ಜೀನ್ಸ್ ಪ್ಯಾಂಟ್‌ಗಾಗಿ ತಾಯಿಗೆ ಹಲ್ಲೆ: ದೂರು

Update: 2016-04-06 18:36 GMT

ಮಣಿಪಾಲ, ಎ.6: ಜೀನ್ಸ್ ಪ್ಯಾಂಟ್ ವಿಚಾರದಲ್ಲಿ ತಾಯಿಯನ್ನು ತಳ್ಳಿ, ಗಾಯಗೊಳಿಸಿ ಜೀವ ಬೆದರಿಕೆಯೊಡ್ಡಿರುವ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪರ್ಕಳದ ಜ್ಯೋತಿ ನಗರದ ಕಲ್ಯಾಣಿ ಶೆಟ್ಟಿಗಾರ್ತಿ ಎಂಬವರ ಮಗ ಸರ್ವೋದಯ ಎಂಬಾತ ಎ.5ರಂದು ಮನೆಗೆ ಬಂದು ಕಲ್ಯಾಣಿ ಅವರ ಮಗಳಲ್ಲಿ ತನ್ನ ಮದುವೆ ಸಮಯದ ಜೀನ್ಸ್ ಪ್ಯಾಂಟ್ ಕೊಡುವಂತೆ ಗಲಾಟೆ ಮಾಡಿದ್ದು, ಈ ವೇಳೆ ಮಧ್ಯ ಪ್ರವೇಶಿಸಿದ ಕಲ್ಯಾಣಿ ಶೆಟ್ಟಿಗಾರ್ತಿ ಅವರನ್ನು ದೂಡಿ ಹಾಕಿದ ಪರಿಣಾಮ ಅವರ ತಲೆಗೆ ಅಡುಗೆ ಕೋಣೆಯ ರ್ಯಾಕ್ ಬಡಿದು ಗಾಯವಾಗಿದೆ. ಅಲ್ಲದೆ ಆತ ತಾಯಿಗೆ ಜೀವ ಬೆದರಿಕೆ ಹಾಕಿ ಜೀನ್ಸ್ ಪ್ಯಾಂಟ್ ಕೊಡದಿದ್ದರೆ ಕಪಾಟನ್ನು ಸುಟ್ಟು ಹಾಕುವುದಾಗಿ ಹೇಳಿರುವುದಾಗಿ ದೂರಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News