ಉಳ್ಳಾಲ : ಹೊನಲು ಬೆಳಕಿನ ಮಾಸ್ಟರ್ಸ್‌ ಕಬಡ್ಡಿ ಕ್ರೀಡಾ ಸಂಗಮ

Update: 2016-04-11 14:49 GMT

ಉಳ್ಳಾಲ,ಎ.11: ತೊಕ್ಕೊಟ್ಟು ಕಾಪಿಕಾಡಿನ ಉಮಾಮಹೇಶ್ವರೀ ಕಬಡ್ಡಿ ಅಕಾಡೆಮಿ (ಸುಕಾ) ಆಶ್ರಯದಲ್ಲಿ ಕಬಡ್ಡಿ ಪೋಷಕ ಕೀರ್ತಿಶೇಷ ಎ. ಜಯಣ್ಣ ಸ್ಮರಣಾರ್ಥ ಕೊಲ್ಯ ಶ್ರೀ ನಾಗಬ್ರಹ್ಮಸ್ಥಾನದ ಬಳಿಯ ಮೈದಾನದಲ್ಲಿ ನಡೆದ ಹೊನಲು ಬೆಳಕಿನ ಮಾಸ್ಟರ್ಸ್‌ ಕಬಡ್ಡಿ ಕ್ರೀಡಾ ಸಂಗಮದಲ್ಲಿ ಪುತ್ತೂರಿನ ಸಿಝ್ಲರ್ಸ್‌ ತಂಡ ಕೇರಳ ನೀಲೇಶ್ವರದ ವೀರಸಂಘಮ್ ತಂಡವನ್ನು ಸೋಲಿಸಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು. ಕಾಪಿಕಾಡು ತೊಕ್ಕೊಟ್ಟಿನ ಶ್ರೀ ಉಮಾಮಹೇಶ್ವರೀ ಕಬಡ್ಡಿ ಅಕಾಡೆಮಿ (ಸುಕಾ) ಇದರ ಆಶ್ರಯದಲ್ಲಿ ಸುಕಾ ಅಧ್ಯಕ್ಷ ಎ.ಜೆ. ಶೇಖರ್ ನೇತೃತ್ವದಲ್ಲಿ ದಿವಂಗತ ಎ. ಜಯಣ್ಣ ಸ್ಮರಣಾರ್ಥ ಹೊನಲು ಬೆಳಕಿನ ಮಾಸ್ಟರ್ಸ್‌ ಕಬಡ್ಡಿ ಕ್ರೀಡಾ ಸಂಗಮ -2016 ಶನಿವಾರ ರಾತ್ರಿ ನಾಗಬ್ರಹ್ಮ ದೇವಸ್ಥಾನದ ಬಳಿಯ ಕ್ರೀಡಾಂಗಣದಲ್ಲಿ ಉದ್ಘಾಟನೆಗೊಂಡಿತು. ಪಂದ್ಯಾಟಕ್ಕೆ ಕುಂಟಾರು ರವೀಶ್ ತಂತ್ರಿ ಚಾಲನೆ ನೀಡಿದ್ದರು.  ಪಂದ್ಯಾಟದಲ್ಲಿ ತೃತೀಯ ಸ್ಥಾನವನ್ನು ಶಿವಾಜಿ ತೊಕ್ಕೊಟ್ಟು ಪಡೆದರೆ, ನಾಲ್ಕನೇ ಸ್ಥಾನವನ್ನು ಉಳ್ಳಾಲ್ ಸ್ಪೋರ್ಟಿಂಗ್ ಕ್ಲಬ್ ಪಡೆದುಕೊಂಡಿತು.

