ಬಂಟ್ವಾಳ ತಾಲೂಕಿನಲ್ಲಿ ಪ್ರತ್ಯೇಕ ಕಾರ್ಯಾಚರಣೆ ಏಳು ಲಾರಿ ವಶ, ನಾಲ್ಕು ಮಂದಿಯ ಬಂಧನ

Update: 2016-04-06 14:08 GMT

ಬಂಟ್ವಾಳ: ತಾಲೂಕಿನ ಪ್ರತ್ಯೇಕ ಎರಡು ಕಡೆಗಳಲ್ಲಿ ಬಂಟ್ವಾಳ ನಗರ ಹಾಗೂ ಗ್ರಾಮಾಂತ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಅಕ್ರಮ ಮರಳು ಸಾಗಟದ ಏಳು ಲಾರಿಗಳನ್ನು ವಶಪಡಿಸಿಕೊಂಡಿದಾ್ದರೆ.
ಎಎಸ್ಪಿ ಲಕ್ಷಣ್ ನಿಂಬರ್ಗಿ ಅವರ ನೇತೃತ್ವದಲ್ಲಿ ಬಂಟ್ವಾಳ ನಗರ ಠಾಣೆ ಎಸ್ಸೈ ನಂದಕುಮಾರ್ ಮತ್ತು ಅವರ ಸಿಬ್ಬಂದಿಗಳು ಬುಧವಾರ ಮೆಲ್ಕಾರ್‌ನಲ್ಲಿ ಅಕ್ರಮವಾಗಿ ಸಾಗಟ ಮಾಡುತ್ತಿದ್ದ ಮರಳು ತುಂಬಿದ 4 ಲಾರಿಗಳನ್ನು ವಶಪಡಿಸಿ ನಾಲ್ವರನ್ನು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ. ಗಣಿ ಅಧಿಕಾರಿ ಗಿರೀಶ್ ಈ ಕಾಂರ್ಾಚರಣೆಯಲ್ಲಿ ಭಾಗವಹಿಸಿದ್ದರು.
ಬುಧವಾರ ಮಧ್ಯ ರಾತ್ರಿ ಬಂಟ್ವಾಳ ಗ್ರಾಮಾಂತರ ಠಾಣೆಯ ಎಸ್ಸೈ ಎ.ಕೆ.ರಕ್ಷಿತ್ ಮತ್ತವರ ಸಿಬ್ಬಂದಿಗಳು ಬರಿಮಾರು ಎಂಬಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಮರಳು ತುಂಬಿದ ಮೂರು ಲಾರಿಗಳನ್ನು ವಶಪಡಿಸಿಕೊಂಡಿದ್ದಾರೆ.
ಇಲ್ಲಿ ಮರಳುಗಾರಿಕೆಗೆ ಅನುಮತಿ ಇದ್ದರೂ ರಾತ್ರಿ ವೇಳೆ ಮರಳುಗಾರಿಕೆ ಮಾಡುವಂತಿಲ್ಲ. ಆದರೆ, ಗುತ್ತಿಗೆದಾರರು ರಾತ್ರಿ ವೇಳೆ ಯಂತ್ರದ ಮೂಲಕ ಮರಳು ಗಾರಿಕೆ ನಡೆಸಿ ಸಾಗಟ ಮಾಡುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಬರಿಮಾರಿನಲ್ಲಿ ರಾತ್ರಿ ವೇಳೆ ಮರಳುಗಾರಿಕೆ ನಡೆಯುತ್ತಿದ್ದ ಹಿನ್ನೆಲೆಯಲ್ಲಿ ಸ್ಥಳೀಯ ಪಂಚಾಯತ್ ಸದಸ್ಯರೊಬ್ಬರು ಇದನ್ನು ಆಕ್ಷೇಪಿಸಿದ್ದಾರೆನ್ನಲಾಗಿದೆ. ಈ ಸಂದರ್ಭದಲ್ಲಿ ಪಂಚಾಯತ್ ಸದಸ್ಯ ಹಾಗೂ ಮರಳುಗಾರಿಕೆ ನಡೆಸುತ್ತಿದ್ದವರ ಮಧ್ಯೆ ಮಾತನ ಚಕಮಕಿಯು ನಡೆದಿತ್ತೆನ್ನಲಾಗಿದ್ದು, ಈ ಬಗ್ಗೆ ಜಿಲ್ಲಾ ಎಸ್ಪಿಯವರಿಗೆ ಸ್ಥಳೀಯರು ನೀಡಿದ ದೂರಿನ ಅನ್ವಯ ಅವರ ಸೂಚನೆಯಂತೆ ಬಂಟ್ವಾಳ ಗ್ರಾಮಾಂತರ ಪೊಲೀಸರು ಕಾರ್ಯಾಚರಣೆ ನಡೆಸಿ ಅಕ್ರಮ ಮರಳು ಸಾಗಾಟದ ಲಾರಿಯನ್ನು ಶಪಡಿಸಿದ್ದಾರೆ ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News