ಕಡಬ : ಎಪ್ರಿಲ್ 12 ರಿಂದ 14ರ ತನಕ ಕೂರತ್ ಇಸ್ಲಾಮಿಕ್ ಎಜುಕೇಷನ್ ಸೆಂಟರ್‌ನ ವಾರ್ಷಿಕೋತ್ಸವ

Update: 2016-04-11 13:11 GMT

 ಕಡಬ, ಎ.11. ಪುತ್ತೂರು ತಾಲೂಕಿನ ಕುದ್ಮಾರು ಗ್ರಾಮದ ಬರೆಪ್ಪಾಡಿ ಕೂರತ್ ಅಲ್ ಫಝಲ್ ಇಸ್ಲಾಮಿಕ್ ಎಜುಕೇಶನ್ ಸೆಂಟರ್‌ನ 16 ನೇ ಸ್ವಲಾತ್ ವಾರ್ಷಿಕೋತ್ಸವ ಹಾಗೂ ಖಾಝಿ ಸ್ವೀಕಾರ, ಅಗಲಿದ ಸುನ್ನತ್ ಜಮಾಅತಿನ ಉಲಾಮ ನೇತಾರರ ಅನುಸ್ಮರಣೆ, ಮೂರುದಿನಗಳ ಮತಪ್ರಭಾಷಣ ಹಾಗೂ ಭಾವಕ್ಯತಾ ಸಮಾವೇಶ ಎಪ್ರಿಲ್ 12,13,14 ರಂದು ನಡೆಯಲಿದೆ ಎಂದು ಜಿಲ್ಲಾ ಪರಿಷತ್ ಮಾಜಿ ಸದಸ್ಯ ಸಯ್ಯದ್ ಮೀರಾ ಸಾಹೇಬ್ ಹಾಗೂ ಎಜುಕೇಷನ್ ಸೆಂಟರ್‌ನ ಅಧ್ಯಕ್ಷ ಕೆ.ಅಬೂಬಕರ್ ಹೇಳಿದರು.

       

ಅವರು ಕಡಬದಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ ವರ್ಷಂಪ್ರತಿ ನಡೆಯುವ ವಾರ್ಷಿಕೋತ್ಸವ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭನೆಯಿಧ ನಡೆಯಲಿದೆ, ಎಪ್ರಿಲ್ 14 ರಂದು ಸ್ವಲಾತ್ ವಾರ್ಷಿಕೋತ್ಸವ ಹಾಗೂ ಖಾಝಿ ಸ್ವೀಕಾರ ಮತ್ತು ಅಗಲಿದ ಸುನ್ನತ್ ಜಮಾಅತ್‌ನ ಉಲಮಾ ನೇತಾರರ ಅನುಸ್ಮರಣೆ ಕಾರ್ಯಕ್ರಮ ಕೂರತ್ ಜುಮ್ಮಾ ಮಸೀದಿಯ ಫಝಲ್ ಪೂಕೋಯ ತಂಙಳ್ ವೇದಿಕೆಯಲ್ಲಿ ನಡೆಯಲಿದ್ದು ಸಂಜೆ ಭಾವೈಕ್ಯತಾ ಸಮಾವೇಶ ನಡೆಯಲಿದೆ ಎಂದು ಹೇಳಿದರು. ಭಾವಕ್ಯತಾ ಸಮಾವೇಶದಲ್ಲಿ ಅಸ್ಸಯ್ಯಿದ್ ಫಝಲ್ ಕೋಯಮ್ಮ ತಂಙಳ್ ಅಲ್ ಬುಖಾರಿ ಕೂರತ್ ಅಧ್ಯಕ್ಷತೆ ವಹಿಸಿ ದುಃವಾಶೀರ್ವಚನ ನೀಡಲಿದ್ದಾರೆ. ಅಖಿಲ ಭಾರತ ಸುನ್ನಿ ವಿದ್ವಾಂಸರಾದ ಸುಲ್ತಾನುಲ್ ಉಲಮಾ ಎ.ಪಿ ಉಸ್ತಾದ್ ಕಾಂತಪುರಂ, ಅಸ್ಸಯ್ಯಿದ್ ಕೆ.