ಪುತ್ತೂರು: ಗ್ರಾಮ ಪಂಚಾಯತ್ ಉಪಚುನಾವಣೆ: ಒಟ್ಟು 31 ನಾಮಪತ್ರ ಸಲ್ಲಿಕೆ; 2 ತಿರಸ್ಕೃತ

Update: 2016-04-09 11:59 GMT

ಪುತ್ತೂರು, ಎ, 9 : ಪುತ್ತೂರು ತಾಲೂಕಿನ 6 ಗ್ರಾಮ ಪಂಚಾಯತ್‌ಗಳಲ್ಲಿ ತೆರವಾದ ತಲಾ ಒಂದು ಸ್ಥಾನಗಳಿಗೆ ಎ.17ರಂದು ನಡೆಯಲಿರುವ ಚುನಾವಣೆಗೆ ಒಟ್ಟು 31 ನಾಮಪತ್ರ ಸಲ್ಲಿಕೆಯಾಗಿದ್ದು,  ಕೊಳ್ತಿಗೆ 4, ಬಡಗನ್ನೂರು 2, ಕಡಬ 5, ಅರಿಯಡ್ಕ 9, ನೂಜಿಬಾಳ್ತಿಲ 5, ನೆಟ್ಟಣಿಗೆ ಮುಡ್ನೂರು ಗ್ರಾ.ಪಂ.ನಲ್ಲಿ 6ನಾಮಪತ್ರಗಳು ಸಲ್ಲಿಕೆಯಾಗಿತ್ತು. ಈ ಪೈಕಿ ಶನಿವಾರ ನಡೆದ ನಾಮಪತ್ರ ಪರಿಶೀಲನೆಯಲ್ಲಿ 2 ನಾಮಪತ್ರಗಳು ತಿರಸ್ಕೃತಗೊಂಡಿದೆ.

