ಮಂಗಳೂರು: ತಾಲೂಕು ಗ್ರಾಪಂ ಖಾಲಿ ಸ್ಥಾನಗಳಿಗೆ ಉಪಚುನಾವಣೆ

Update: 2016-04-06 18:40 GMT

ಮಂಗಳೂರು, ಎ.6: ಮಂಗಳೂರು ತಾಲೂಕಿಗೆ ಸಂಬಂಧಪಟ್ಟಂತೆ ಗ್ರಾಪಂಗಳಲ್ಲಿ ವಿವಿಧ ಕಾರಣಗಳಿಂದ ಖಾಲಿ ಇರುವ ಸದಸ್ಯ ಸ್ಥಾನಗಳಿಗೆ ಉಪಚುನಾವಣೆಯನ್ನು ನಡೆಸುವ ವೇಳಾಪಟ್ಟಿಯನ್ನು ಹೊರಡಿಸಲಾಗಿದೆ.

ಅಡ್ಯಾರು-1, ಬೋಳಿಯಾರು-5, ಧರೆಗುಡ್ಡೆ-1, ಅಡ್ಡೂರು-1, ಪಾವಂಜೆ -1, ಕಲ್ಲಮುಂಡ್ಕೂರು-2, ಕೊಣಾಜೆ-1, ಮಲ್ಲೂರು-1, ಮಲ್ಲೂರು-2, ಬೊಂಡಂತಿಲ-3, ಕಡಂದಲೆ-3, ಪುತ್ತಿಗೆ-4, ಕುತ್ತೆತ್ತೂರು-1, ಬಡಗಮಿಜಾರು-1 ಗ್ರಾಪಂ ಕ್ಷೇತ್ರಗಳಿಗೆ ಎ.17ರಂದು ಮತದಾನ ನಡೆಯಲಿದೆ.
ನಾಮಪತ್ರ ಸಲ್ಲಿಸಲು ಕೊನೆಯ ದಿನ ಎ.7, ನಾಮಪತ್ರಗಳನ್ನು ಪರಿಶೀಲಿಸುವ ದಿನ ಎ.9, ಉಮೇದುವಾರರನ್ನು ಹಿಂದೆೆಗೆದು ಕೊಳ್ಳಲು ಕೊನೆಯ ದಿನ ಎ.11, ಅವಶ್ಯವಿದ್ದರೆ ಮತದಾನ ನಡೆಸಬೇಕಾದ ದಿನ ಎ.17 ಆಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News