ಭಟ್ಕಳ : ಜಗತ್ತಿನಲ್ಲಿ ಸಂಘರ್ಷಗಳೇರ್ಪಟ್ಟಿದ್ದು ಧರ್ಮಗಳ ಕಾರಣದಿಂದಲ್ಲ - ಮುಹಮ್ಮದ್‌ಕುಂಞಿ

Update: 2016-04-10 12:52 GMT

ಭಟ್ಕಳ : ಇಂದು ಜಗತ್ತಿನಾದ್ಯಂತ ಜಗತ್ತಿನಲ್ಲಿ ನಡೆಯುತ್ತಿರುವ ಸಂಘರ್ಷಗಳಿಗೆ ಧರ್ಮವೇ ಕಾರಣ ಎಂದು ನಂಬಲಾಗುತ್ತಿದ್ದು ಜಗತ್ತಿನಲ್ಲಿ ನಡೆದ ಎರಡು ಜಾಗತಿಕ ಯುದ್ಧಗಳಲ್ಲಿ ಕೋಟ್ಯಾಂತರ ಮಂದಿ ಸತ್ತಿದ್ದು ಧರ್ಮದ ಕಾರಣದಿಂದಲ್ಲ. ಹಾಗಾಗಿ ಜಗತ್ತಿನ ಸಂಘರ್ಷಗಳಿಗೆ ಧರ್ಮ ಯವುದೇ ರೀತಿಯ ಕಾರಣವಲ್ಲ ಎಂದು ಮಂಗಳೂರು ಶಾಂತಿ ಪ್ರಕಾಶನ ವ್ಯವಸ್ಥಾಪಕ ಮುಹಮ್ಮದ್ ಕುಂಞಿ ಹೇಳಿದರು.

ಅವರು ಭಾನುವಾರಇಲ್ಲಿನ ಬಂದರ್‌ರಸ್ತೆಯಲ್ಲಿರುವ ಹೋಟೆಲ್‌ರಾಯಲ್‌ಓಕ್ ನಲ್ಲಿಜಮಾಅತೆಇಸ್ಲಾಮಿ ಹಿಂದ್ ಭಟ್ಕಳ ಆಯೋಜಿಸಿದ್ದ ಧರ್ಮ ಮತ್ತು ಸಮಾಜಒಂದು ಸಂವಾದಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡುತ್ತಿದ್ದರು.

ಧರ್ಮವು ಮನುಷ್ಯನನ್ನು ಪರಿಶುದ್ಧನನ್ನಾಗಿ ಮಾಡುತ್ತದೆಎಂದಅವರು, ಇದರ ಮೂಲಕ ಮನುಷ್ಯಎಲ್ಲರನ್ನೂ ಗೌರವಿಸಿ ಪ್ರೀತಿಸುವ ಮೂಲಕ ಪರಸ್ಪರರುಒಟ್ಟಾಗಿ ಬಾಳುವ ಸಮಾಜವನ್ನು ನಿರ್ಮಿಸುತ್ತಾನೆ, ಧರ್ಮದ ಹೆಸರಲ್ಲಿಜನರ ಮಧ್ಯೆ ವಿಭಜನೆ ಸರಿಯಲ್ಲ. ಮನುಷ್ಯನನ್ನುತನ್ನ ಮಾತಾಪಿತರಿಗೆ, ಮಕ್ಕಳಿಗೆ ಪ್ರೀತಿಸುವುದನ್ನು ಕಲಿಸಿರಿಸುವುದು ಯಾವುದೇ ವಿಶ್ವವಿದ್ಯಾಲಯವಲ್ಲ ಬದಲಾಗಿಧರ್ಮವಾಗಿದೆಎಂದರು. ಇಂದುಜಗತ್ತಿನಲ್ಲಿನ ಸಂಘರ್ಷಕ್ಕೆರಾಜಕೀಯ, ಆರ್ಥಿಕ ಕಾರಣಗಳಿಂದಾಗಿದೆಯೆ ಹೊರತುಧರ್ಮದಿಂದಅಲ್ಲ, ನಮ್ಮ ಕುಟುಂಬಗಳು, ಶಿಥಿಲಾವಸ್ಥೆಗೆ ತಲುಪಿವೆ. ರಾಜಕೀಯದಲ್ಲಿಅರಾಜಕತೆಉಂಟಾಗಿದೆ.ಇದಕ್ಕೆಲ್ಲಕಾರಣ ನಮ್ಮಲ್ಲಿನಅಧರ್ಮವೇಕಾರಣಎಂದಅವರುಜಗತ್ತಿನಲ್ಲಿನ ನಡೆಯುತ್ತಿರುವಎಲ್ಲರೀತಿಯರಕ್ತಪಾತ, ಅನ್ಯಾಯ, ಅಕ್ರಮಗಳಿಗೆ ಮನುಷ್ಯಅಧರ್ಮಿಯಾಗಿರುವುದೇಕಾರಣಎಂದು ಹೇಳಿದರು.