ಎಸ್ ಆಟಿಕೋಯ ತಂಙಳ್ ಕುಂಬೋಲ್, ಉಡುಪಿ ಖಾಝಿ ಬೇಕಲ್ ಉಸ್ತಾದ್ ಮುಖ್ಯ ಪ್ರಭಾಷಣ ಮಾಡಲಿದ್ದಾರೆ. ಕೊಲ್ಲಂನ ಡಾ ಫಾರೂಕ್ ನಈಮಿ , ಮಂಜನಾಡಿ ಅಬ್ಬಾಸ್ ಉಸ್ತಾದ್, ಕರ್ನಾಟಕ ರಾಜ್ಯ ಎಸ್‌ಎಸ್‌ಎಫ್ ಅಧ್ಯಕ್ಷರಾದ ಎನ್.ಕೆ.ಎಂ ಶಾಫಿ ಸಅದಿ ಬೆಂಗಳೂರು, ಎಮ್ಮೆಸ್ಸೆಂ ಅಬ್ದುರ್ರಶೀದ್ ಝೈನಿ ಕಾಮಿಲ್ ಸಖಾಫಿ ಪ್ರಭಾಷಣಗೈಯಲಿದ್ದಾರೆ. ಮಾಜಿ ಪ್ರಧಾನಿ ರಾಷ್ಟ್ರೀಯ ಜನತಾದಳದ ಅಧ್ಯಕ್ಷರಾದ ಎಸ್.ಡಿ ದೇವೇಗೌಡ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಕರ್ನಾಟಕ ಸರಕಾರದ ವಾರ್ತೆ ಮತ್ತು ಮೂಲಸೌಲಭ್ಯ, ಹಜ್ ಸಚಿವ ರೋಷನ್ ಬೇಗ್ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಲಿದ್ದಾರೆ. ಕರ್ನಾಟಕ ಸರಕಾರದ ವಕ್ಫ್ ಅಲ್ಪಸಂಖ್ಯಾತ ಕಲ್ಯಾಣ ಇಲಾಖಾ ಸಚಿವರಾದ ಕಮರುಲ್ ಇಸ್ಲಾಂ, ಅರಣ್ಯ ಜೀವಿಶಾಸ್ತ್ರ, ಪರಿಸರ ಇಲಾಖೆ ಹಾಗೂ ದ.ಕ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ರಮಾನಾಥ ರೈ, ಕರ್ನಾಟಕ ಸರಕಾರ ಯೋಜನಾ ಸಚಿವ ಸಿ.ಎಂ ಇಬ್ರಾಹೀಂ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಯು.ಟಿ ಖಾದರ್ , ಮಂಗಳೂರು ಲೋಕಸಭಾ ಸದಸ್ಯ ನಳೀನ್ ಕುಮಾರ್ ಕಟೀಲ್, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಸುಳ್ಯ ಶಾಸಕ ಎಸ್.ಅಂಗಾರ, ಉಡುಪಿ ಶಾಸಕ ಪ್ರಮೋದ್ ಮಧ್ವರಾಜ್, ಮಾಜಿ ಮಂತ್ರಿಗಳು ರಾಜ್ಯ ಜಾತ್ಯಾತೀತ ಜನತಾದಳದ ಉಪಾಧ್ಯಕ್ಷ ಅಮರನಾಥ್ ಶೆಟ್ಟಿ, ಜಿಲ್ಲಾ ಜಾತ್ಯಾತೀತ ಜನತಾದಳದ ಅಧ್ಯಕ್ಷ ಮಹಮ್ಮದ್ ಕುಂಞಿ, ಕರ್ನಾಟಕ ರಾಜ್ಯ ಮುಸ್ಲಿಂ ಜಮಾಅತ್ ಕೌನ್ಸಿಲ್ ಕಾರ್ಯದರ್ಶಿ ಹಾಜಿ ಸಯ್ಯದ್ ಮೀರಾ ಸಾಹೇಬ್, ಗಂಗಾವತಿ ಶಾಸಕ ಇಕ್ಬಾಲ್ ಅನ್ಸಾರಿ, ಜಿಲ್ಲಾ ವಕ್ಫ್ ಅಧ್ಯಕ್ಷ ಹಾಜಿ ಎಸ್.