ಸುಳ್ಯ: ಆರಾದನಾ ಕೇಂದ್ರಗಳು ಭಕ್ತಿಯ ಸಂಕೇತ - ಒಡಿಯೂರು ಶ್ರೀ

Update: 2016-04-11 10:58 GMT

ಸುಳ್ಯ: ಶ್ರದ್ಧಾ ಕೇಂದ್ರಗಳು ನಮ್ಮೊಳಗಿನ ಅಂತರ್‌ಜ್ಯೋತಿ ಬೆಳಗಲು ಸಹಕಾರಿಯಾಗಿದ್ದು, ಆತ್ಮ ಕಲ್ಯಾಣವಾದಾಗ ಲೋಕ ಕಲ್ಯಾಣವಾಗುತ್ತದೆ. ಲೋಕ ಕಲ್ಯಾಣಕ್ಕೆ ಧಾರ್ಮಿಕ ಕೇಂದ್ರಗಳು ಪೂರಕಾವಾಗಿದ್ದು, ಭಕ್ತಿ ಸಂಕೇತವಾಗಿದೆ ಎಂದು ಒಡಿಯೂರು ಗುರುದೇವದತ್ತ ಮಹಾಸಂಸ್ಥಾನದ ಗುರುದೇವಾನಂದ ಸ್ವಾಮೀಜಿ ನುಡಿದರು. ಅವರು ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಸ್ಥಾನದ ನವೀಕರಣ ಪುನಃ ಪ್ರತಿಷ್ಠಾಬಂಧ ಬ್ರಹ್ಮಕಲಶ, ನೂತನ ದ್ವಜ ಪ್ರತಿಷ್ಠೆಯ ಮತ್ತು ವಾರ್ಷಿಕ ಜಾತ್ರೆಯ ಐದನೇ ದಿನದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಆಶಿರ್ವಚನ ನೀಡಿದರು. ಉಡುಪಿಯ ದ್ವೈತ ವೇದಾಂತ ಉಪನ್ಯಾಸಕ ವಿದ್ವಾನ್ ರಘುಪತಿ ಭಟ್ ಧಾರ್ಮಿಕ ಉಪನ್ಯಾಸ ನೀಡಿ, ಧರ್ಮ ಕರ್ಮಗಳಿಂದ ಮಾತ್ರ ಜನ್ಮ ಸಾರ್ಥಕತೆ ಸಾಧ್ಯ. ಅತಾತ್ವಿಕ ಬುದ್ಧಿಯನ್ನು ಬಿಟ್ಟು ಧರ್ಮದ ಕಡೆಗೆ ಸಾಗುವ ಮನಸ್ಥಿತಿ ಮನುಷ್ಯನಲ್ಲಿರಬೇಕು ಎಂದರು. ಜೀಣೋದ್ಧಾರ ಮತ್ತು ಬ್ರಹ್ಮಕಲಶ ಸಮಿತಿ ಕಾರ್ಯಾಧ್ಯಕ್ಷ ಕೆ.ಸತ್ಯನಾರಾಯಣ ಕೋಡಿಬೈಲ್ ಅಧ್ಯಕ್ಷತೆ ವಹಿಸಿದ್ದರು. ಸಮಾಂಭದಲ್ಲಿ ಬೆಂಗಳೂರು ಕರ್ನಾಟಕ ಲೋಕಾಯುಕ್ತದ ಸೀನಿಯರ್ ಸಿವಿಲ್ ನ್ಯಾಯಾಧೀಶ ಗೋಪಾಲಕೃಷ್ಣ ರೈ, ತೊಡಿಕಾನ ಮಲ್ಲಿಕಾರ್ಜುನ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಪಿ.ಬಿ. ದಿವಾಕರ ರೈ, ಮುರುಳ್ಯ ಲಕ್ಷ್ಮೀ ನರಸಿಂಹ ದೇವಸ್ಥಾನದ ಟ್ರಸ್ಟಿ ಪಿ.ರಾಮಚಂದ್ರ ಭಟ್ ದೇವಸ್ಯ, ಪೆರುವೋಡಿ ವಿಷ್ಣು ಮೂರ್ತಿ ದೇವಸ್ಥಾನದ ಆಡಳಿತ ಮೊಕ್ತೇಸರ ಎಂ.ಕೆ ಬಾಲಚಂದ್ರ ರಾವ್, ಚಾರ್ವಕ ಕಲಪಿಲೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಲಕ್ಷ್ಮಣ ಕರಂದ್ಲಾಜೆ, ಕಾಣಿಯೂರು ಪ್ರಗತಿ ವಿದ್ಯಾ ಸಂಸ್ಥೆಯ ಮುಖ್ಯ ಶಿಕ್ಷಕ ಗಿರಿಶಂಕರ ಸುಲಾಯ, ಜೀಣೋದ್ಧಾರ ಮತ್ತು ಬ್ರಹ್ಮಕಲಶ ಸಮಿತಿಯ ಕೋಶಾಧಿಕಾರಿ ಪಿ.ಮಂಜಪ್ಪ ರೈ, ಜೀಣೋದ್ಧಾರ ಮತ್ತು ಬ್ರಹ್ಮಕಲಶ ಸಮಿತಿ ಕಾರ್ಯದರ್ಶಿ ಕುಶಾಲಪ್ಪ ಗೌಡ, ವ್ಯವಸ್ಥಾಪನಾ ಸಮಿತಿ ಸದಸ್ಯರುಗಳಾದ ಭಾಮಿನಿ ಜತ್ತಪ್ಪ ಗೌಡ, ದಾಮೋದರ ನಾಯ್ಕ, ರಾಮಣ್ಣ ರೈ ವೈಪಾಲ, ಸುಜಾತ ಪದ್ಮನಾಭ, ಪಿ.ವೆಂಕಟಕೃಷ್ಣ ರಾವ್ ಉಪಸ್ಥಿತರಿದ್ದರು. ಜೀಣೋದ್ಧಾರ ಮತ್ತು ಬ್ರಹ್ಮಕಲಶ ಸಮಿತಿಯ ಅಧ್ಯಕ್ಷ ಎಸ್.ಎನ್ ಮನ್ಮಥ ಸ್ವಾಗತಿಸಿ, ಪ್ರೀತಂ ರೈ ವಂದಿಸಿದರು. ಗಣೇಶ್ ಪೂಜಾರಿ ಕೊಲ್ಯ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News