ಮುಖ್ಯಅತಿಥಿಯಾಗಿ ಮಾತನಾಡಿದಕುಮಟಾದ ಸಂಸ್ಕೃತಿಉಪನ್ಯಾಸ ವೇದಿಕೆಯಅಧ್ಯಕ್ಷ ಪ್ರೋ.ವಿಷ್ಣು ಜೋಷಿ, ಧರ್ಮಎನ್ನುವ ಪದವುಎಲ್ಲವನ್ನೂ ಮೀರಿ ನಿಂತಿದ್ದುಇದುಕರ್ತವ್ಯ ಎಂಬ ಅರ್ಥವನ್ನು ಪಡೆದುಕೊಂಡಿದೆ.ಧರ್ಮದಿಂದ ಮನಸ್ಸಿನ ವಿಕಾರಗಳ ದೂರವಾಗುತ್ತವೆ. ನಮ್ಮಲ್ಲಿ ನಡೆಯುತ್ತಿರುವ ವರ್ಗಸಂಘರ್ಷಗಳು ನಿಲ್ಲಬೇಕು, ಹಿಂಸೆಯ ಬೀಜವನ್ನು ಸುಟ್ಟುಹಾಕಿ ಪ್ರೀತಿ, ಪ್ರೇಮದ ಬೀಜವನ್ನು ಬಿತ್ತಬೇಕೆಂದುಕರೆ ನೀಡಿದರು.

ಉತ್ತರಕನ್ನಡಜಿಲ್ಲಾಕನ್ನಡ ಸಾಹಿತ್ಯ ಪರಿಷತ್‌ಅಧ್ಯಕ್ಷಅರವಿಂದಕರ್ಕಿಕೋಡಿ ಮಾತನಾಡಿ, ನಾವು ಅತಿರೇಕದ ಮನಸ್ಸುಗಳಿಂದ ಹೊರಬರಬೇಕು, ಧರ್ಮಗಳ ಪ್ರತಿಷ್ಟೆಗಾಗಿ ಪರಸ್ಪರಕಾದಾಡುವುದು ಬೇಡ, ಶೋಷಣೆರಹಿತ ಸಮಾಜ ನಿರ್ಮಾಣಕ್ಕೆ ನಾವು ಕಟಿಬದ್ದರಾಗೋಣಎಂದುಕರೆ ನೀಡಿದರು.

ಪ್ರಸ್ತಾವಿಕವಾಗಿ ಮಾತನಾಡಿದಎಂ.ಆರ್.ಮಾನ್ವಿಜಮಾಅತೆಇಸ್ಲಾಮಿ ಹಿಂದ್‌ಮಾನವರೆಲ್ಲರೂ ಸಮಾನರು, ಏಕೋದರ ಸಹೋದರರಾಗಿದ್ದುಒಂದು ಒಳಿತಿನಿಂದ ಕೂಡಿದ ಸಮಾಜನಿರ್ಮಾಣ ಬಯಸುತ್ತದೆ.ಸಮಾಜದಲ್ಲಿ ಒಳಿತು-ಕೆಡುಗಳ ನಡುವಿನ ವ್ಯತ್ಯಾಸವನ್ನು ಸಮಾಜಕ್ಕೆತೋರ್ಪಡಿಸಬಯಸುತ್ತದೆಎಂದರು.

ಸೈಯ್ಯದ್‌ಉಮರ್‌ಉಸೈಮ್‌ಎಸ್.ಜೆ.ಕುರ್‌ಆನ್ ಪಠಿಸಿದರು.ಅಬ್ದುಲ್‌ಜಬ್ಬಾರ್ ಅಸದಿ ಅನುವಾದಿಸಿದರು.ಸ್ಥಾನಿಯಅಧ್ಯಕ್ಷ ಮುಜಾಹಿದ್ ಮುಸ್ತಫಾಧನ್ಯವಾದ ಅರ್ಪಿಸಿದರು.ವೇದಿಕೆಯಲ್ಲಿಜಮಾಅತೆಇಸ್ಲಾಮಿ ಹಿಂದ್‌ಉತ್ತರಕನ್ನಡಜಿಲ್ಲಾ ಸಂಚಾಲಕ ತಲ್ಹಾ ಸಿದ್ದಿಬಾಪ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News