ಜಮಾಅತೆ ಇಸ್ಲಾಮಿ ಹಿಂದ್‌ನಿಂದ ‘ವಾರಿಸು ಹಕ್ಕು ಜಾಗೃತಿ’ ಅಭಿಯಾನ

Update: 2016-04-07 07:44 GMT

ಮಂಗಳೂರು, ಎ. 7: ಜಮಾಅತೆ ಇಸ್ಲಾಮಿ ಹಿಂದ್‌ನ ಮಂಗಳೂರು ಘಟಕವು ಮುಸ್ಲಿಂ ಸಮುದಾಯದಲ್ಲಿ ವಾರಿಸು ಹಕ್ಕು ಉಯಿಲುಮತ್ತು ವಕ್ಫ್ ಎಂಬ ವಿಷಯಗಳಿಗೆ ಸಂಬಂಧಿಸಿ ಜಾಗೃತಿ ಮೂಡಿಸಲು ಎಪ್ರಿಲ್ 10 ರಿಂದ ಮೇ 9ರವರೆಗೆ ಜಾಗೃತಿ ಅಭಿಯಾನ ಹಮ್ಮಿಕೊಂಡಿದೆ.


ಸುದ್ದಿಗೋಷ್ಠಿಯಲ್ಲಿಂದು ಈ ಬಗ್ಗೆ ಮಾಹಿತಿ ನೀಡಿದ ಅಭಿಯಾನದ ಸಂಚಾಲಕ ಸಈದ್ ಇಸ್ಮಾಯಿಲ್, ಇಸ್ಲಾಮಿನ ಆರ್ಥಿಕ ವ್ಯವಸ್ಥೆಯಲ್ಲಿ ವಾರಿಸು ನಿಯಮಕ್ಕೆ ಮಹತ್ವಿದೆ. ಒಬ್ಬ ವ್ಯಕ್ತಿ ಮರಣ ಹೊಂದಿದಾಗ ಅವನ ಅಥವಾ ಅವಳ ಬಳಿಯಿರುವ ಹಾಗೂ ಇತರ ಬಳಿಯಲ್ಲಿ ಯಾವುದಾದರೂ ರೂಪದಲ್ಲಿರುವ ಸಾಲ, ಅಮಾನತ್, ವ್ಯಾಪಾರದಲ್ಲಿ ಪಾಲುದಾರಿಕೆ ಎಲ್ಲ ಸ್ಥಿರ ಮತ್ತು ಚರ ಸ್ತೊುಗಲು ವಾರಿಸು ಸೊತ್ತಾಗಿ ಪರಿಗಣಿಸಲ್ಪಡುತ್ದೆ. ಅದರ ಸಂಪೂರ್ಣ ಲೆಕ್ಕಾಚಾರ ವಾರಿಸುದಾರನ ಕರ್ತವ್ಯ. ಈ ಬಗ್ಗೆ ಹೆಚ್ಚಿನವರಿಗೆ ತಿಳಿದಿಲ್ಲವಾದ್ದರಿಂದ ಜಾಗೃತಿ ಮೂಡಿಸುವ ಕಾರ್ಯ ಅಭಿಯಾನದ ಮೂಲಕ ನಡೆಯಲಿದೆ ಎಂದರು.


ಅಭಿಯಾನದಲ್ಲಿ ಸಾರ್ವಜನಿಕ ಸಭೆಗಳು, ಮೊಹಲ್ಲಾ ಸಭೆ, ಶುಕ್ರವಾರದ ಪ್ರವಚನ, ಗಣ್ಯರ ಸಭೆ ಹಾಗೂ ಮನೆ ಮನೆ ಭೇಟಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಮೇ 13ರಂದು ನಗರದ ಪುರಭವನದಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ ಎಂದು ಅವರು ಹೇಳಿದರು.


ಗೋಷ್ಟಿಯಲ್ಲಿ ಜಮಾಅತೆ ಇಸ್ಲಾಮಿ ಹಿಂದ್‌ನ ಅಧ್ಯಕ್ಷ ಮುಹಮ್ಮದ್ ಕುಂಞಿ, ಮಹಿಳಾ ಸಂಚಾಲಕಿ ಮರ್ಯಮ್ ಶಹೀರಾ, ಅನುಪಮ ಮಹಿಳಾ ಮಾಸಿಕದ ಉಪ ಸಂಪಾದಕಿ ಸಬೀಹಾ ಫಾತಿಮಾ , ಶಬೀರ್ ಅಹಮ್ಮದ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News