ಪುತ್ತೂರಿನಲ್ಲಿ ‘ನಮ್ಮ ಕುಡ್ಲ’ ತುಳು ಸಿನಿಮಾ ಬಿಡುಗಡೆ

Update: 2016-04-09 11:44 GMT

ಪುತ್ತೂರು: ಪುತ್ತೂರು ಮೂಲಕ ಅಶ್ವಿನಿ ಹರೀಶ್ ನಾಯಕ್ ಅವರ ನಿರ್ಮಾಣ, ನಿರ್ದೇಶನದಲ್ಲಿ ಮೂಡಿಬಂದ ತುಳು ಸಿನಿಮಾ ‘ನಮ್ಮ ಕುಡ್ಲ’ ಎ. 8ರಂದು ಪುತ್ತೂರು ಅರುಣಾ ಚಿತ್ರಮಂದಿರದಲ್ಲಿ ಬಿಡುಗಡೆಗೊಂಡಿತು. ಕನ್ಯಾನ ಬಾಳೆಕೋಡಿ ಶ್ರೀ ಕಾಳಭೈರವೇಶ್ವರ ಕ್ಷೇತ್ರದ ಶ್ರೀ ಶಶೀಕಾಂತ ಮಣಿ ಸ್ವಾಮೀಜಿ ಹಾಗೂ ಶಾಸಕಿ ಶಕುಂತಳಾ ಟಿ.ಶೆಟ್ಟಿ ಅವರು ದೀಪ ಬೆಳಗಿಸುವುದರ ಮೂಲಕ ಚಿತ್ರ ಬಿಡುಗಡೆ ಮಾಡಿದರು. ಬಳಿಕ ಮಾತನಾಡಿದ ಶಶೀಕಾಂತ ಮಣಿ ಸ್ವಾಮೀಜಿ ಹುಟ್ಟು ಸಾವಿನ ನಡುವೆ ನಾವೆಲ್ಲರೂ ಒಂದಲ್ಲ ಒಂದು ಪಾತ್ರ ಮಾಡುವ ಕಲಾವಿದರೇ ಆಗಿದ್ದೇವೆ. ಈ ಜೀವನವೇ ಒಂದು ನಾಟಕ ರಂಗವಾಗಿದೆ. ಇಂತಹ ಸಮಯದಲ್ಲಿ ಹರೀಶ್ ನಾಯಕ್ ಹಾಗೂ ಅವರ ಪತ್ನಿ ಅಶ್ವಿನಿ ಹರೀಶ್ ನಾಯಕ್‌ರವರು ಶ್ರಮ ಪಟ್ಟು ‘ನಮ್ಮ ಕುಡ್ಲ’ ಎಂಬ ಹೊಸತನದ ತುಳು ಚಿತ್ರವನ್ನು ಅರ್ಪಿಸಿದ್ದಾರೆ.

ತುಳು ಸಿನಿಮಾಗಳನ್ನು ಪ್ರೋತ್ಸಾಹಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಹೇಳಿದರು. ಶಾಸಕಿ ಶಕುಂತಳಾ ಟಿ.ಶೆಟ್ಟಿ ಮಾತನಾಡಿ ಮಹಿಳಾ ನಿರ್ದೇಶಕಿಯೋರ್ವರು ನಿರ್ದೇಶನದ ಮೊತ್ತ ಮೊದಲ ತುಳು ಸಿನಿಮಾ ಇದಾಗಿದ್ದು, ಈ ಚಿತ್ರಕ್ಕೆ ಯಶಸ್ಸು ಸಿಗಲಿ, ಇನ್ನಷ್ಟು ತುಳು ಸಿನಿಮಾಗಳು ಬರಲಿ ಎಂದು ಹೇಳಿದರು. ಪುತ್ತೂರು ತುಳುಕೂಟದ ಅಧ್ಯಕ್ಷರಾದ ತುಳು ಅಕಾಡೆಮಿ ಸದಸ್ಯ ಕುಂಬ್ರ ದುರ್ಗಾಪ್ರಸಾದ್ ರೈ, ಸುದ್ದಿ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಡಾ.ಯು.ಪಿ.ಶಿವಾನಂದ, ಪುತ್ತೂರು ಸರ್ಕಲ್ ಇನ್ಸ್‌ಪೆಕ್ಟರ್ ಮಹೇಶ್ ಪ್ರಸಾದ್, ಸಬ್ ಇನ್ಸ್‌ಪೆಕ್ಟರ್ ಅಬ್ದುಲ್ ಖಾದರ್, ಹಿರಿಯ ಯಕ್ಷಗಾನ ಕಲಾವಿದ ಕೆ.ಎಚ್.ದಾಸಪ್ಪ ರೈ, ಗಾನಸಿರಿ ಕಲಾಕೇಂದ್ರದ ನಿರ್ದೇಶಕ ಕಿರಣ್ ಕುಮಾರ್, ನಟ ಸುಂದರ ರೈ ಮಂದಾರ, ಪುತ್ತೂರು ಕೇಬಲ್ ನೆಟ್‌ವರ್ಕ್‌ನ ಸತೀಶ್, ಅರುಣಾ ಚಿತ್ರಮಂದಿರದ ಮಾಲಕ ರಮಾನಂದ ನಾಯಕ್, ಮೆನೇಜರ್ ನವೀನ್‌ಚಂದ್ರ, ಸಾಮಾಜಿಕ ಕಾರ್ಯಕರ್ತೆ ನಯನಾ ರೈ, ತುಳು ಅಕಾಡೆಮಿಯ ಮಾಜಿ ಸದಸ್ಯೆ ಪ್ರೇಮಲತಾ ರಾವ್, ಕನಸು ಕಣ್ಣು ತೆರೆದಾಗ ಸಿನಿಮಾದ ನಟಿ ವಸಂತಲಕ್ಷ್ಮೀ, ನಮ್ಮ ಕುಡ್ಲ ಫಿಲಂನ ಹರೀಶ್ ನಾಯಕ್ ಉಪಸ್ಥಿತರಿದ್ದರು. ಹಿರಿಯ ಕಲಾವಿದ ಚಿದಾನಂದ ಕಾಮತ್ ಕಾಸರಗೋಡು ಸ್ವಾಗತಿಸಿ, ವಂದಿಸಿ, ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News