ಡಿ.16-17: ಬಳ್ಕುಂಜೆ ಸಂತ ಪೌಲ್ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಸಂಭ್ರಮಾಚರಣೆ

Update: 2016-04-09 08:02 GMT

ಕಿನ್ನಿಗೋಳಿ, ಎ.9: ಬಳ್ಕುಂಜೆ ಸಂತ ಪೌಲರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಸಮಾರಂಭವು ಡಿಸೆಂಬರ್ 16 ಮತ್ತು 17ರಂದು ನಡೆಯಲಿದೆ. ಈ ಪ್ರಯುಕ್ತ ಕನ್ನಡ ಮಾಧ್ಯಮ ಶಾಲೆಯ ಉಳಿವಿಗಾಗಿ ಹಲವು ಯೋಜನೆಗಳನ್ನು ಹಮ್ಮಿಕೊಂಡು ವಿವಿಧ ಸಮಿತಿಗಳನ್ನು ರಚನೆ ಮಾಡಲಾಗಿದೆ ಎಂದು ಶಾಲಾ ಸಮಿತಿಯ ಕೋಶಾಧಿಕಾರಿ ನೆಲ್ಸನ್ ಲೋಬೋ ಹೇಳಿದರು.

ಬಳ್ಕುಂಜೆ ಸಂತ ಪೌಲರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಈ ಬಗ್ಗೆ ಮಾಹಿತಿ ನೀಡಿದರು. ರೆ. ಫಾ.ಇಮ್ಯಾನುವೆಲ್ ರೆಬೊಲ್ಲೋರವರ ಸಂಚಾಲಕತ್ವದಲ್ಲಿ 1916 ಸೆಪ್ಟಂಬರ್ 1ರಂದು ಪ್ರಾರಂಭಗೊಂಡಿರುವ ಸಂತ ಪೌಲರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಇದೀಗ ಶತಮಾನೋತ್ಸವದ ಸಂಭ್ರಮದಲ್ಲಿದೆ. ಈ ಹಿನ್ನೆಲೆಯಲ್ಲಿ ಗೌರವ ಶಿಕ್ಷಕರಿಗೆ ಸುಮಾರು 30 ಲಕ್ಷ ರೂ. ಮೊತ್ತದ ಸಂಭಾವನಾ ನಿಧಿ ಸ್ಥಾಪಿಸುವುದು. ಸುಮಾರು 25 ಲಕ್ಷ ರೂ. ವೆಚ್ಚದಲ್ಲಿ ಶಾಲಾ ಕಟ್ಟಡ ದುರಸ್ತಿ, ಸುಮಾರು ತಲಾ 5 ಲಕ್ಷ ರೂ. ವೆಚ್ಚಗಳಲ್ಲಿ ಬಾಲಕರ ಶೌಚಾಲಯ ಮತ್ತು ನೀರಿನ ಸೌಲಭ್ಯ ಅಭಿವೃದ್ಧಿಪಡಿಸುವುದು ಮತ್ತು ತಲಾ 3 ಲಕ್ಷ ರೂ. ವೆಚ್ಚದಲ್ಲಿ ಕಂಪ್ಯೂಟರ್ ಸಿಸಿಟಿವಿ ಕ್ಯಾಮರಾ ಹಾಗೂ ಸ್ಮರಣ ಸಂಚಿಕೆಗಳಿಗಾಗಿ ವ್ಯಯಿಸಲು ತೀರ್ಮಾನಿಸಲಾಗಿದೆ ಎಂದು ಅವರು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಶಾಲಾ ಸಂಚಾಲಕ ಫಾ. ಮೈಕಲ್ ಡಿಸಿಲ್ವ, ಅಧ್ಯಕ್ಷ ಡೆನಿಸ್ ಡಿಸೋಜ, ಉದಯ ರಾವ್, ದಿನಕರ ಶೆಟ್ಟಿ, ಮುಖ್ಯ ಶಿಕ್ಷಕಿ ಭಗಿನಿ ಹಿಲ್ಡಾ ಡಿಸೋಜ, ಕರುಣಾಕರ ಶೆಟ್ಟಿ, ಲೂಯಿಸ್ ಡಿಸೋಜ, ಹೆಲನ್ ಡಿಸೋಜ, ಸುಕುಮಾರ್, ಸಾವಿತ್ರಿ, ವೇದ, ರೇಷ್ಮಾ ಮತ್ತಿತರರಿದ್ದರು 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News