ಮಂಗಳೂರು : ಬೃಹತ್ ರಕ್ತದಾನ ಶಿಬಿರ

Update: 2016-04-08 11:39 GMT

       ಮಂಗಳೂರು,ಎ.8: ಬ್ಲಡ್ ಡೋನೋರ್ಸ್ ಮಂಗಳೂರು ಮತ್ತು ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜು ಇದರ ಜಂಟಿ ಸಹಭಾಗಿತ್ವದಲ್ಲಿ ಕೆ ಎಂ ಸಿ ಆಸ್ಪತ್ರೆ ಮಂಗಳೂರು ಇದರ ಸಹಕಾರದೊಂದಿಗೆ ಬೃಹತ್ ರಕ್ತದಾನ ಶಿಬಿರ ಹಾಗೂ ರಕ್ತದಾನಿಗಳಿಗೆ ಹಾಗೂ ರೋಗಿಗಳಿಗೆ ಸಮರ್ಪಕವಾದ ರಕ್ತದ ಪೂರೈಕೆಯ ಸಲುವಾಗಿ ಬ್ಲಡ್ ಡೋನೋರ್ಸ್ ಮಂಗಳೂರು ಇವರು ಆರಂಭಿಸಿರುವ ವೆಬ್ಸೈಟ http://www.blooddonorsmangaluru.org/ ನ್ನು ಶ್ರೀನಿವಾಸ ವೈದ್ಯಕೀಯ ಕಾಲೇಜಿನ ಮುಖ್ಯಧಿಕಾರಿ ಡಾ . ಅಣ್ಣಯ್ಯ ಕುಲಾಲ್ ಉಳ್ತೂರು ಇತ್ತೀಚೆಗೆ ಸಹ್ಯಾದ್ರಿ ಕಾಲೇಜಿನ ಆಡಿಟೋರಿಯಂ ನಲ್ಲಿ ಉದ್ಘಾಟಿಸಿದರು.

          ಈ ಸಂದರ್ಭದಲ್ಲಿ ಮಾತನಾಡಿದ ಅವರು ರಕ್ತದಾನದ ಬಗ್ಗೆ ಮತು ಅದರ ಶ್ರೇಷ್ಠತೆ ಬಗ್ಗೆ ಸಲುವಾಗಿ ಬ್ಲಡ್ ಡೋನೋರ್ಸ್ ಮಂಗಳೂರು ತಂಡವು ರೂಪಿಸಿರುವ ವೆಬ್ ಸೈಟ್ ಶ್ಲಾಘನೀಯ ಎಂದು ಹೇಳಿದರು.

      ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಸಹ್ಯಾದ್ರಿ ಕಾಲೇಜಿನ ಪ್ರಾಶುಂಪಾಲ ಡಾ . ಉಮೇಶ್ ಎಂ ಭೂಷಿ, ಸಾಮಾಜಿಕ ಮಾಧ್ಯಮಗಳನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವ ಕಾಲದಲ್ಲಿ ರಕ್ತದಾನದಂತಹ ಶ್ರೇಷ್ಟ ಕಾರ್ಯವನ್ನು ಮಾಡುತ್ತಿರುವ ಬ್ಲಡ್ ಡೋನೋರ್ಸ್ ಮಂಗಳೂರು ತಂಡವು ಬೇರೆ ಯುವಕರಿಗೆ ಮಾದರಿಯಾಗಿದೆ ಎಂದು ಹೇಳಿದರು ಕಾರ್ಯಕ್ರಮದಲ್ಲಿ ಬ್ಲಡ್ ಡೋನೋರ್ಸ್ ಮಂಗಳೂರು ತಂಡದ ವತಿಯಿಂದ ಹಾಗೂ ಸಹ್ಯಾದ್ರಿ ಕಾಲೇಜಿನ ವಿಧ್ಯಾರ್ಥಿಗಳು ಸೇರಿ ರಕ್ತದಾನದ ಅರಿವು ಮೂಡಿಸುವ ಬಗ್ಗೆ ರಚಿಸಿರುವ ಕಿರು ಚಿತ್ರವನ್ನು ಬಿಡುಗಡೆಗೊಳಿಸಲಾಯಿತು. ಇದೇ ಸಂದರ್ಭದಲ್ಲಿ ಬ್ಲಡ್ ಡೋನೋರ್ಸ್ ಮಂಗಳೂರು ತಂಡದ ಹಾಗೂ ಕಿರುಚಿತ್ರದಲ್ಲಿ ನಟಿಸಿರುವ ಭವಿತ್ ರಾಜ್, ಬಿಜೇಶ್ ಸಾಮಣಿ , ಆಶಿಕ್ ಪಿ ಎಂ, ಪ್ರಿಯಾ ಶೆಟ್ಟಿ ಮತ್ತು ಶ್ರುತಿ ಶೆಟ್ಟಿ ಯವರನ್ನು ಸನ್ಮಾನಿಸಲಾಯಿತು ವೇದಿಕೆಯಲ್ಲಿ ಬ್ಲಡ್ ಡೋನೋರ್ಸ್ ಮಂಗಳೂರು ಸ್ಥಾಪಕಾಧ್ಯಕ್ಷರಾದ ಸಿದ್ದೀಕ್ ಉರ್ಣಿ ಮಂಜೇಶ್ವರ , ಕೆ ಎಂ ಸಿ ಬ್ಲಡ್ ಬ್ಯಾಂಕ್ ಅಧಿಕಾರಿ ಡಾ ದೀಪಾ ಅಡಿಗ ಸಹ್ಯಾದ್ರಿ ಕಾಲೇಜಿನ ಪ್ರಾಧ್ಯಾಪಕರಾದ ಪ್ರೊ. ಜೆ ವಿ ಗೋಪಾಲ್ ಹಾಗೂ ಡಾ ವಿಶಾಲ್ ಸಮರ್ಥ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸುಮಾರು 100 ಮಂದಿ ರಕ್ತದಾನ ಮಾಡಿದರು ವಿಧ್ಯಾರ್ಥಿನಿ ರೇಷ್ಮಾ ಕಾರ್ಯಕ್ರಮ ನಿರೂಪಿಸಿದರು . ಜೆ ವಿ ಗೋರ್ಬಲ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News