ಪುತ್ತೂರು: ಗ್ರಾಮವಿಕಾಸ ಯೋಜನೆ ವಾರ್ಷಿಕೋತ್ಸವದಲ್ಲಿ ಒಡಿಯೂರು ಶ್ರೀ ಧಾರ್ಮಿಕ ಅರಿವಿನಿಂದ ಸಂಪತ್ತಿನ ಸದ್ಬಳಕೆ ಸಾಧ್ಯ

Update: 2016-04-09 11:27 GMT

ಪುತ್ತೂರು: ಪ್ರತೀಯೊಬ್ಬರೂ ಅವರವರ ಧರ್ಮದ ಕುರಿತು ತಿಳುವಳಿಕೆಯುಳ್ಳವರಾಗಬೇಕು. ಕೇವಲ ಸಂಪತ್ತುಗಳಿಸುವುದೇ ನಮ್ಮ ಜೀವನದ ಉದ್ದೇಶವಾಗಿರದೆ ಇರುವ ಸಂಪತ್ತನ್ನು ಯಾವ ರೀತಿ ಸದ್ಬಳಕೆ ಮಾಡಿಕೊಳ್ಳಬೇಕಾದರೆ ಧರ್ಮದ ಅರಿವು ಅಗತ್ಯವಾಗಿ ಇರಬೇಕು ಎಂದು ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು.
ಅವರು ಶನಿವಾರ ಪರ್ಪುಂಜ ಸರಕಾರಿ ಹಿಪ್ರಾ ಶಾಲೆಯಲ್ಲಿ ಒಡಿಯೂರು ಶ್ರೀ ಗುರುದೇವ ಗ್ರಾಮ ವಿಕಾಸ ಯೋಜನೆಯ ಪರ್ಪುಂಜ ಘಟಕದ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಪೃಕೃತ್ತಿಯಲ್ಲಿರುವ ಪ್ರತೀಯೊಂದು ಜೀವಿ, ವಸ್ತುಗಳು ಇನ್ನೊಬ್ಬರಿಗಾಗಿ ಇದೆ ಆದರೆ ಬುದ್ದಿಶಕ್ತಿ, ಸಾಮಥ್ಯ ಎಲ್ಲವೂ ಇರುವ ಮಾನವನು ಪರೋಪಕಾರಿಯಾಗಬೇಕಿದೆ. ಒಗ್ಗಟ್ಟಿಗೆ ಎಂದೂ ಪ್ರತಿಫಲವಿದೆ. ಸಾಮೂಹಿಕ ಪ್ರಾರ್ಥನೆಗೂ ಶಕ್ತಿಯ ಸಂಚಲನವಾಗುತ್ತದೆ ಎಂದು ಹೇಳಿದ ಅವರು ಒಡಿಯೂರು ಗ್ರಾಮ ವಿಕಾಸ ಯೋಜನೆ ಕೇವಲ ಆರ್ಥಿಕ ಸಬಲತೆಗೆ ಮಾಡಿದ ಯೋಜನೆಯಲ್ಲ ಜನರಲ್ಲಿ ಧರ್ಮ ಜಾಗೃತಿಯೊಂದಿಗೆ ಆರ್ಥಿಕವಾಗಿಯೂ, ಸಮಾಜಿಕವಾಗಿ ಶಕ್ತಿಯುತವಾಗಿರಲು ಯೋಜನೆ ನೆರವಾಗಲಿದೆ ಎಂದು ಹೇಳಿದರು.
ಯೋಜನೆಯ ಸಂಚಾಲಕ ತಾರನಾಥ ಕೊಟ್ಟಾರಿಯವರು ಮಾತನಾಡಿ ಸ್ವಾಮೀಜಿಯವರು ಸಮಾಜದ ಅಭಿವೃದ್ದಿ ಹಾಗೂ ಧಾರ್ಮಿಕ ಜಾಗೃತಿಗಾಗಿ ಕೈಗೊಳ್ಳುತ್ತಿರುವ ಯೋಜನೆಯ ಕುರಿತು ಮಾಹಿತಿ ನೀಡಿದರು.
