ಬಿ.ಸಿ.ರೋಡ್: ನೇತ್ರಾವತಿ ನದಿಯಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ

Update: 2016-04-11 09:06 GMT

ಬಂಟ್ವಾಳ, ಎ. 11: ಇಲ್ಲಿನ ಬಿ.ಮೂಡ ಗ್ರಾಮದ  ತಾಳಿಪಡ್ಪು ಸಮೀಪ ನೇತ್ರಾವತಿ ನದಿಯಲ್ಲಿ  ಇಂದು ಸುಮಾರು 40 ವರ್ಷ ಪ್ರಾಯದ ಅಪರಿಚಿತ ಗಂಡಸಿನ  ಮೃತದೇಹ ಇಂದು ಮಧ್ಯಾಹ್ನ ಪತ್ತೆಯಾಗಿದೆ.

ನದಿಯಲ್ಲಿ ಮೃತದೇಹ ಕಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಬಂಟ್ವಾಳ ನಗರ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದರು. 

ಮೃತ ವ್ಯಕ್ತಿ ವಲಸೆ ಕಾರ್ಮಿಕನಾಗಿದ್ದು, ಮಲಾಯಿಬೆಟ್ಟು ಎಂಬಲ್ಲಿ ಗಾರೆ ಕೆಲಸ ಮಾಡುತ್ತಿದ್ದರು ಎಂಬುದಾಗಿ ತಿಳಿದು ಬಂದಿದೆ.

ನದಿ ದಾಟಲು ದೋಣಿ ಸಿಗದಿದ್ದರಿಂದ ಈಜಿಕೊಂಡು ನದಿ ದಾಟುತ್ತಿದ್ದಾಗ ಅವರು ನೀರು ಪಾಲಾಗಿ ಮೃತಪಟ್ಟಿರಬಹುದು ಎಂದು ಬಂಟ್ವಾಳ ನಗರ ಠಾಣೆ ಪೊಲೀಸರು ಶಂಕಿಸಿದ್ದಾರೆ. 

ಈ ಬಗ್ಗೆ ಪ್ರಕರಣ ದಾಖಲಿಸಿರುವ ಪೊಲೀಸರು ಮೃತನ ವಿಳಾಸ ಪತ್ತೆಗಾಗಿ ತನಿಖೆ ನಡೆಸುತ್ತಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News