ರಾಜ್ಯಮಟ್ಟದ ರಾಷ್ಟ್ರೀಯ ಸೇವಾ ಯೋಜನೋತ್ಸವಕ್ಕೆ ಚಾಲನೆ

Update: 2016-04-09 18:12 GMT

ಬೆಳ್ತಂಗಡಿ, ಎ.9: ಪ್ರಾದೇಶಿಕ ಅಸ ಮತೋಲನ ನಿವಾರಿಸಲು ರಾಜ್ಯ ದಲ್ಲಿ ಮುಂದಿನ ವರ್ಷದಿಂದ ಎರಡು ಕಡೆಗಳಲ್ಲಿ ರಾಷ್ಟ್ರೀಯ ಸೇವಾ ಯೋಜನೋತ್ಸವಗಳನ್ನು ಆಯೋಜಿ ಸಲಾಗುವುದು ಎಂದು ಯುವ ಸಬಲೀ ಕರಣ ಹಾಗೂ ಕ್ರೀಡಾ ಸಚಿವ ಕೆ. ಅಭಯಚಂದ್ರ ಜೈನ್ ಹೇಳಿದ್ದಾರೆ.
ಉಜಿರೆ ಎಸ್‌ಡಿಎಂ ಕಾಲೇಜಿನಲ್ಲಿ 5 ದಿನಗಳ ಕಾಲ ನಡೆಯುವ ರಾಜ್ಯ ಮಟ್ಟದ ರಾಷ್ಟ್ರೀಯ ಸೇವಾ ಯೋಜ ನೋತ್ಸವವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡು ತ್ತಿದ್ದರು.
ಯುವ ಜನತೆಯಲ್ಲಿ ಸಾಂಸ್ಕೃತಿಕ ಆಸಕ್ತಿ, ಭಾವೈಕ್ಯ ಮೂಡಿಸುವ ಉದ್ದೇಶ ದಿಂದ ಯೋಜನೋತ್ಸವವನ್ನು ಸಂಘಟಿಸಲಾಗುತ್ತಿದೆ. ಇದಕ್ಕೆ ರಾಜ್ಯ ಸರಕಾರ ವಿಶೇಷ ಅನುದಾನವನ್ನೂ ಒದಗಿಸುತ್ತಿದೆ. ಆದರೆ ಪ್ರತೀ ವರ್ಷ ಈ ಯೋಜನೋತ್ಸವವು ರಾಜ್ಯದ ಒಂದು ಕಡೆ ಮಾತ್ರ ನಡೆಸಲಾಗುತ್ತಿತ್ತು. ಪ್ರಾದೇಶಿಕ ತಾರತಮ್ಯ ಇರಬಾರದು ಎಂಬ ದೃಷ್ಟಿಯಿಂದ ರಾಜ್ಯದ ಎರಡು ಕಡೆ ನಡೆಸಲು ಉದ್ದೇಶಿಸಲಾಗಿದೆ. ಅಲ್ಲದೇ, 15 ರಾಷ್ಟ್ರೀಯ ಭಾವೈಕ್ಯತಾ ಶಿಬಿರಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು. ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷ ಪ್ರೊ.ಎಸ್.ಪ್ರಭಾಕರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಡಾ.ಬಿ. ಯಶೋವರ್ಮ, ರಾ.ಸೇ.ಯೋ. ಪ್ರಾದೇಶಿಕ ನಿರ್ದೇಶನಾಲಯದ ನಿರ್ದೇಶಕ ಎ.ಎನ್.ಪೂಜಾರ್, ಮಂಗಳೂರು ವಿವಿಯ ಯೋಜನೆಯ ಕಾರ್ಯಕ್ರಮ ಸಂಯೋಜನಾಧಿಕಾರಿ ವಿನೀತಾ ರೈ, ಸಂಯೋಜನಾಧಿಕಾರಿ ಡಾ.ಶ್ರೀನಿವಾಸ್, ಉಜಿರೆ ಕಾಲೇಜಿನ ಯೋಜನೆಯ ಕಾರ್ಯಕ್ರಮಾಧಿಕಾರಿ ಶಕುಂತಳಾ ವೇದಿಕೆಯಲ್ಲಿ ಉಪಸ್ಥಿತ ರಿದ್ದರು.
ಕಾಲೇಜಿನ ಪ್ರಾಚಾರ್ಯ ಪ್ರೊ.ಕೆ.ಎಸ್.ಮೋಹನ ನಾರಾಯಣ ಸ್ವಾಗತಿಸಿದರು. ರಾ.ಸೇ.ಯೋ. ರಾಜ್ಯ ಸಂಪರ್ಕಾಧಿಕಾರಿ ಡಾ.ಗಣನಾಥ ಶೆಟ್ಟಿ ಎಕ್ಕಾರು ಪ್ರಾಸ್ತಾವಿಸಿದರು. ಕಾರ್ಯ ಕ್ರಮಾಧಿಕಾರಿ ಭಾನುಪ್ರಕಾಶ್ ವಂದಿ ಸಿದರು. ಡಾ.ಬಿ.ಎ.ಕುಮಾರ್ ಹೆಗ್ಡೆ ಕಾರ್ಯಕ್ರಮ ನಿರ್ವಹಿಸಿದರು.
ರಾಜ್ಯದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ರಾಜ್ಯ ರಾ.ಸೇ.ಯೋಜನಾ ಕೋಶ, ಮಂಗಳೂರು ವಿವಿ ಹಾಗೂ ಉಜಿರೆ ಎಸ್‌ಡಿಎಂ ಕಾಲೇಜಿನ ಸಂಯುಕ್ತಾಶ್ರಯದಲ್ಲಿ ನಡೆಯುವ ಯೋಜನೋತ್ಸವದಲ್ಲಿ ರಾಜ್ಯದ 32 ವಿವಿಗಳ ಹಾಗೂ 4 ನಿರ್ದೇಶ ನಾಲಯದ ಪ್ರತಿನಿಧಿಗಳು ಭಾಗ ವಹಿಸುತ್ತಿದ್ದಾರೆ. ರಾಷ್ಟ್ರೀಯ ಸೇವಾ ಯೋಜನೆ ಮತ್ತು ಭಾವೈಕ್ಯ, ಕ್ಯಾನ್ಸರ್ ಬಗ್ಗೆ ಜಾಗೃತಿ, ವಿದ್ಯಾರ್ಥಿ ಗಳು ಮತ್ತು ದುಶ್ಚಟಗಳ ಬಗ್ಗೆ ವಿಶೇಷ ಉಪನ್ಯಾಸ, ಸುಗಮ ಸಂಗೀತ, ನೃತ್ಯ, ಪ್ರಬಂಧ, ರಸ ಪ್ರಶ್ನೆ, ಪ್ರಹಸನ, ಚರ್ಚೆ, ಚಿತ್ರಕಲೆ, ವಸ್ತು ಪ್ರದರ್ಶನದ ವಿಷಯಗಳಲ್ಲಿ ಸ್ಪರ್ಧೆಗಳು ನಡೆಯಲಿವೆ. ಎ.13 ರಂದು ಸಮಾರೋಪ ಸಮಾರಂಭ ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News