ಕೊಳ್ತಿಗೆ ಗ್ರಾ.ಪಂನ ಮೂರನೇ ವಾರ್ಡ್‌ನ ಅನುಸೂಚಿತ ಜಾತಿಗೆ ಮೀಸಲು ಕ್ಷೇತ್ರದಿಂದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಾಗಿ ಕಣಿಯಾರು ಸಿಆರ್‌ಸಿ ಕಾಲನಿಯ ಷಣ್ಮುಖಲಿಂಗಂ ಹಾಗೂ ಪೆರ್ಲಂಪಾಡಿ ಸಿಆರ್‌ಸಿ ಕಾಲನಿ ಕಂದಸ್ವಾಮಿ ನಾಮಪತ್ರ ಸಲ್ಲಿಸಿದ್ದಾರೆ. ಬಡಗನ್ನೂರು ಗ್ರಾ.ಪಂ ಪಡುವನ್ನೂರು ಒಂದನೇ ವಾರ್ಡ್‌ನ ಹಿಂದುಳಿದ ವರ್ಗ ಎ' ಮೀಸಲು ಸ್ಥಾನಕ್ಕೆ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಸವಿತಾ ಮಡ್ಯಲಮೂಲೆ ಸಜಂಕಾಡಿ ಹಾಗೂ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಜ್ಯೋತಿ ಅರ್ತಿಕಜೆ, ಕಡಬ ಗ್ರಾ.ಪಂನ ಕೋಡಿಂಬಾಳ 2ನೇ ವಾರ್ಡ್‌ನ ಸಾಮಾನ್ಯ ಮೀಸಲು ಸ್ಥಾನಕ್ಕೆ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ  ಸಂಜೀವ ನಾಯ್ಕ ಅಜ್ಜಿಕಟ್ಟೆ , ಅನೀಶ್ ಕೋಡಿಂಬಾಳ , ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಕೃಷ್ಣಪ್ಪ ನಾಯ್ಕ , ಜೆಡಿಎಸ್ ಬೆಂಬಲಿತ ಅಭ್ಯರ್ಥಿಯಾಗಿ ಅಬ್ದುಲ್ ಲತೀಫ್, ಹಾಗೂ ಪಕ್ಷೇತರ ಅಭ್ಯರ್ಥಿಯಾಗಿ .ನಿವೃತ್ತ ಅಭಿವೃದ್ದಿ ಅಧಿಕಾರಿ ಸೈಮನ್ ಲೂವಿಸ್ ರೋಡ್ರಿಗಸ್ ನಾಮಪತ್ರ ಸಲ್ಲಿಸಿರುತ್ತಾರೆ. ನೂಜಿಬಾಳ್ತಿಲ ಗ್ರಾ.ಪಂ.ನ 1ನೇ ವಾರ್ಡ್‌ಗೆ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಆಂಜೇರಿ ಜೋಸ್ ನಾಮಪತ್ರ ಸಲ್ಲಿಸಿದರು. ಎ.7 ರಂದು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಪಿ.ಯು ಸ್ಕರಿಯಾ ಹಾಗೂ ಪಿ.ಪಿ ಎಲಿಯಾಸ್ ನಾಮಪತ್ರ ಸಲ್ಲಿಸಿದ್ದಾರೆ. ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಆಂಜೇರಿ ಜೋಸ್ ಇನ್ನೊಂದು ನಾಮಪತ್ರ ಸಲ್ಲಿಸಿದ್ದರೆ, ಜೆಡಿಎಸ್ ಬೆಂಬಲಿತ ಅಭ್ಯರ್ಥಿಯಾಗಿ ಹರಿಪ್ರಸಾದ್ ಎನ್ಕಾಜೆ ನಾಮಪತ್ರ ಸಲ್ಲಿಸಿದ್ದಾರೆ. ನೆಟ್ಟಣಿಗೆ ಮುಡ್ನೂರು ಗ್ರಾ.ಪಂ ಹಿಂದುಳಿದ ವರ್ಗ ಎ'ಗೆ ಮೀಸಲಿರಿಸಿದ ಸ್ಥಾನಕ್ಕೆ ಮಹಮ್ಮದ್ ಆರಿಪ್ ಈಶ್ವರಮಂಗಲ, ಉಮ್ಮರ್ ಪಿ ಈಶ್ವರಮಂಗಲ, ಮಹಮ್ಮದ್ ಅಶ್ರಫ್ ಈಶ್ವರಮಂಗಲ, ಎ.ಎಂ ಅಬ್ದುಲ್‌ಕುಂಞಿ ಆಲಂತಡ್ಕ, ಎಸ್ ಅಬ್ದುಲ್ ಖಾದರ್, ರಮೇಶ್ ಪೂಜಾರಿ ಮುಂಡ್ಯ, ಅರಿಯಡ್ಕ ಗ್ರಾ.ಪಂನ ಸಾಮಾನ್ಯ ಮಹಿಳೆ ಮೀಸಲು ಸ್ಥಾನಕ್ಕೆ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಾಗಿ ಸುಚೇತಾ ರೈ ಡೆಂಬಾಳೆ ಹಾಗೂ ಶಾಂತಾ ಜೆ ರೈ, ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಾಗಿ ಜಯಂತಿ ಗಂಗಾಧರ ಪಾಟಾಳಿ, ಸುನೀತಾ ಮಾಣಿಯಡ್ಕ, ಸರೋಜಿನಿಯವರು ನಾಮಪತ್ರ ಸಲ್ಲಿಸಿದ್ದಾರೆ.

ಶನಿವಾರ ನಾಮಪತ್ರ ಪರಿಶೀಲನೆ ನಡೆದಿದ್ದು ನೆಟ್ಟಣಿಗೆ ಮುಡ್ನೂರು ಗ್ರಾ.ಪಂನಲ್ಲಿ ಎ.ಎಂ ಅಬ್ದುಲ್ ಕುಂಞಿ ಹಾಗೂ ನೂಜಿಬಾಳ್ತಿಲ ಗ್ರಾ.ಪಂನ ಅಂಜೇರಿ ಜೋಸ್‌ರವರ ನಾಮಪತ್ರ ತಿರಸ್ಕೃತಗೊಂಡಿರುತ್ತದೆ. ಈ ಪೈಕಿ ಅಂಜೇರಿ ಜೋಶ್‌ರವರು ಎರಡು ನಾಮಪತ್ರ ಸಲ್ಲಿಸಿದ್ದು ಒಂದು ನಾಮಪತ್ರ ತಿರಸ್ಕೃತಗೊಂಡಿದೆ. ಉಳಿದಂತೆ ಕಡಬ, ಅರಿಯಡ್ಕ, ಬಡಗನ್ನೂರು ಹಾಗೂ ಕೊಳ್ತಿಗೆ ಪಂಚಾಯತ್‌ನಲ್ಲಿ ಸಲ್ಲಿಕೆಯಾದ ಎಲ್ಲಾ ನಾಮಪತ್ರಗಳು ಕ್ರಮಬದ್ದವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News