ಕಾಸರಗೋಡು : ಅಂತಾರಾಷ್ಟ್ರೀಯ ಗಾಳಿಪಟ ಉತ್ಸವಕ್ಕೆ ಚಾಲನೆ

Update: 2016-04-09 14:07 GMT

ಕಾಸರಗೋಡು : ಪ್ರವಾಸೋದ್ಯಮ ಕೇಂದ್ರವಾದ  ಬೇಕಲ್ ಬೀಚ್ ಪಾರ್ಕ್ ನಲ್ಲಿ  ಬೇಕಲ್ ರೆಸಾರ್ಟ್ ಅಭಿವ್ರದ್ದಿ  ನಿಗಮ , ಲಯನ್ಸ್ ಕ್ಲಬ್ ಆಫ್ ಬೇಕಲ್ ಪೋರ್ಟ್  ಮತ್ತು ಜಿಲ್ಲಾ ಪ್ರವಾಸೋದ್ಯಮ ಮಂಡಳಿ ಸಹಯೋಗದೊಂದಿಗೆ     ನಡೆಯುತ್ತಿರುವ ಎರಡು ದಿನಗಳ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವಕ್ಕೆ ಶನಿವಾರ ಸಂಜೆ ಚಾಲನೆ ನೀಡಲಾಯಿತು.
ಉಪ ಜಿಲ್ಲಾಧಿಕಾರಿ ಮ್ರನ್ ಮಾಯಿ  ಶಶಾಂಕ್ ಜೋಷಿ ಉದ್ಘಾಟಿಸಿದರು.  ಬೇಕಲ್ ಪೋರ್ಟ್  ಲಯನ್ಸ್ ಅಧ್ಯಕ್ಷ  ಖಾಲಿದ್  ಸಿ . ಪಾಲಕಿ  ಅಧ್ಯಕ್ಷತೆ ವಹಿಸಿದ್ದರು.  ಬಿ ಆರ್ ಡಿ ಸಿ  ಮೆನೇಜಿಂಗ್ ನಿರ್ದೇಶಕ  ಕೆ. ಎಂ ಮುಹಮ್ಮದ್ ಅನಿಲ್ ,  ಡಿ  ಟಿ ಪಿ ಸಿ  ಕಾರ್ಯದರ್ಶಿ  ನಾಗೇಶ್ ತೆರುವತ್ ,  ಸುಜಿತ್ , ಶಾಜಿ ಪಿ . ನಾಯರ್ ,    ಡಾ. ಪದ್ಮಾಕ್ಷನ್,  ಅಬ್ದುಲ್ಲ , ರಾಮಚಂದ್ರನ್ , ಅಬ್ದುಲ್ ನಾಸರ್ , ಅನ್ವರ್ ಹಸನ್ ಎಂ . ಕೆ ಉಪಸ್ಥಿತರಿದ್ದರು.
ಗಾಳಿಪಟ ಉತ್ಸವ  ನಾಳೆ ( 10) ಸಮಾರೋಪಗೊಳ್ಳಲಿದೆ. 
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News