ತುಕ್ಕು ಹಿಡಿದ ಮೀಟರ್ ಬಾಕ್ಸ್ ಬದಲಿಸಲು ಆಗ್ರಹ

Update: 2016-04-10 18:28 GMT

ಉಡುಪಿ, ಎ.10: ನಗರಸಭಾ ವ್ಯಾಪ್ತಿಯ 35 ವಾರ್ಡುಗಳಲ್ಲಿ ದಾರಿದೀಪವನ್ನು ಸುವ್ಯವಸ್ಥೆಯಲ್ಲಿಡಲು ನಗರಸಭೆ ಹಾಗೂ ಮೆಸ್ಕಾಂ ವತಿಯಿಂದ ಅಳವ ಡಿಸಲಾದ ಕಬ್ಬಿಣದ ಮೀಟರ್ ಬಾಕ್ಸ್(ಟೈಮರ್) ಸಂಪೂರ್ಣವಾಗಿ ತುಕ್ಕು ಹಿಡಿದಿದ್ದು, ಕೂಡಲೇ ಇದನ್ನು ಬದಲಾಯಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.

ಈ ಬಾಕ್ಸ್ ಒಳಗೆ ಅಳವಡಿಸಲಾದ ಟೈಮರ್ ಹಾಗೂ ಫ್ಯೂಸ್ ನೌಕರರಿಗೆ ತೀರಾ ಅಪಾಯಕಾರಿಯಾಗಿ ಪರಿಣಮಿಸಿದೆ. 35 ವಾರ್ಡುಗಳಲ್ಲಿ 400ಕ್ಕೂ ಅಧಿಕ ಬಾಕ್ಸ್‌ಗಳು ಶಿಥಿಲಾವಸ್ಥೆಯಲ್ಲಿರುವುದು ಕಂಡುಬಂದಿದೆ. ಆದ್ದರಿಂದ ನಗರಸಭೆ ಹಾಗೂ ಮೆಸ್ಕಾಂನ ಅಧಿಕಾರಿಗಳು ಇದನ್ನು ಕೂಡಲೇ ಬದಲಾಯಿಸಿ ಸಂಭಾವ್ಯ ಅನಾಹುತವನ್ನು ತಪ್ಪಿಸಬೇಕೆಂದು ಸಾಮಾಜಿಕ ಕಾರ್ಯಕರ್ತ ಗಣೇಶ್ ರಾಜ್ ಸರಳೇಬೆಟ್ಟು ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News