ಕಾರ್ಕಳ: ಸೋದರಮಾವನಿಂದ ಅತ್ಯಾಚಾರ ಆರನೆ ತರಗತಿ ವಿದ್ಯಾರ್ಥಿನಿ ಗರ್ಭಿಣಿ

Update: 2016-04-07 15:42 GMT

ಕಾರ್ಕಳ : ಸೋದರ ಮಾವನಿಂದ ಆರನೇ ತರಗತಿ ವಿದ್ಯಾರ್ಥಿನಿ ಗರ್ಭಿಣಿಯಾಗಿದ ಘಟನೆ ಬೆಳ್ಮಣ್ ಗ್ರಾಮದಲ್ಲಿ ಗುರುವಾರ ನಡೆದಿದೆ. ಧಾರವಾಡ ಮೂಲದ ನಿವಾಸಿ ನಾಗೇಶ್(20) ಆರೋಪಿ. ಆತ ತನ್ನ ಸಹೋದರಿ ಮಗಳನ್ನು ಅತ್ಯಾಚಾರ ಎಸಗಿದ್ದಾನೆ. ಬೆಳಕಿಗೆ ಬಂದದ್ದು: ನಾಗೇಶ್ ಕೂಲಿ ಕಾರ್ಮಿಕ. ಆತನ ಸಹೋದರಿಯ ಮಗಳೇ ಈ ಅತ್ಯಾಚಾರಕ್ಕೀಡಾದ ಬಾಲಕಿ. ನಾಗೇಶ್‌ನ ಸಹೋದರಿ ಕಳೆದ ಐದು ವರ್ಷದ ಹಿಂದೆ ಮೃತಪಟ್ಟಿದ್ದಳು. ಬಾಲಕಿ ಅಜ್ಜಿ ಮನೆಯಲ್ಲಿದ್ದು, ಅಲ್ಲೇ ವಾಸವಾಗಿದ್ದ ಸೋದರ ಮಾವ ಕುಡಿತದ ಮತ್ತಿನಿಂದ ನಿರಂತರ ಬಾಲಕಿಯನ್ನು ಅತ್ಯಾಚಾರ ಎಸಗುತ್ತಿದ್ದ. ಬಾಲಕಿ ಕಳೆದ ಕೆಲವು ದಿನಗಳಿಂದ ಹೊಟ್ಟೆ ನೋವಿನಿಂದ ಬಳಲುತ್ತಿದ್ದು, ಆಸ್ಪತ್ರೆಗೆ ದಾಖಲಿಸಿದ್ದ ಸಂದರ್ಭ ಈ ಪ್ರಕರಣ ಬೆಳಕಿಗೆ ಬಂದಿದೆ. ಆರೋಪಿ ವಿರುದ್ದ ಗ್ರಾಮಾಂತರ ಠಾಣೆಯಲ್ಲಿ ಪೋಸ್ಕೊ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News