್ದ 30 ತಂಡಗಳು ಭಾಗವಹಿಸಲಿದೆ. ಪಂದ್ಯಾ ಕೂಟದ ವಿಜೇತರಿಗೆ 3,03,333 ರೂ.ಹಾಗೂ ರನ್ನರ್ ಅಪ್‌ಗೆ 1,50,555 ರೂ. ಸಹಿತ ಶಾಶ್ವತ ಫಲಕ ನೀಡಲಾಗುವುದು. *ಪಂದ್ಯಕೂಟದ ವಿಶೇಷತೆ: ಅಂತಾ ರಾಷ್ಟ್ರೀಯ ಏಕದಿನ ಪಂದ್ಯದಂತೆ ತೃತೀಯ ಅಂಪೈರ್ ನಿರ್ವಹಣೆ ಮತ್ತು ರಾಜ್ಯಾದ್ಯಂತ ಪಂದ್ಯಾಟದ ಟಿವಿ ನೇರ ಪ್ರಸಾರವಿರಲಿದೆ.
ಎ.8ರಂದು ಪಂದ್ಯಾಟವನ್ನು ಅರಣ್ಯ ಸಚಿವ ರಮಾನಾಥ ರೈ ಉದ್ಘಾಟಿಸುವರು. ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ವಿನಯ್‌ಕುಮಾರ್ ಸೊರಕೆ ಅಧ್ಯಕ್ಷತೆ ವಹಿಸುವರು. ಎ. 10ರಂದು ನಡೆಯುವ ಸಮಾರಂಭದಲ್ಲಿ ರಾಜ್ಯಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸ್ ಪ್ರಶಸ್ತಿ ವಿತರಿಸುವರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News