ತುಂಬೆ: ಕಾರು ಬಸ್ ಅಪಘಾತ, ಕಾರು ಚಾಲಕ ಪವಾಡದ್ರಷ್ಯ ಪಾರು

Update: 2016-04-07 14:18 GMT

ಬಂಟ್ವಾಳ: ಕಾರು ಮತ್ತು ಬಸ್ ನಡುವೆ ಸಂಭವಿಸಿದ ಅಪಘಾತದಲ್ಲಿ ಕಾರು ಚಾಲಕ ಅಮರ್ ಜೀತ್ ಸಿಂಗ್ ಪಾವಾಡದ್ರಷ್ಯ ರೀತಿಯಲ್ಲಿ ಪಾರಾದ ಘಟನೆ ತಾಲೂಕಿನ ತುಂಬೆ ಸಮೀಪದ ರಾಮಲಕಟ್ಟೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುರುವಾರ ಸಂಜೆ 7 ಗಂಟೆ ಸುಮಾರಿಗೆ ನಡೆದಿದೆ.

ಬಿ.ಸಿ.ರೋಡ್ ಕಡೆಯಿಂದ ಮಂಗಳೂರು ಕಡೆಗೆ ಸಂಚಾರಿಸುತ್ತಿದ್ದ ಮಾರುತಿ ವ್ಯಾಗನರ್ ಕಾರಿಗೆ ಅದರ ಹಿಂದಿನಿಂದ ಬರುತ್ತಿದ್ದ ಕೆಎಸ್ಸಾರ್ಟಿಸಿ  ಬಸ್ ಒರಸಿದ್ದು, ಈ ವೇಳೆ ಕಾರು ಚಾಲಕ ಕಾರನ್ನು ಒಮ್ಮೆಲೆ ಬಲ ಭಾಗಕ್ಕೆ ತಿರುಗಿಸಿದ ರಭಸಕ್ಕೆ ರಸ್ತೆ ವಿಭಜಕ್ಕೆ ಢಿಕ್ಕಿ ಹೊಡೆದ ಕಾರು ಎರಡು ಪಲ್ಟಿಯಾಗಿ ಮಂಗಳೂರು-ಬಿ.ಸಿ.ರೋಡ್ ಪಥಕ್ಕೆ ಬಂದು ಬಿದ್ದಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಅಪಘಾತದಿಂದ ಕಾರಿನ ಮುಂಭಾಗ ಭಾಗಶಃ ಜಕಂಗೊಂಡರೂ ಪಂಜಾಬ್ ಮೂಲದ ಕಾರು ಚಾಲಕನಿಗೆ ಯಾವುದೇ ಗಾಯಗಳಾಗದೆ ಅಪಾಯದಿಂದ ಪಾರಾಗಿದ್ದಾರೆ.

ಘಟನಾ ಸ್ಥಳದಲ್ಲಿ ನೂರಾರು ಜನರು ಸೇರಿದ್ದು, ಅಪಘಾತದ ಭೀಕರತೆಯ ನಡುವೆ ಯಾವುದೇ ಗಾಯಗಳಾಗದೆ ಪೋನಿನಲ್ಲಿ ಮಾತನಾಡುತ್ತಿರುವ ಕಾರು ಚಾಲಕನನ್ನು ನೋಡಿ ಹೈರಾಣಾಗುತ್ತಿದ್ದರು.

ಸ್ಥಳಕ್ಕೆ ಧಾವಿಸಿದ ಪೊಲೀಸರು ಅಪಘಾತಕೀಡಾದ ವಾಹನಗಳನ್ನು ಬದಿಗೆ ಸರಿಸುವ ಮೂಲಕ ಸಂಚಾರಕ್ಕೆ ಅನುವು ಮಾಡಿ ಕೊಟ್ಟರು.

ಅಪಘಾತಕ್ಕೀಡಾದ ಕಾರು ಎರಡು ಪಲ್ಟಿಯಾದರೂ ಪವಾಡದ್ರಷ್ಯವಾಗಿ ಚಾಲಕ ಪಾರು!

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News