ಮಾಣಿ: ಹೊನಲು ಬೆಳಕಿನ ಕ್ವಾಲಿಟಿ ಕ್ರೀಡೋತ್ಸವ

Update: 2016-04-08 18:24 GMT

 ವಿಟ್ಲ, ಎ.8: ಮಾಣಿಯ ಕ್ವಾಲಿಟಿ ಫ್ರೆಂಡ್ಸ್ ಆಶ್ರಯದಲ್ಲಿ ಹೊನಲು ಬೆಳಕಿನ ಕ್ರಿಕೆಟ್, ಹಗ್ಗ-ಜಗ್ಗಾಟ, ವಾಲಿ ವಾಲ್ ಹಾಗೂ ಕಬಡ್ಡಿ ಪಂದ್ಯಾಟ ಕ್ವಾಲಿಟಿ ಕ್ರೀಡೋ ತ್ಸವ-2016 ಕಾರ್ಯಕ್ರಮವು ಮಾಣಿ ಗಾಂಧಿ ಮೈದಾನದಲ್ಲಿ ಇತ್ತೀಚೆಗೆ ನಡೆಯಿತು. ಕ್ರೀಡೋತ್ಸವವನ್ನು ಮಾಣಿ ಶ್ರೀ ಉಳ್ಳಾಲ್ತಿ ದೈವಸ್ಥಾನದ ಆಡಳಿತ ಮೊಕ್ತೇಸರ ಸಚಿನ್ ರೈ ಮಾಣಿ ಗುತ್ತು ಉದ್ಘಾಟಿಸಿದರು. ಜಿಪಂ ಸದಸ್ಯೆ ಮಂಜುಳಾ ಮಾಧವ ಮಾವೆ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ, ಜಿಪಂ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ತಾಪಂ ಸದಸ್ಯರುಗಳಾದ ಮಂಜುಳಾ ಕೆ.ಎಂ. ಪೆರಾಜೆ, ಆದಂ ಕುಂಞಿ, ಬಿ.ಎಂ. ಅಬ್ಬಾಸ್ ಅಲಿ, ಗ್ರಾಪಂ ಸದಸ್ಯರಾದ ಸುದೀಪ್ ಶೆಟ್ಟಿ ಕೊಡಾಜೆ, ಲತೀಫ್ ನೇರಳಕಟ್ಟೆ, ನಾರಾಯಣ ಶೆಟ್ಟಿ ತೋಟ, ಕೊರಗಪ್ಪ ಪೂಜಾರಿ ಮಾಣಿ, ಉದ್ಯಮಿಗಳಾದ ಎಂ. ನಾಗರಾಜ ಶೆಟ್ಟಿ ಮಾಣಿ, ಸದಾಶಿವ ಶೆಟ್ಟಿ, ಹರೀಶ್ ಶೆಟ್ಟಿ ಸಾಗು, ತಾಪಂ ಮಾಜಿ ಸದಸ್ಯರುಗಳಾದ ಮಾಧವ ಮಾವೆ, ಕುಶಲ ಎಂ. ಪೆರಾಜೆ, ಡಾ. ಶ್ರೀನಾಥ್ ಆಳ್ವ, ಸಿ.ಎ. ಬ್ಯಾಂಕ್ ಮಾಣಿ ಶಾಖಾಧಿಕಾರಿ ಸಂಜೀವ ಪೂಜಾರಿ ಮತ್ತಿತರರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಹಮೀದ್ ಮಾಣಿ, ಬೇಬಿ ಸುವರ್ಣ, ಮಜೀದ್, ದಯಾನಂದ, ಸಂದೀಪ್, ಸಲೀಂ, ಹಬೀಬ್ ಕೆ. ಮಾಣಿ, ಮೂಸಾ ಕರೀಂ ಮತ್ತಿತರರು ಉಪಸ್ಥಿತರಿದ್ದರು.

