ಮಂಗಳೂರು: ಕೊಲ್ಲಂ ಅಗ್ನಿ ದುರಂತ: ಎಸ್ಕೆಎಸ್ಸೆಸ್ಸೆಫ್ ಸಂತಾಪ

Update: 2016-04-11 14:33 GMT

ಮಂಗಳೂರು: ಕೇರಳದ ಕೊಲ್ಲಂ ಜಿಲ್ಲೆಯ ಪರವೂರಿನ ಪುಟ್ಟಿಂಗಳ್ ಮೂಕಾಂಬಿಕ ದೇವಸ್ಥಾದಲ್ಲಿ ನಡೆದಿರುವ ಅಗ್ನಿ ದುರಂತಕ್ಕೆ ಎಸ್.ಕೆ.ಎಸ್.ಎಸ್.ಎಫ್ ಕರ್ನಾಟಕ ರಾಜ್ಯ ಸಮಿತಿ ಸಂತಾಪ ಸೂಚಿಸಿದೆ. ಇದೊಂದು ಆಘಾತಕಾರಿ ಘಟನೆಯಾಗಿದ್ದು ಮುಂದಿನ ದಿನಗಳಲ್ಲಿ ಇಂಥಹ ಟನೆಗಳು ಮರುಕಳಿಸದಂತೆ ಸಂಭಂಧಪಟ್ಟವರು ಜಾಗೃತಿ ವಹಿಸಬೇಕಿದೆ. ಮೃತ ಕುಟುಂಬಗಳಿಗೆ ಸಾಂತ್ವನ ಹೇಳುವುದರೊಂದಿಗೆ ಸರಕಾರವು ಸೂಕ್ತ ಪರಿಹಾರವನ್ನೂ ನೀಡಬೇಕು. ಕೇವಲ ಲಕ್ಷ ರೂ.ಳನ್ನು ಘೋಷಿಸಿದರೆ ಸಾಲದು, ಬದಲಾಗಿ ಸಂತ್ರಸ್ತರ ಮಕ್ಕಳಿಗೆ ಶಿಕ್ಷಣ, ಉದ್ಯೋಗ ನೀಡಿ ಸಬಲೀಕರಣಗೊಳಿಸುವತ್ತ ಗಮನ ಹರಿಸಿಸಬೇಕು ಎಂದು ಆಗ್ರಹಿಸಿದೆ.
ದುರಂತ ನಡೆದ ಸ್ಥಳದಲ್ಲಿ ಪರಿಹಾರ ಕಾರ್ಯದ ಸಂದರ್ಭದಲ್ಲಿ ಜಾತಿಭೇದ ಮರೆತು ಎಲ್ಲರೂ ಸಹಕರಿಸಿದ್ದು, ಜೊತೆಗೆ ಎಸ್ಕೆಎಸ್ಸೆಸ್ಸೆಫ್ ಕೇರಳ ರಾಜ್ಯ ಸಮಿತಿಯ ವಿಖಾಯ ಸ್ವಯಂ ಸೇವಕರ ತಂಡವು ಸಲ್ಲಿಸಿದ ತುರ್ತುಸೇವೆ ಹಾಗೂ ರಕ್ತದಾನವೂ ಶ್ಲಾಘನೀಯ ಎಂದು ಎಸ್ಕೆಎಸ್ಸೆಸ್ಸೆಫ್ ಕರ್ನಾಟಕ ರಾಜ್ಯಾಧ್ಯಕ್ಷ ಅನೀಸ್ ಕೌಸರಿ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News