ಮಂಗಳೂರು : ಡಾ.ಝಾಕಿರ್ ನಾಯ್ಕ್ ಕಾರ್ಯಕ್ರಮಕ್ಕೆ ತಡೆ, ಸರಕಾರದಿಂದ ವಚನ ಭಂಗ; ಆರೋಪ

Update: 2016-04-10 13:42 GMT

ಮಂಗಳೂರು, ಎ. 10: ಇಸ್ಲಾಮೀ ವಿದ್ವಾಂಸ ಡಾ.ಝಾಕಿರ್ ನಾಯ್ಕಾ ಅವರ ಪ್ರವಚನಕ್ಕೆ ಅನುಮತಿ ನೀಡುತ್ತೇವೆ ಎಂದು ಭರವಸೆ ನೀಡಿದ್ದ ರಾಜ್ಯ ಸರಕಾರ ಇದೀಗ ಅನುಮತಿಯನ್ನು ನಿರಾಕರಿಸಿದೆ ಎಂದು ಸೌತ್ ಕರ್ನಾಟಕ ಸಲಫಿ ಮೂವ್‌ಮೆಂಟ್‌ನ (ಎಸ್‌ಕೆಎಸ್‌ಎಂ)ನ ಕೇಂದ್ರೀಯ ಉಪಾಧ್ಯಕ್ಷ ಇಸ್ಮಾಯೀಲ್ ಶಾಫಿ ಆರೋಪಿಸಿದ್ದಾರೆ.

ಕಳೆದ ಡಿಸೆಂಬರ್ 27ರಂದು ಮಂಗಳೂರಿನ ನೆಹರೂ ಮೈದಾನದಲ್ಲಿ ಡಾ.ಝಾಕಿರ್ ನಾಯ್ಕ ಅವರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಅಂದು ವಿಧಾನ ಪರಿಷತ್ ಚುನಾವಣೆ ಇರುವುದರಿಂದ ಕಾರ್ಯಕ್ರಮವನ್ನು ಮುಂದೂಡುವಂತೆ ಮಾಡಿದ್ದ ಮನವಿಯ ಮೇರೆಗೆ ಕಾರ್ಯಕ್ರಮವನ್ನು ಜನವರಿ 2ರಂದು ನಿಗದಿಪಡಿಸಿ ಪ್ರಚಾರ ಕಾರ್ಯ ಕೈಗೊಳ್ಳಲಾಗಿತ್ತು. ಆದರೆ ರಾಜ್ಯ ಸರಕಾರ ಕೊನೆಯ ಗಳಿಗೆಯಲ್ಲಿ ನಿಷೇಧ ಹಾಕಿತ್ತು. ಈ ಬಗ್ಗೆ ಎಸ್‌ಕೆಎಸ್‌ಎಂ ವತಿಯಿಂದ ರಾಜ್ಯದ ಗೃಹ ಸಚಿವರನ್ನು ಸಂಪರ್ಕಿಸಿದಾಗ ಫೆಬ್ರವರಿ ತಾ.ಪಂ., ಜಿ.ಪಂ. ಚುನಾವಣೆ ನಡೆಯಲಿದ್ದು, ಮಾರ್ಚ್‌ನಲ್ಲಿ ಅವಕಾಶ ನೀಡುವುದಾಗಿ ಭರವಸೆ ನೀಡಿದ್ದರು. ಆದರೆ ಇದೇ ಎಪ್ರಿಲ್ 3ರಂದು ಕಾರ್ಯಕ್ರಮ ನಿಗದಿ ಪಡಿಸಿ ಗೃಹ ಸಚಿವರು ಮತ್ತು ಮುಖ್ಯಮಂತ್ರಿಯವರನ್ನು ಭೇಟಿ ಮಾಡಿ ಅನುಮತಿ ಕೇಳಿದ್ದೆವು. ಆದರೆ ಅವರಿಬ್ಬರೂ ಏನೇನೋ ನೆಪ ಹೇಳಿನಮ್ಮ ಬೇಡಿಕೆಯನ್ನು ತಿರಸ್ಕರಿಸಿದ್ದಾರೆ ಎಂದು ಇಸ್ಮಾಯೀಲ್ ಶಾಫಿ ಪತ್ರಿಕೆಗಳಿಗೆ ಬಿಡುಗಡೆಗೊಳಿಸಿದ ಪ್ರಕಟನೆಯಲ್ಲಿ ಆರೋಪ ಮಾಡಿದ್ದಾರೆ.

                

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News