ಮಾಸ್ಟರ್ಸ್‌ ಕಬಡ್ಡಿ ಪಂದ್ಯಾಟದಲ್ಲಿ ಕೇರಳ, ದ.ಕ.ಜಿಲ್ಲೆ ಮತ್ತು ಉಡುಪಿ ಜಿಲ್ಲೆಯ ಆಯ್ದ 18 ತಂಡಗಳು ಭಾಗವಹಿಸಿದ್ದು, ಪಂದ್ಯಾಟದಲ್ಲಿ ಸಿಝ್ಲರ್ ಪುತ್ತೂರು ತಂಡದ ಸುರೇಂದ್ರ ಉತ್ತಮ ದಾಳಿಗಾರ, ಉತ್ತಮ ಹಿಡಿತಗಾರ ಪ್ರಶಸ್ತಿಯನ್ನು ರಾಧಾಕೃಷ್ಣ ಪುತ್ತೂರು ಪಡೆದುಕೊಂಡರೆ ಕೇರಳದ ವೀರ ಸಂಘಮ್ ನೀಲೇಶ್ವರ ಸುಧಾಕರ್ ಸವ್ಯಸಾಚಿ ಪ್ರಶಸ್ತಿಯನ್ನು ಪಡೆದುಕೊಂಡರು. ಕಳ್ಳಿಗೆ ಪಚ್ಚಿನಡ್ಕದ ಶುಭ ಬೀಡೀಸ್ ಮಾಲಕ ಸೇಸಪ್ಪ ಕೋಟ್ಯಾನ್ ಕ್ರೀಡಾಂಗಣವನ್ನು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಶ್ರೀ ಉಮಾಮಹೇಶ್ವರೀ ಕಬಡ್ಡಿ ಅಕಾಡೆಮಿ ಚೇಯರ್‌ಮೆನ್ ಎ.ಜೆ, ಶೇಖರ್, ಮಂಗಳೂರು ವಿಶ್ವವಿದ್ಯಾನಿಲಯದ ದೈಹಿಕ ಹಾಗೂ ಕ್ರೀಡಾ ನಿರ್ದೇಶಕ ಕೆ.ವಿ. ಶೆಣೈ, ಅಂತರ್‌ರಾಷ್ಟ್ರೀಯ ಕ್ರೀಡಾಪಟು, ಒಲಿಂಪಿಯನ್ ಸಹನಾ ಕುಮಾರಿ, ಕೊಲ್ಯ ಶ್ರೀ ನಾಗಬ್ರಹ್ಮ ದೇವಸ್ಥಾನದ ಧರ್ಮದರ್ಶಿ ಭಾಸ್ಕರ ಐತಾಳ್, ಕ್ರೀಡಾ ಭಾರತಿ ಅಧ್ಯಕ್ಷ ಚಂದ್ರಶೇಖರ್ ರೈ , ದ.ಕ. ಜಿಲ್ಲಾ ಅಮೆಚೂರು ಕಬಡ್ಡಿ ಅಸೋಸಿಯೇಶನ್‌ನ ಉಪಾಧ್ಯಕ್ಷ ಕೆ.ಟಿ ಸುವರ್ಣ, ಖ್ಯಾತ ಫುಟ್‌ಬಾಲ್ ಆಟಗಾರ ಪಿ.ವಿ. ಅನಿಲ್, ಉದ್ಯಮಿ ಪಿ. ನಾರಾಯಣ್, ಹಿರಿಯರಾದ ಸೀತಾರಾಮ ಬಂಗೇರ, ಚಾಮರಾಜ ನಗರ ವೃತ್ತ ನಿರೀಕ್ಷಕ ಪ್ರಮೋದ್ ಕುಮಾರ್, ಉಳ್ಳಾಲ ನಗರಸಭಾ ಅಧ್ಯಕ್ಷ ಮೊಹಮ್ಮದ್ ಕುಂಇಮೋನು ಉಪಸ್ಥಿತರಿದ್ದರು.  ಸಮಾರೋಪ ಕಾರ್ಯಕ್ರಮದಲ್ಲಿ ಶ್ರೀ ಉಮಾಮಹೇಶ್ವರೀ ಕಬಡ್ಡಿ ಅಕಾಡೆಮಿಯ(ಸುಕಾ) ಚೇಯರ್‌ಮೆನ್ ಎ.ಜೆ. ಶೇಖರ್ ಮತ್ತು ಅಧ್ಯಕ್ಷ ಗೋಪಿನಾಥ್ ಕಾಪಿಕಾಡು ವಿಜೇತರಿಗೆ ಪ್ರಶಸ್ತಿಯನ್ನು ವಿತರಿಸಿದರು. ಈ ಸಂದರ್ಭದಲ್ಲಿ ಸುಕಾದ ಹಸನಬ್ಬ ಪುತ್ತು, ಗೌರವ ಸಲಹೆಗಾರ ರಘುರಾಮ ಶೆಟ್ಟಿ, ಪ್ರಧಾನ ಕಾರ್ಯದರ್ಶಿಗಳಾದ ಸುನಿಲ್ ರೈ, ಸಂತೋಷ್ ಕಾಪಿಕಾಡು, ಆಬ್ದುಲ್ ರಹಿಮಾನ್, ಸಂಘಟನಾ ಕಾರ್ಯದರ್ಶಿ ಗಣೇಶ್ ಕಾಪಿಕಾಡು, ಆಯೋಜನಾ ಸಮಿತಿಯ ಉದಯಶಂಕರ್, ನವೀನ್ ಚಂದ್ರ ಕಾಪಿಕಾಡು, ಶರತ್ ಗಟ್ಟಿ, ಸುಜೀರ್ ಶೆಟ್ಟಿ, ಸಚಿನ್ ಮೋರೆ, ಹರೀಶ್ ಆಂಬ್ಲಮೊಗರು ಉಪಸ್ಥಿತರಿದ್ದರು. ಕಬಡ್ಡಿ ಪಂದ್ಯಾಟದಲ್ಲಿ ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಜಿಲ್ಲೆಯಿಂದ 20 ತಂಡಗಳು ಭಾಗವಹಿಸಿದ್ದವು.  ಪ್ರವೀಣ್ ಎಸ್. ಕುಂಪಲ ಮತ್ತು ಪ್ರವೀಣ್ ಬಸ್ತಿ ಕಾರ್ಯಕ್ರಮ ನಿರ್ವಹಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News