ತಿಲಕ್ ಸ್ವಾಗತಿಸಿ, ವಿಕೇಶ್ ಶೆಟ್ಟಿ ವಂದಿಸಿದರು. ಬಾಲಕೃಷ್ಣ ಆಳ್ವ ಕಾರ್ಯಕ್ರಮ ನಿರೂಪಿಸಿದರು. ಕಬಡ್ಡಿ ಪ್ರಶಸ್ತಿ : ಪ್ರೊಕಬಡ್ಡಿ ಮಾದರಿ ಲೀಗ್ ಕಬಡ್ಡಿ ಪಂದ್ಯಾ ಟದಲ್ಲಿ ಎಂ. ಕಿಂಗ್ ಕೋಬ್ರಾ ಮಾಣಿ ತಂಡವು ಪ್ರಥಮ, ಪಿಂಕ್ ಪ್ಯಾಂಥರ್ಸ್‌ ಪೆರಾಜೆ ದ್ವಿತೀಯ ಸ್ಥಾನವನ್ನು ಪಡೆ ದುಕೊಂಡಿತು. ಕೋಡಿ ವಾರಿಯರ್ಸ್‌ ಕೋಡಿ ತಂಡವು ತೃತೀಯ ಹಾಗೂ ಅನಂ ತಾಡಿ ಟೈಗರ್ಸ್‌ ತಂಡವು ಚತುರ್ಥ ಸ್ಥಾನವನ್ನು ತಮ್ಮದಾಗಿಸಿಕೊಂಡಿತು. ಕಿಂಗ್ ಕೋಬ್ರಾ ಮಾಣಿ ತಂಡದ ನವೀನ ಆಲ್‌ರೌಂಡರ್ ಹಾಗೂ ಪ್ರಕಾಶ್ ಉತ್ತಮ ದಾಳಿಗಾರ ಪ್ರಶಸ್ತಿ ತಮ್ಮದಾಗಿಸಿಕೊಂಡರು. ಪೆರಾಜೆ ತಂಡದ ದಿನೇಶ್ ಉತ್ತಮ ಹಿಡಿತಗಾರ ಪ್ರಶಸ್ತಿ ಪಡೆದುಕೊಂಡರು. ಕ್ರಿಕೆಟ್ : ಕ್ರಿಕೆಟ್ ಪಂದ್ಯದಲ್ಲಿ ಮಜ್ದಾ ಕ್ರಿಕೆಟರ್ಸ್‌ ಸಜಿಪ ತಂಡವು ಪ್ರಥಮ ಹಾಗೂ ರೆಡ್ ಗೈಸ್ ಸೂರಿಕುಮೇರು ತಂಡವು ದ್ವಿತೀಯ ಸ್ಥಾನವನ್ನು ಪಡೆದುಕೊಂಡಿತು. ಸಜಿಪ ತಂಡದ ರಹೀಂ ಉತ್ತಮ ಎಸೆತಗಾರ, ಹೈದರ್ ಉತ್ತಮ ಹೊಡೆತಗಾರ ಹಾಗೂ ಸೂರಿ ಕುಮೇರು ತಂಡದ ಅಜಿತ್ ಆಲ್‌ರೌಂಡರ್ ಪ್ರಶಸ್ತಿ ಪಡೆದುಕೊಂಡರು. ವಾಲಿಬಾಲ್: ವಾಲಿಬಾಲ್ ಪಂದ್ಯಾಟದಲ್ಲಿ ಬಾಲ್ ಬ್ಲಸ್ಟರ್ಸ್‌ ಬೊಳ್ಳಾಯಿ ತಂಡ ಪ್ರಥಮ, ಯುವ ಬ್ರಿಗೇಡ್ ಕಡೇಶ್ವಾಲ್ಯ ತಂಡ ದ್ವಿತೀಯ, ಸೂಪರ್ ಸ್ಟಾರ್ ಅಡ್ಲಬೆಟ್ಟು ತಂಡ ತೃತೀಯ ಹಾಗೂ ರೋಕ್ ವಾರಿಯರ್ಸ್‌ ಪೆರ್ನೆ ತಂಡವು ಚತುರ್ಥ ಸ್ಥಾನವನ್ನು ಪಡೆ ದುಕೊಂಡಿತು. ಹಗ್ಗ ಜಗ್ಗಾಟ: ಹಗ್ಗ-ಜಗ್ಗಾಟ ಪಂದ್ಯಾಟದಲ್ಲಿ ಕಾಪುವಿನ ಕೈಪುಂಜೆ ತಂಡ ಪ್ರಥಮ, ಬಿ.ಸಿ.ರೋಡಿನ ಶ್ರೀರಾಮ ಭಕ್ತಾಂಜನೇಯ ವ್ಯಾಯಾಮ ಶಾಲೆ ದ್ವಿತೀಯ, ಪಣೋಲಿಬೈಲು ಫ್ರೆಂಡ್ಸ್ ತಂಡ ತೃತೀಯ ಹಾಗೂ ಬಿ.ಸಿ.ರೋಡಿನ ಶ್ರೀ ರಾಮಭಕ್ತಾಂಜನೇಯ ವ್ಯಾಯಾಮ ಶಾಲೆ ತಂಡ ಚತುರ್ಥ ಸ್ಥಾನವನ್ನು ಪಡೆದುಕೊಂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News