ಎಂ ರಶೀದ್, ಯೇನಪೋಯ ಹಾಜಿ ಅಬ್ದುಲ್ ಕುಂಞಿ ಮಂಗಳೂರು, ಸುಳ್ಯ ನಗರಸಭಾ ಸದಸ್ಯ ಶಂಶುದ್ದೀನ್ ಸುಳ್ಯ , ಬೆಳಂದೂರು ಗ್ರಾ.ಪಂ.ಉಪಾಧ್ಯಕ್ಷ ಹರೀಶ್, ಕುದ್ಮಾರು ಶಾಲಾ ನಿವೃತ್ತ ಮುಖ್ಯಗುರು ಎಸ್.ಎಂ.ಮದನ ಪೂಜಾರಿ ಸೇರಿದಂತೆ ಹಲವಾರು ಉಲಮಾ ಶಿರೋಮಣಿಗಳು ರಾಜಕೀಯ ನೇತಾರರು, ಧಾರ್ಮಿಕ ಮುಖಂಡರು ಭಾಗವಹಿಸಲಿದ್ದಾರೆ ಎಂದು ಹೇಳಿದರು. ಎ.12 ರಂದು ಸಂಜೆ ಕೂರತ್ ಎಎಫ್‌ಐಇಸಿ ಸ್ಥಾಪಕಾಧ್ಯಕ್ಷ ಈಸುಫ್ ಹಾಜಿ ಧ್ವಜಾರೋಹಣ ನೆರವೇರಿಸಲಿದ್ದಾರೆ. ಎಎಫ್‌ಐಇಸಿ ಯ ಚೇರ್‌ಮೆನ್ ಅಸ್ಸಯ್ಯದ್ ಫಝಲ್ ಕೋಯಮ್ಮ ತಂಙಳ್ ಅಲ್ ಬುಖಾರಿ ಕೂರತ್ ಇವರು ಅಧ್ಯಕ್ಷತೆ ವಹಿಸಿ ದುಃವಾಶೀರ್ವಚನ ನೀಡಲಿದ್ದಾರೆ. ಕಾರ್ಯಕ್ರಮವನ್ನು ಅಸ್ಸಯ್ಯದ್ ಕೆ.ಎಸ್ ಆಟಕೋಯ ತಂಙಳ್ ಕುಂಬೋಲ್ ಉದ್ಘಾಟಿಸಲಿದ್ದಾರೆ. ಸುರಿಬೈಲ್‌ನ ದಾರುಲ್ ಅಶ್ ಅರಿಯ್ಯ ಪ್ರಿನ್ಸಿಪಾಲ್ ಪಿ.ಎ ಅಬ್ದುರ್ರಹ್ಮಾನ್ ಮುಸ್ಲಿಯಾರ್ ಜುನೈದಿ ಅಲ್ ಬಾಖವಿ ಪ್ರಭಾಷಣ ಗೈಯಲಿದ್ದು, ಗುರುವಾಯನಕೆರೆಯ ಅಸ್ಸಯ್ಯದ್ ಅಬ್ದುರ್ರಹ್ಮಾನ್ ಸಾದಾತ್ ತಂಙಳ್ ಬಾಅಲವಿ ಭಾಗವಹಿಸಲಿದ್ದಾರೆ. ಎ.13 ರಂದು ಅಸ್ಸಯ್ಯಿದ್ ಹಾಮಿದ್ ಇಂಬಿಚ್ಚಿಕೋಯ ತಂಙಳ್ ಕೊಲಾಂಡಿ ದುಃವಾಶೀರ್ವಚನ ನೀಡಲಿದ್ದು ಡಾಫಾರೂಕ್ ನಈಮಿ ಕೊಲ್ಲಂ ಮುಖ್ಯ ಪ್ರಭಾಷಣ ಗೈಲಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಪತ್ರಿಕಾ ಗೋಷ್ಟಿಯಲ್ಲಿ ಅಲ್ ಫಝಲ್ ಇಸ್ಲಾಮಿಕ್ ಎಜುಕೇಶನ್ ಸೆಂಟರ್‌ನ ಕಾರ್ಯದರ್ಶಿ ಸುಲೈಮಾನ್ ಅನ್ಯಾಡಿ, ಸದರ್ ಉಸ್ತಾದ್ ಅಬ್ದುಲ್ ಲತೀಫ್ ಮುಸ್ಲಿಯಾರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News