ಸಮರಂಭದಲ್ಲಿ ಮಾಜಿ ತಾಪಂ ಅಧ್ಯಕ್ಷ ಮಹಮ್ಮದ್ ಬಡಗನ್ನೂರು, ರಾಮಜಾಲು ಬ್ರಹ್ಮಬೈದರ್ಕಗಳ ಗರಡಿ ಆಡಳಿತ ಮೊಕ್ತೇಸರ ಸಂಜೀವ ಪೂಜಾರಿ ಕೂರೇಲು, ಎಪಿಎಂಸಿ ಮಾಜಿ ಅಧ್ಯಕ್ಷ ಬೂಡಿಯಾರು ರಾಧಾಕೃಷ್ಣ ರೈ, ಪರ್ಪುಂಜ ಶಾಲಾ ಸಹ ಶಿಕ್ಷಕ ಅಶ್ರಫ್, ಪುತ್ತೂರು ವಕೀಲರ ಸಂಘದ ಅಧ್ಯಕ್ಷ ದುರ್ಗಾಪ್ರಸಾದ್ ರೈ ಕುಂಬ್ರ ಸಂದರ್ಭೋಚಿತವಾಗಿ ಮತನಾಡಿ ಸ್ವಾಮೀಜಿಯವರ ಗ್ರಾಮ ವಿಕಾಸ ಕಲ್ಪನೆಯ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.
ಒಳಮೊಗ್ರು ಗ್ರಾಪಂ ಅಧ್ಯಕ್ಷ ಯತಿರಾಜ್ ರೈ ನೀರ್ಪಾಡಿ ಅಧ್ಯಕ್ಷತೆ ವಹಿಸಿದ್ದರು.
ಪರ್ಪುಂಜ ಹಾಲು ಉತ್ಪಾದಕರ ಸಂಘದ ಸ್ಥಾಪಕಾಧ್ಯಕ್ಷ ನಾರಾಯಣ ರೈ ಬಾರಿಕೆ, ಆರ್ಯಾಪು ಗ್ರಾಪಂ ಅಧ್ಯಕ್ಷೆ ಗೀತಾ, ಪರ್ಪುಂಜ ಸ್ನೇಹ ಯುವಕಮಂಡಲದ ಅಧ್ಯಕ್ಷ ಪ್ರೇಮ್ ರಾಜ್ ರಐ, ಪರ್ಪುಂಜ ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ರಾಜೇಶ್ ರೈ ಪರ್ಪುಂಜ, ಸ್ನೇಹ ಮಹಿಳಾ ಮಂಡಲದ ಅಧ್ಯಕ್ಷ ಪ್ರಮೀಳಾ ಟಿ ,ಗುರುಸೇವಾ ಬಳಗದ ಗೌರವಾಧ್ಯಕ್ಷ ದೇವಪ್ಪ ನೋಂಡ ಪುತ್ತೂರು, ಒಡಿಯೂರು ವಜ್ರಮಾತಾ ಮಹಿಳಾ ಪುತ್ತೂರು ಘಟಕದ ಅಧ್ಯಕ್ಷೆ ನಯನಾ ರೈ, ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪರ್ಪುಂಜ ಘಟಕದ ತುಳಸಿ ವರದಿ ವಾಚನ ಮಾಡಿದರು. ಶಶಿ ಸ್ವಾಗತಿಸಿ, ಉಪಾಧ್ಯಕ್ಷ ತಿಮ್ಮಪ್ಪ ಗೌಡ ಡಿಂಬ್ರಿ ವಂದಿಸಿದರು. ಕಾರ್ಯದರ್ಶಿ ಬದ್ರುನ್ನಿಸಾ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News